ಡಾ. ಮಹಾಂತೇಶ ಬಿರಾದಾರ ಅವರಿಗೆ ಸನ್ಮಾನ

Must Read

ಸಿಂದಗಿ: ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ್ ಇವರ ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಶರಣ ಚಿಂತಕರಾದ ಡಾ.ಮಹಾಂತೇಶ ಬಿರಾದಾರ ಹತ್ತು ದಿನಗಳ ಲಂಡನ್ ಪ್ರವಾಸಗೈದು ವಾಪಸಾದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.

ಮಹಾಂತೇಶ ಅವರು ಅಲ್ಲಿ ನೆಲೆಸಿರುವ ಭಾರತೀಯರಿಗೆ ಡಿಸೆಂಬರ್ ತಿಂಗಳಲ್ಲಿ ವಿಜಯಪುರ ನಗರದಲ್ಲಿ ನಡೆಯಲಿರುವ ವೃಕ್ಷದಾತ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ, ಲಂಡನಿನಲ್ಲಿ ಕೃಷಿ, ಶಿಕ್ಷಣ, ವೈದ್ಯಕೀಯ ಸೇರಿದಂತೆ ವಿವಿಧ ಬಗೆಯ ಅಧ್ಯಯನ ಯಶಸ್ವಿಯಾಗಿ ಮುಗಿಸಿ ಮರಳಿ ವಿಜಯಪುರ ಜಿಲ್ಲೆಗೆ ಆಗಮಿಸಿದ್ದಾರೆ.

ತಾಲ್ಲೂಕಿನ ಬೋರಗಿ ಗ್ರಾಮದ ನಬಿರೋಶನ ಪ್ರಕಾಶನ ವತಿಯಿಂದ ಆರಕ್ಷಕ ಮೌಲಾಲಿ ಆಲಗೂರ ಡಾ. ಮಹಾಂತೇಶ ಅವರನ್ನು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಆರಕ್ಷಕರಾದ ಮಹೇಶ ಕೋಟಾರಗಸ್ತಿ, ತುಕಾರಾಮ ಬಾಲವ್ವಗೋಳ, ಅಂಬರೀಶ್ ನಾಗಾವಿ, ಪ್ರಥಮ ದರ್ಜೆ ಗುತ್ತಿಗೆದಾರರದ ಹಣಮಂತ ಚಿಂಚಲಿ ಜೊತೆಗಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group