ತ್ರಿವಿಧ ದಾಸೋಹಿ ಡಾ. ಸಿದ್ದಲಿಂಗ ಜಗದ್ಗುರುಗಳು 

Must Read

ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು,
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು,
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ

ಎನ್ನುವ ವಚನದಂತೆ ತಮ್ಮ ಶಿವಾನುಭವ ಪ್ರವಚನದ ಮೂಲಕ ಶಿವ ಶರಣರ ವಚನ ತತ್ವಗಳನ್ನು ಭೋಧಿಸಿದಂಥ ಮತ್ತು ಅನುಷ್ಠಾನಕ್ಕೆ ತಂದಂತಹ ಕೀರ್ತಿ ನಮ್ಮ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಸಲ್ಲುತ್ತದೆ ಪ್ರವಚನ ಅಷ್ಟೇ ಅಲ್ಲದೆ ತ್ರಿವಿಧ ದಾಸೋಹಿ ಎಂಬ ಹೆಗ್ಗಳಿಕೆಗೆ ಭಾಜನರಾದ ಶ್ರೇಷ್ಠ ವ್ಯಕ್ತಿತ್ವ ಅವರದು.

ತೋಂಟದಾರ್ಯ ಮಠದ ಇತಿಹಾಸ ಮತ್ತು ಪ್ರಮುಖ ಘಟನೆಗಳು: ತೋಂಟದಾರ್ಯ ಮಠವು 15ನೇ ಶತಮಾನದಲ್ಲಿ ಶಿವಯೋಗಿ ಸೂರ್ಯ ಶ್ರೀ ಯಡೆಯೂರು ತೋಂಟದ ಸಿದ್ಧಲಿಂಗ ಯತಿಗಳ ನೇರ ವಾರಸುದಾರಿಕೆಯ ಮಠವಾಗಿದೆ. ಈ ಮಠ ಲಿಂಗಾಯತ ಪರಂಪರೆಯಲ್ಲಿಯೇ ವಿಶೇಷ ಸ್ಥಾನ ಹೊಂದಿದೆ. 19ನೇ ಪೀಠಾಧಿಕಾರಿಗಳಾಗಿ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು 1974 ರಿಂದ 2018 ರವರೆಗೆ ಸುಮಾರು ನಾಲ್ಕು ದಶಕಗಳ ಕಾಲ ಮಠವನ್ನು ಜನಪರ, ಜ್ಞಾನಪರ ಸಂಸ್ಥೆಯಾಗಿ ರೂಪಿಸಿ, ಜಾತಿ, ಮತ, ಲಿಂಗಭೇದವಿಲ್ಲದೆ ಸಮಾನತೆಗಾಗಿ ಹೋರಾಟ ನಡೆಸಿದರು. ಅವಿರತ ಜನಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ವಿವಿಧ ಸಾಮಾಜಿಕ ಕಾರ್ಯ ಮಾಡಿದರು. ಮೂಲತಃ ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ಶಂಕ್ರಮ್ಮ ಮತ್ತು ಮರೆಯ್ಯನವರ ಮುದ್ದಿನ ಕಣ್ಮಣಿಯಾಗಿ ಬೆಳೆದರು ಮುಂದೆ ಹುಬ್ಬಳ್ಳಿ ಮುರುಸಾವಿರ ಮಠದಲ್ಲಿ ಶಿಕ್ಷಣ ಪೂರೈಸಿದರು.

ಪೀಠಾರೋಹಣ:  1974 ರ ಜುಲೈ 29 ರಂದು ತೊಂಟಾದ ಸಿದ್ದಲಿಂಗ ಶಿವಯೋಗಿಗಳ ಪೀಠ ಪರಂಪರೆಯ 19ನೇ ಪೀಠಾಧಿಪತಿಯಾಗಿ ಡಂಬಳ-ಗದಗ ಸಂಸ್ಥಾನಮಠಕ್ಕೆ ಅಧಿಕಾರ ವಹಿಸಿಕೊಂಡರು. ಅವರ ನೇತೃತ್ವದಲ್ಲೇ ಮಠವು ಧಾರ್ಮಿಕ ಮತ್ತು ಸಮಾಜ ಸೇವೆಯ ನಾನಾ ಕ್ಷೇತ್ರಗಳಲ್ಲಿ ಚೈತನ್ಯವಾಯಿತು.

