ಮೂಡಲಗಿಯಲ್ಲಿ ಉಪ ನೋಂದಣಿ ಕಚೇರಿ ಆರಂಭಿಸಲು ಸ್ಥಳ ಪರಿಶೀಲಿಸಿದ ಡಿಆರ್ ಅಪರಂಜಿ ಮತ್ತು ಎಸಿ ಬಗಲಿ

Must Read

ಮೂಡಲಗಿ– ಮೂಡಲಗಿಗೆ ಹೊಸ ಉಪ ನೋಂದಣಿ ಕಛೇರಿ ಮಂಜೂರಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಬುಧವಾರದಂದು ಕಛೇರಿಗೆ ಅಗತ್ಯವಿರುವ ಸ್ಥಳವನ್ನು ಪರಿಶೀಲನೆ ನಡೆಸಿದರು.

ಪಟ್ಟಣದ ತಹಶಿಲ್ದಾರರ ಕಚೇರಿಗೆ ಹೊಂದಿಕೊಂಡಿರುವ ಮೂರು ಕೊಠಡಿಗಳನ್ನು ಪರಿಶೀಲಿಸಿದ ಜಿಲ್ಲಾ ನೋಂದಣಿ ಅಧಿಕಾರಿ ಶಿವಕುಮಾರ ಅಪರಂಜಿ ಅವರು, ಈ ಮೂರು ಕೊಠಡಿಯಲ್ಲಿ ಹೊಸ ಉಪ ನೋಂದಣಿ ಕಚೇರಿಯನ್ನುಆರಂಭಿಸಲಾಗುವುದು. ಶೀಘ್ರವಾಗಿ ಮೂಡಲಗಿಯಲ್ಲಿ ಕಚೇರಿ ಆರಂಭ ಮಾಡಲಾಗುವುದು ಎಂದು ಹೇಳಿದರು.

ಅರಭಾವಿ ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದ ಫಲವಾಗಿ ಮೂಡಲಗಿಯಲ್ಲಿ ಹೊಸ ಕಚೇರಿ ಆರಂಭವಾಗಲಿದೆ. ಮೂಡಲಗಿ ತಾಲೂಕಿನ ಸಾರ್ವಜನಿಕರ ಹಿತದೃಷ್ಟಿಯಿಂದ ಗೋಕಾಕದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನೇ ಇಲ್ಲಿ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗುತ್ತದೆ.‌ನಾಗರಿಕರು ಹಾಗೂ ರೈತರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಬೈಲಹೊಂಗಲ ಉಪ-ವಿಭಾಗಾಧಿಕಾರಿ ಡಾ. ಶಶಿಧರ ಬಗಲಿ, ತಹಶಿಲ್ದಾರ ಡಿ.ಜೆ ಮಹಾತ, ಗೋಕಾಕ ಉಪ ನೋಂದಣಿ ಅಧಿಕಾರಿ ರವಿ ಸಂಕನಗೌಡ್ರ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group