ಡಾ. ವೈ. ಬಿ. ಕಡಕೋಳ ಅವರ ಸನ್ಮಾನ ಸಮಾರಂಭ

Must Read

ಸವದತ್ತಿ : ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ ದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ. ಬಿ. ಕಡಕೋಳ ಅವರಿಗೆ ಡಾಕ್ಟರೇಟ್ ದೊರೆತ ಪ್ರಯುಕ್ತ ಧಾರವಾಡ ಹಾಗೂ ಹುಬ್ಬಳ್ಳಿ ಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಆದರ್ಶ ಶಿಕ್ಷಕ, ವಿರಳ ಯುವ ಬರಹಗಾರ ಡಾ. ವೈ.ಬಿ. ಕಡಕೋಳ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಬಿಡುವಿನ ದಿನಗಳನ್ನು ಈ ಕಾಯಕಕ್ಕೆ ಸದುಪಯೋಗಪಡಿಸಿಕೊಂಡು ಇತೀಚಿಗಷ್ಟೇ ಡಾಕ್ಟರೇಟ್ ಪಡೆದ ಸಾತ್ವಿಕ ವ್ಯಕ್ತಿ. ಬೆಳಗಾವಿಯ ವಿಧಾನಸೌಧದ ಸೆಂಟ್ರಲ್ ಹಾಲ್ ನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14 ನೇ ಘಟಿಕೋತ್ಸವದಲ್ಲಿ ವೈ. ಬಿ. ಕಡಕೋಳ ಅವರು ಮಹೇಶ ಗಾಜಪ್ಪನವರ ಮಾರ್ಗದರ್ಶನ ದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು ಸಮಗ್ರ ಅಧ್ಯಯನ ಸಮಗ್ರ ಅಧ್ಯಯನ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದ ನಿಜಕ್ಕೂ ಸಂತಸದ ಸಂಗತಿ ಎಂದು ಶಿಕ್ಷಕ ಎಲ್. ಐ. ಲಕ್ಕಮ್ಮನವರ ಹೇಳಿದರು.

ಹುಬ್ಬಳ್ಳಿ ಯ ಪವರ್ ಆಫ್ ಯೂತ್ಸ ಫೌಂಡೇಶನ್ , ಧಾರವಾಡ ಅಪ್ನಾದೇಶ ಫೌಂಡೇಶನ್ ಮಹಾಪೊಷಕರಾದ ಎಲ್ ಐ ಲಕ್ಕಮ್ಮನವರ ನೇತೃತ್ವದ, ಫೌಂಡೇಶನ್ ರಾಜ್ಯ ಕಾರ್ಯಾಧ್ಯಕ್ಸರು ಬಸವರಾಜ ಕುಡುಒಕ್ಕಲಿಗೇರ ಹಾಗು ಪವರ್ ಆಫ್ ಯುಥ್ಸ ಫೌಂಡೇಶನ್ ಕರ್ನಾಟಕ ಅಧ್ಯಕ್ಷ ರವಿಚಂದ್ರನ್ ದೊಡ್ಡಿಹಾಳ ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಪ್ನಾದೇಶ್ ಫೌಂಡೇಶನ್ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಕುಡುವಕ್ಕಲಿಗೇರ, ಡಾ ವೈ ಬಿ ಕಡಕೋಳ ಅವರ ಸಾಹಿತ್ಯ ತುಂಬಾ ಜನ ಮನ್ನಣೆ ಗಳಿಸಿದೆ ಧಾರವಾಡದ ಅಕ್ಷರ ತಾಯಿ ಲೂಸಿ ಸಾಲ್ದಾನಾರವರ 17ಪುಸ್ತಕಗಳನ್ನು ಹೊರತರುವಲ್ಲಿ ಕಡಕೋಳ ಅವರ ಪ್ರಯತ್ನ ಮೆಚ್ಚುಗೆ ಪಡೆದಿದೆ ಇವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ ಎಂದರು.

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group