ಸಮಾಜ ಸೇವೆ: ದಲಿತರು, ದೀನರ ಸೇವೆಯಲ್ಲಿ ಭಾಗಿಯಾಗಿ ಮಠದ ಬಾಗಿಲುಗಳನ್ನು ಎಲ್ಲಾ ಜನಾಂಗ ಮತ್ತು ವರ್ಗದವರಿಗೆ ಮುಕ್ತಗೊಳಿಸಿದ್ದರು. ಇದು ಸಾಮಾಜಿಕ ಸಮಾನತೆ ಮತ್ತು ಪರಿವರ್ತನೆಗೆ ಮಹತ್ವದ ಹಾದಿಯಾಯಿತು. ಬಸವಣ್ಣನ ಅನುಯಾಯಿಯಾಗಿ ಅವರ ತತ್ವಗಳನ್ನು ಸಮಾಜ ಸುಧಾರಣೆಯಾಗಿಸಲು ಪ್ರಯತ್ನಿಸಿದರು.

ಪರಿಸರ ಹೋರಾಟ: ಕಪ್ಪತ್ತಗುಡ್ಡದ ಪರಿಸರವನ್ನು ಕಾಪಾಡಲು ಪೋಸ್ಕೋ ಉಕ್ಕಿನ ಕೈಗಾರಿಕಾ ಸ್ಥಾಪನೆಗೆ ವಿರೋಧಿಸಿ ಯಶಸ್ವಿ ಚಳವಳಿ ನಡೆಸಿದರು.       ಧಾರ್ಮಿಕ ಸಂಸ್ಕೃತಿ: ಬಸವತತ್ವ ಹಾಗೂ ಲಿಂಗಾಯತ ತತ್ತ್ವಗಳ ಶ್ರೇಷ್ಠ ಪ್ರತಿಪಾದಕರು. ಸಾಮಾಜಿಕ ನ್ಯಾಯ, ದಲಿತರ ಏಕತೆ, ಜಾತ್ಯತೀತ ಸಮಾಜ ನಿರ್ಮಾಣದ ಪರಿಪಾಟಿಯಲ್ಲಿ ಸಂಕೀರ್ಣ ಸಂಚಲನ ಮಾಡಿದರು.    ಬಹುಮಾನಗಳು: ರಾಷ್ಟ್ರಪತಿ ಭವನದಲ್ಲಿ 2001 ರಲ್ಲಿ ರಾಷ್ಟ್ರೀಯ ಕೋಮು ಸೌಹಾರ್ದತಾ ಹಾಗೂ ದೇಶದ ಏಕತಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪಡೆದವರು.

