ಡಾ. ಶಶಿಕಲಾ ಕಾಮೋಜಿ ‘ಕರೋನಾ ಕವನಗಳು’ ಸಾಹಿತ್ಯ ಶ್ರೀ ಪ್ರಶಸ್ತಿಗೆ ಆಯ್ಕೆ

Must Read

ಗೋಕಾಕ: ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಸ್ಥೆಯು ಕೊಡಮಾಡುವ ೨೦೨೪ನೇ ಸಾಲಿನ ರಾಜ್ಯಮಟ್ಟದ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿಗೆ ಗೋಕಾಕದ ವೈದ್ಯೆ ಡಾ. ಶಶಿಕಲಾ ಕಾಮೋಜಿ ಅವರ ‘ಕರೋನಾ ಕವನಗಳು’ ಚೊಚ್ಚಲ ಕೃತಿಯು ಆಯ್ಕೆಯಾಗಿದ್ದು, ಕಾವ್ಯ ಪ್ರಕಾರದಲ್ಲಿ ಪ್ರಥಮ ಸ್ಥಾನದಲ್ಲಿ ಆಯ್ಕೆಯಾಗಿದೆ.

ಇದೇ ಡಿ. ೨೭ರಂದು ಬೆಳಗಾವಿಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಮೋಜಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಆರ್.ಬಿ. ಬನಶಂಕರಿ ಅವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಶಶಿಕಲಾ ಕಾಮೋಜಿ ಅವರು ಈಗಾಗಲೇ ಬಿಡಿ ಲೇಖನಗಳು, ಹರಟೆ, ಪ್ರವಾಸ ಕಥನ, ಕಥೆ, ಕವನಗಳನ್ನು ರಚನೆಯಲ್ಲಿ ಸಾಹಿತ್ಯ ವಲಯದಲ್ಲಿ ಅಪಾರವಾಗಿ ಗುರುತಿಸಿಕೊಂಡಿದ್ದಾರೆ.

ಶಶಿಕಲಾ ಕಾಮೋಜಿ ಅವರನ್ನು ಜಾನಪದ ವಿದ್ವಾಂಸ ಸಿ.ಕೆ. ನಾವಲಗಿ ಅವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

Latest News

ಗೌರವ -ಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ

ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು...

More Articles Like This

error: Content is protected !!
Join WhatsApp Group