ಕೆಸಿಡಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಡಾ. ಶಿವಾನಂದ ಚೌಗಲಾ

Must Read

ಧಾರವಾಡ: ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾಗಿ ಕರ್ನಾನಾಟಕ ವಿಜ್ಞಾನ ಕಾಲೇಜಿನ ಭೂ-ಗರ್ಭಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಶಿವಾನಂದ ಚೌಗಲಾ ಅವರು ಡಾ.ಎ.ಎಸ್ ಬೆಲ್ಲದ ಅವರಿಂದ ಅಧಿಕಾರ ವಹಿಸಿಕೊಂಡರು.

ಡಾ.ಎಸ್ ಬೆಲ್ಲದ ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಸೇವಾ ಹಿರಿತನದ ಆಧಾರದ ಅನುಗುಣವಾಗಿ ಡಾ. ಶಿವಾನಂದ ಚೌಗಲಾ ಅವರು ನಿರ್ಗಮಿತ ಪ್ರಾಚಾರ್ಯರಾದ ಡಾ.ಎ.ಎಸ್ ಬೆಲ್ಲದ ಅವರಿಂದ ಇಂದು ಸಂಜೆ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡರು.

ಈ ಸಂದರ್ಭದಲ್ಲಿ ಡಾ. ಶಿವಾನಂದ ಚೌಗಲಾ ಮಾತನಾಡಿ ಐತಿಹಾಸಿಕ ಭವ್ಯ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದ ಈ ಕಾಲೇಜಿನ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿರುವುದು ಸಂತಸವಾಗಿದೆ.

ಆಡಳಿತಾತ್ಮಕ ವಾಗಿ ಇಲ್ಲಿನ ಶಿಕ್ಷಕ ಮತ್ತು ಶಿಕ್ಷಕೇತರ ಸಹಕಾರ ನೀಡಬೇಕು. ಹೊಸ ಶಿಕ್ಷಣ ನೀತಿಯ ಅನುಗುಣವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಹೊಸ ಶಿಕ್ಷಣ ನೀತಿಯ ಆಶಯಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ನ್ಯಾಕ್ ಗ್ರೇಡ ಹೆಚ್ಚುವಲ್ಲಿ ಸಂಶೋಧನೆಗೆ ಇತರೆ ಶೈಕ್ಷಣಿಕ ಚಟುವಟಿಕಕೆಗೆ ಹೆಚ್ಚು‌ ಒತ್ತು ನೀಡುತ್ತೆನೆ ಎಂದರು.

ಇದೆ ಸಂದರ್ಭದಲ್ಲಿ ಡಾ.ಎ.ಎಸ್.ಬೆಲ್ಲದ ಮಾತನಾಡಿ ಕಳೆದ 17 ತಿಂಗಳ ಅವಧಿಯಲ್ಲಿ ನಾನು ಈ ಪ್ರತಿಷ್ಠಿತ ಕಾಲೇಜಿನ ಪ್ರಥಮ ಮಹಿಳಾ ಪ್ರಾಚಾರ್ಯರಾಗಿ ಆಡಳಿತ ನಡೆಸಿರುವದು ನನಗೆ ಸಂತಸವಾಗಿದ್ದು, ನನ್ನ ಆಸೆಯಂತೆ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕಿಯಾಗಿ ನಾನು ಕಾಲೇಜಿನ ಹೊಸ ಪ್ರಾಣಿಶಾಸ್ತ್ರ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದ್ದು ನನಗೆ ಬಹಳ ತೃಪ್ತಿ ಭಾವ ಮೂಡಿಸಿದೆ ಎಂದರು.

ಈ‌ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ.ಎಚ್.ನಾಗರಾಜ್ ಮಾತನಾಡಿ ರಾಜ್ಯದಲ್ಲ್ಲಿಯೇ ಕರ್ನಾಟಕ ಕಾಲೇಜು ಮಾದರಿ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಈ‌ ನಿಟ್ಟಿನಲ್ಲಿ ಅಧಿಕಾರ ವಹಿಸಿಕೊಂಡ ನೂತನ ಪ್ರಾಚಾರ್ಯರು ಕಾಲೇಜಿನ ಗ್ರೇಡ್ ಹೆಚ್ಚಿಸುವಲ್ಲಿ ಅದರ ಶ್ರೇಯಸ್ಸು ಅಭಿವೃದ್ದಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ.ಸಿ.ಎಸ್.ಮೂಲಿಮನಿ, ಪ್ರಾಧ್ಯಾಪಕರಾದ ಡಾ.ಜಗದೀಶ್ ಗುಡಗೂರ್, ಡಾ. ಆರ್.ವಾಯ್ ಬೂದಿಹಾಳ್, ಡಾ. ಎನ್.ಮಂಜುನಾಥ, ಡಾ.ಜಿ.ಎಚ್ ಮಳಿಮಠ, ಡಾ.ಬಿ.ಎಸ್ ಗಿರಿಯಪ್ಪಗೋಳ್, ಡಾ.ಜಿ.ಎಲ್, ಡಾ.ಓ.ಕೊಟ್ರೇಶ್, ಕಲ್ಯಾಣ, ಡಾ ಅರುಣಾ ಹಳ್ಳಕೇರಿ, ಡಾ.ಅಶೋಕ ಐನಾಪುರ, ಡಾ.ಎಲ್.ಟಿ.ನಾಯಕ, ಡಾ.ಕಿರಣ ಕೋಲ್ಕಾರ್, ಡಾ.ಎಸ್.ಡಿ.ದುಮ್ಮವಾಡ, ಡಾ.ಜಿ.ಎಮ್ ಕಮ್ಮೂರ, ಡಾ.ಕೇ ಕೋಟ್ರೇಶ ಸಹಾಯಕ ಉಪನ್ಯಾಸಕರಾದ ಡಾ‌.ಎಸ್.ಎಸ್.ಅಂಗಡಿ, ಡಾ.ರಾಮದಾಸ, ಡಾ.ರಾಮನಗೌಡ ಸೇರಿದಂತೆ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯು ಅಧಿಕಾರ ವಹಿಸಿಕೊಂಡ ಡಾ.ಶಿವಾನಂದ ಚೌಗಲಾ ಮತ್ತು ನಿರ್ಗಮಿತ ಪ್ರಾಚಾರ್ಯೆ ಡಾ.ಎ.ಎಸ್ ಬೆಲ್ಲದ ಅವರಿಗೆ ಅಭಿನಂದಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group