ವಚನ ಮತ್ತು ಸಾಹಿತ್ಯ: ದಲಿತರು ಮತ್ತು ಹಿಂದುಳಿದ ವರ್ಗದ ಜನರಿಗೆ ಪ್ರೇರಣೆ ನೀಡಿದ್ದಾರೆ, ಮಠದಲ್ಲಿ ದಲಿತರು ಮತ್ತು ಹಿಂದುಳಿದವರ ಒಗ್ಗಟ್ಟು ಹಾಗೂ ಸಾಹಿತ್ಯ ಚರಿತ್ರೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.    ವೈಯಕ್ತಿಕ ನಡತೆ: ನ್ಯಾಯ ನಿಷ್ಠುರ, ನಿರ್ದ್ವಂದ್ವ, ನಿರಾಡಂಬರ, ಆಧುನಿಕತೆ ಹಾಗೂ ಪ್ರಗತಿಪರ ವಿಚಾರಧಾರೆಗಳ ಧಾರಕ.                                      ಶಿಕ್ಷಣ ದಾಸೋಹ: ಸಾಹಿತಿ  ದಿ.ಎಂ.ಎಂ. ಕಲಬುರಗಿ ಅವರ ವಿದ್ಯಾರ್ಥಿಯಾಗಿದ್ದವರು. ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿ ಸಮಾಜ, ಧರ್ಮ, ಅಧ್ಯಾತ್ಮ ಮತ್ತು ಪರಿಸರ ಕ್ಷೇತ್ರಗಳಲ್ಲಿ ಅಪಾರ ಸೇವೆ ನೀಡಿದ ಧಾರ್ಮಿಕ ಗುರು ಮತ್ತು ಸಮಾಜ ಸುಧಾರಕರಾಗಿದ್ದಾರೆ. ಅವರು ಮೂಢ ನಂಬಿಕೆ, ಜಾತ್ಯತೀತ ಸಮಾಜದ ನಿರ್ಮಾಣ ಹಾಗೂ ಪರಿಸರ ರಕ್ಷಣೆಯಲ್ಲಿ ಶ್ರೇಷ್ಠ ಕಾರ್ಯಗಳನ್ನು ಮಾಡಿದ್ದಾರೆ ಅಲ್ಲದೆ ಪ್ರತಿ ಸೋಮವಾರ ಧರ್ಮ ಗ್ರಂಥ ಪಠಣ ವಚನ ಚಿಂತನೆ ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಶ್ರೀ ಮಠದಲ್ಲಿ ಹಮ್ಮಿಕೊಳ್ಳುತ್ತಿದ್ದರು ಅಲ್ಲದೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.

ಬಸವೇಶ್ವರ ಶಾಲೆ ಮತ್ತು ಇಂಜಿನಿಯರಿಂಗ್ ಕಾಲೇಜು ವೃತ್ತಿಪರ ಕೋರ್ಸ್ಗಳ ಕಾಲೇಜು ತೆರೆದಿದ್ದಾರೆ ಚಿಕ್ಕ ಮಕ್ಕಳಲ್ಲಿ ಬಸವ ಪ್ರಜ್ಞೆ ಮೂಡಿಸಲು ವಚನ ಕಂಠ ಪಾಠಗಳ ಸ್ಪರ್ಧೆ ಏರ್ಪಡಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡುತ್ತಾರೆ ಒಟ್ಟಿನಲ್ಲಿ ಹೇಳುವದಾದರೆ ಗದಗಜಿಲ್ಲೆಯ ಶಿಕ್ಷಣ ಕ್ರಾಂತಿಯ ಹರಿಕಾರರು ನಮ್ಮ ಶ್ರೀಗಳು ಅಲ್ಲದೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಒದಗಿಸಿ ಕೊಡಲು ಅವಿರತ ಶ್ರಮಿಸಿದ್ದಾರೆ ಸಿಂದಗಿ ತುಂಬಿತೆಲ್ಲಡೆ ಜ್ಞಾನದ ಬಿಂದಿಗೆ  ಎನ್ನುವ ವಾಣಿ ಅಕ್ಷರಶಃ ಸತ್ಯ ಮಾಡಿದ್ದಾರೆ ಹತ್ತು ಹಲವಾರು ಪ್ರಶಸ್ತಿಗೆ ಭಾಜನರಾದರೂ ಯಾವುದೇ ಆಡಂಬರವಿಲ್ಲದೆ ಹಮ್ಮು ಬಿಮ್ಮಿಲ್ಲದೇ ಶೀಮಠದ ಏಳಿಗೆಗೆ ಶ್ರಮಿಸಿದವರು

