ಡಿ.೩೦ರಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಸ್ಮರಣೆ, ಉಚಿತ ಆರೋಗ್ಯ ಶಿಬಿರ

0
374

ಮೈಸೂರು – ಸಾಹಸಸಿಂಹ ದಿ. ಡಾ.ವಿಷ್ಣುವರ್ಧನ್‌ರವರ ೧೪ನೇ ಪುಣ್ಯಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದಿ.೩೦ರಂದು ಶನಿವಾರ ಬೆಳಿಗ್ಗೆ ೯ರಿಂದ ಸಂಜೆ ೪ರವರೆಗೆ ನಗರದ ಡಾ.ವಿಷ್ಣುವರ್ಧನ್ ಸ್ಮಾರಕ ಭವನ, ಉದ್ಬೂರ್ ಗೇಟ್‌ನಲ್ಲಿ ಬೆಂಗಳೂರು ರೋಟರಿ ಹಾಗೂ ಮೈಸೂರು ರೋಟರಿ ಇವರಗಳ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದೆ.

ಆರೋಗ್ಯ ತಪಾಸಣೆ, ಬಿಪಿ ಮತ್ತು ಮಧುಮೇಹ ತಪಾಸಣೆ, ಕ್ಯಾನ್ಸರ್ ತಪಾಸಣೆ, ಕಣ್ಣಿನ ತಪಾಸಣೆ, ಹೃದಯ ತಪಾಸಣೆ, ಗರ್ಭಿಣಿ ಸ್ತೀಯರ ತಪಾಸಣೆಯನ್ನು ಮೈಸೂರಿನ ಹೆಸರಾಂತ ಆಸ್ಪತ್ರೆ ವೈದ್ಯರುಗಳು ನಡೆಸಿಕೊಡುತ್ತಾರೆ. ಅಲ್ಲದೇ ಉಚಿತ ರಕ್ತದಾನ ಶಿಬಿರವನ್ನು ಏರ್ಪಡಿಸಿದೆ.     

ಮೈಸೂರಿನ ಸುಯೋಗ್ ಆಸ್ಪತ್ರೆ, ನಾರಾಯಣ ಆಸ್ಪತ್ರೆ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಶ್ರೀಮತಿ ಭಾರತಿ ವಿಷ್ಣುವರ್ಧನ್, ಅನಿರುದ್ಧ, ರೋಟರಿ ಸಂಸ್ಥೆಯ ವಿ.ಶ್ರೀನಿವಾಸಮೂರ್ತಿ, ಬಿ.ಎಲ್.ನಾಗೇಂದ್ರಪ್ರಸಾದ್, ಹೆಚ್.ಆರ್.ಕೇಶವ್ ಸೇರಿದಂತೆ ಗಣ್ಯರು ಉಪಸ್ಥಿತರಿರುತ್ತಾರೆ. ವಿವರಗಳಿಗೆ ರೊ.ಸೆಲ್ವರಾಜ್, ಮೊಬೈಲ್ ೯೪೪೮೭೩೨೮೬೯ ಇವರನ್ನು ಸಂಪರ್ಕಿಸಬಹುದು.

ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉಪಯೋಗವನ್ನು ಅಸಕ್ತರು ಮತ್ತು ಅಭಿಮಾನಿಗಳು ಉಪಯೋಗಿಸಿಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.