ಡಾ. ಸಚಿನ ಮೂಡಲಗಿ ಕಣ್ಣಿನ ನೂತನ ಆಸ್ಪತ್ರೆಯ ಪ್ರಾರಂಭ

0
399

ಮೂಡಲಗಿ: ಇಲ್ಲಿಯ ಡಾ. ಸಚಿನ ಮೂಡಲಗಿ ಕಣ್ಣಿನ ನೂತನ ಆಸ್ಪತ್ರೆಯು ಕಾಲೇಜು ರಸ್ತೆಯಲ್ಲಿ ನಿಂಗಪ್ಪ ಪಿರೋಜಿ ಅವರ ಕಟ್ಟಡದಲ್ಲಿ ಪ್ರಾರಂಭಗೊಂಡಿತು.

ಮೂಡಲಗಿ ಶಿವಬೋಧರಂಗಮಠದ ಪೀಠಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ಆಸ್ಪತ್ರೆಯ ಸೇವೆಗೆ ಚಾಲನೆ ನೀಡಿ ಮಾತನಾಡಿ,‘ಮನುಷ್ಯನಿಗೆ ಕಣ್ಣುಗಳು ಅತ್ಯಂತ ಮಹತ್ವವಾಗಿವೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಬದುಕಿನಲ್ಲಿ ಒಳ್ಳೆಯ ದೃಷ್ಟಿ ಇಟ್ಟುಕೊಂಡು ಬದುಕಬೇಕು. ಮನುಷ್ಯನಿಗೆ ಹೊರ ಮತ್ತು ಒಳ ದೃಷ್ಟಿ ಎರಡೂ ಉತ್ತಮವಾಗಿದ್ದರೆ ಜೀವನವು ಸುಂದರವಾಗಿ ಕಾಣುತ್ತದೆ’ ಎಂದರು.

ಮೂಡಲಗಿಯಲ್ಲಿ ಸುಸಜ್ಜಿತವಾದ ಡಾ. ಸಚಿನ ಮೂಡಲಗಿ ಕಣ್ಣಿನ ಆಸ್ಪತ್ರೆಯು ಪ್ರಾರಂಭಗೊಳ್ಳುವುದರ ಮೂಲಕ ಮೂಡಲಗಿ ಭಾಗದ ಜನರಿಗೆ ಅನುಕೂಲವಾಗಲಿದೆ. ಕಣ್ಣಿನ ಕಾಯಲೆಗಳ ನಿವಾರಣೆಗೆ ಮೂಡಲಗಿಯಲ್ಲಿ ಸುಸಜ್ಜಿತವಾದ ಆಸ್ಪತ್ರೆಯ ಸೌಲಭ್ಯ ದೊರೆತಿರುವುದು ಸ್ತುತ್ಯವಾಗಿದೆ ಎಂದರು.

ಕಣ್ಣಿನ ವೈದ್ಯ ಡಾ. ಸಚಿನ ಟಿ. ಪ್ರಾಸ್ತಾವಿಕ ಮಾತನಾಡಿ, ಆಸ್ಪತ್ರೆಯಲ್ಲಿ ಹೊಲಿಗೆ ರಹಿತ ಕಣ್ಣಿನ ಶಸ್ತ್ರ ಚಿಕಿತ್ಸೆ, ಕಾಚ ಬಿಂದು ಚಿಕಿತ್ಸೆ, ದೃಷ್ಟಿ ದೋಷ ಪರಿಹಾರ, ಮಧುಮೇಹ ಕಣ್ಣಿನ ಪರದೆಯ ಬಾಧೆಯ ಚಿಕಿತ್ಸೆ, ಕಾರ್ನಿಯಾ ಚಿಕಿತ್ಸೆ, ಕಣ್ಣಿನ ರೆಪ್ಪೆಯ ವಿರೂಪತೆ ಚಿಕಿತ್ಸೆ, ಕಡಿಮೆ ದೃಷ್ಟಿಯ ಚಿಕಿತ್ಸೆ ಸೇರಿದಂತೆ ಕಂಪ್ಯೂಟರ್ ಆದಾರಿತ ಅತ್ಯಾಧುನಿಕ ಚಿಕಿತ್ಸೆಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಡಾ. ಸಚಿನ ಮೂಡಲಗಿ ಕಣ್ಣಿನ ನೂತನ ಆಸ್ಪತ್ರೆಯ ಉದ್ಘಾಟನೆಯನ್ನು ದತ್ತಾತ್ರೇಯಬೋಧ ಸ್ವಾಮೀಜಿ ಮತ್ತು ಶ್ರೀಧರಬೋಧ ಸ್ವಾಮೀಜಿ ಅವರು ನೆರವೇರಿಸಿದರು

ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಸಮುದಾಯ ಅರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಪರಿವಾರದ ಸಹಯೋಗದಲ್ಲಿ ಆಸ್ಪತ್ರೆಯ ಪ್ರಾರಂಭೋತ್ಸವ ಅಂಗವಾಗಿ ಉಚಿತವಾಗಿ ಕಣ್ಣಿನ ತಪಾಸಣೆಯನ್ನು ಮಾಡಿದರು.

ಡಾ. ಪ್ರಕಾಶ ನೇಸೂರ, ಡಾ. ಎಸ್.ಎಸ್. ಪಾಟೀಲ, ಡಾ. ಕಂಕಣವಾಡಿ, ಡಾ. ಸಂಜಯ ಶಿಂಧಿಹಟ್ಟಿ, ಡಾ. ಅನಿಲ ಪಾಟೀಲ, ಡಾ. ಅಲ್ಲಾನೂರ ಬಾಗವಾನ, ಡಾ. ಮಂಜುನಾಥ ನೇಸೂರ, ಡಾ. ತಿಮ್ಮಣ್ಣ ಗಿರಡ್ಡಿ, ಡಾ. ಬಿ.ವೈ. ಮುಳವಾಡ, ಡಾ. ಬಿ.ಬಿ. ಅವರಾದಿ, ಡಾ. ಮಹೇಶ ಕುಲಗೋಡ, ಡಾ. ಶ್ರೀನಿವಾಸ ಕನಕರಡ್ಡಿ, ಡಾ. ಪ್ರಶಾಂತ ಬಾಬಣ್ಣವರ, ಡಾ. ಕಡಾಡಿ, ಡಾ. ಬೆಳವಿ, ಡಾ. ಪ್ರಕಾಶ ನಿಡಗುಂದಿ, ಡಾ. ರಾಜೇಂದ್ರ ಗಿರಡ್ಡಿ, ಶಬ್ಬಿರ ಡಾಂಗೆ, ಎನ್.ಟಿ. ಪಿರೋಜಿ, ಅಜಿಜ್ ಡಾಂಗೆ, ಜಯಾನಂದ ಪಾಟೀಲ, ಸಂತೋಷ ಸೋನವಾಲಕರ, ಶ್ರೀಶೈಲ್ ಲೋಕನ್ನವರ, ವೆಂಕಟೇಶ ಸೋನವಾಲಕರ, ಪುಲಕೇಶ ಸೋನವಾಲಕರ, ಮಹಾಂತೇಶ ಹೊಸುರ, ಬಾಲಶೇಖರ ಬಂದಿ, ಶಿವಾನಂದ ಗಾಡವಿ, ಸಂಗಮೇಶ ಕೌಜಲಗಿ ಇದ್ದರು.

ಡಾ. ಗಂಗಾ ಸಚಿನ ಟಿ. ಸ್ವಾಗತಿಸಿ, ನಿರೂಪಿಸಿದರು.