ಡಾ.ಎಸ್.ರಾಮಮೂರ್ತಿ ಶರ್ಮ ಲಕ್ಕೂರು ಅವರ ‘ಸೊಬಗು’ ಕವನ ಸಂಕಲನ ಲೋಕಾರ್ಪಣೆ

Must Read

ಬೆಂಗಳೂರಿನ ಹನುಮಂತನಗರದ ಶ್ರೀ ಬಾಲಾಜಿ ಪದವಿ ಕಾಲೇಜಿನಲ್ಲಿ ಕವಿ ಡಾ.ಎಸ್.ರಾಮಮೂರ್ತಿಶರ್ಮ ಲಕ್ಕೂರು ಅವರ ‘ಸೊಬಗು’ ಕವನ ಸಂಕಲನವನ್ನು ಸಾಹಿತಿ ಡಾ.ಎಸ್.ಹೆಚ್.ಭುವನೇಶ್ವರ್ ಲೋಕಾರ್ಪಣೆಗೊಳಿಸಿದರು.

ನಂತರ ಅವರು ಮಾತನಾಡುತ್ತ, ಸಾಹಿತಿಗಳಲ್ಲಿ ಪ್ರತಿಭೆ – ಪಾಂಡಿತ್ಯವಿರುತ್ತದೆ ಅದನ್ನು  ಪ್ರೋತ್ಸಾಹಿಸುವ ಗುಣವನ್ನು ಸಹೃದಯರು ಮಾಡಿದಾಗ ಅವರು ಇನ್ನು ಹೆಚ್ಚಿನ ಸಾಹಿತ್ಯ ಕೃಷಿ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. 

ಶಂಕರ ಚರಿತಂ ಮೂಲಕ ಆದಿ ಶಂಕರರ ಜೀವನಗಾಥೆಯನ್ನು ಸಂಕ್ಷಿಪ್ತವಾಗಿ ಹಾಗು ಬೇಲೂರಿನ ಶಿಲ್ಪಕಲಾ ಸೊಬಗಿನ ವರ್ಣನೆಯನ್ನು ಖಂಡಕಾವ್ಯದ ರೂಪದಲ್ಲಿ ಬರೆದು ಲೌಕಿಕ ಮತ್ತು ಆಧ್ಯಾತ್ಮಿಕ ಎರಡು ಪ್ರಕಾರಗಳಲ್ಲೂ ತಮ್ಮ ವಿಶಿಷ್ಟವಾದ ಛಾಪನ್ನು ರೂಢಿಸಿಕೊಂಡಿದ್ದಾರೆ. ಸರಳತೆ ಮತ್ತು ಸೌಂದರ್ಯದಿಂದ  ಮೆರೆಯುವ ಪುಷ್ಟ ಸಂಕುಲದಂತೆ ಈ ಕವನ ಸಂಕಲನದಲ್ಲಿ ಗೋಚರಿಸುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಡಾ.ಆರ್.ವಾದಿರಾಜು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎ.ಸತ್ಯವತಿ ಕವನ ಸಂಕಲನದ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ , ಕಾಲೇಜಿನ ಪ್ರಾಂಶುಪಾಲ ಪ್ರೋ. ಉಮೇಶ್ ದಕ್ಷಿಣಾಮೂರ್ತಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group