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಮಾನ್ಯರ ಸ್ವಾಮೀಜಿ, ಬಸವಶ್ರೀ ಪ್ರಶಸ್ತಿ ಕನ್ನಡ ಜಗದ್ಗುರು ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗೆ ಭಾಜನರು ಜಾತ್ರಾ ಮಹೋತ್ಸವದಲ್ಲೂ ಸಹ ಆರೋಗ್ಯ ತಪಾಸಣೆ ಶಿಬಿರ ಯೋಗ ಶಿಬಿರ ರಕ್ತದಾನ ಶಿಬಿರ ನಡೆಸುವಲ್ಲಿ ಶ್ರೀ ಮಠ ತನ್ನದೇ ಆದಂತಹ ಖ್ಯಾತಿ ಹೊಂದಿದೆ ಇಂತಹ ಎಲ್ಲ ಸಮಾಜ ಮುಖಿ ಕಾರ್ಯವನ್ನು ಪರಿಗಣಿಸಿ ಶ್ರೀಗಳಿಗೆ  ಗುಲ್ಬರ್ಗ ವಿಶ್ವವಿದ್ಯಾಲಯವು 1994ರಲ್ಲಿ ಗೌರವ ಡಾಕ್ಟರ್ರೇಟ್ ಪದವಿಯನ್ನು ನೀಡಿ ಗೌರವಿಸಿತು. ಇಂತಹ ಮಹಾನ ಚೇತನರು ಶರಣರಿಗೆ ಮರಣವೇ ಮಹಾನವಮಿ ಎನ್ನುವ ರೀತಿಯಲ್ಲಿ ಅಕ್ಟೋಬರ್ 20 /2018 ರಲ್ಲಿ ಸಕಲ ಭಕ್ತರ ಬಳಗವನ್ನು ಅಗಲಿದರು ನೆನಪು ಮಾತ್ರ ಅಜರಾಮರ ಏಕೆಂದರೆ ನಾನು ಬಾಲ್ಯದಿಂದಲೂ ಮಠದ ಆವರಣದಲ್ಲಿ ವಚನ ಮತ್ತು ಸಂಗೀತ ಕಲಿಯುವಾಗ ನನಗೆ ನೀಡಿದ ಪ್ರೋತ್ಸಾಹ ಮತ್ತು ಘನಾಶೀರ್ವಾದದಿಂದ ಎಂಥ ಪರಿಸ್ಥಿತಿ ಬರಲಿ ಗೆಲ್ಲುವೆ ಎನ್ನುವ ಧೈರ್ಯ ಮೂಡಿಸಿರುವ ಶ್ರೀಗಳು ಎಂದೆಂದಿಗೂ ಅಜರಾಮರ.

ಶರಣು ಶರಣಾರ್ಥಿಗಳು


ಶಿಲ್ಪಾ ಮೃತ್ಯುಂಜಯ ಮಿಣಜಿಗಿ, ಧಾರವಾಡ ಶಿಕ್ಷಕರು

ಸಹಕಾರ :
ಶರಣೆ ರತ್ನಾಕ್ಕಾ ಪಾಟೀಲ
ಗದಗ

LEAVE A REPLY

Please enter your comment!
Please enter your name here

Latest News

ಕಲಬುರಗಿ ವಿಮಾನ ನಿಲ್ದಾಣ ಸ್ತಬ್ಧ: ರಾಜ್ಯ ಸರಕಾರದ ಮೌನದಿಂದ ಅಭಿವೃದ್ಧಿಗೆ ಹಿನ್ನಡೆ

371 ಜೆ ವ್ಯಾಪ್ತಿಯ ವಿಮಾನ ನಿಲ್ದಾಣಕ್ಕೆ ಗ್ರಹಣ: ಜನಪ್ರತಿನಿಧಿಗಳ ಮೌನಕ್ಕೆ ಆಕ್ಷೇಪಇತ್ತೀಚೆಗಷ್ಟೇ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ...

More Articles Like This

error: Content is protected !!
Join WhatsApp Group