ಸಿಂದಗಿ: ದಿ. ಮಾಜಿ ಸಚಿವ ಎಂ.ಸಿ.ಮನಗೂಳಿಯವರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಠು ಅನುದಾನ ತಂದು ಅಮರರಾಗಿದ್ದಾರೆ. ಅವರ ಹೆಸರು ಉಳಿಯುವಂಥ ಕಾರ್ಯಗಳು ನಡೆಯಲಿ ಎಂದು ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಹಳೇ ತಹಶೀಲ್ದಾರ ಕಾರ್ಯಾಲಯದ ಹತ್ತಿರ ದಿ.ಮಾಜಿ ಸಚಿವ ಎಂ.ಸಿ.ಮನಗೂಳಿಯವರ ಅವಧಿಯಲ್ಲಿ ರೂ 3 ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ವೀರಭದ್ರೇಶ್ವರ ದೇವಸ್ಥಾನವನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಪಟ್ಟಣದ ಮುಂದಿನ 55 ವರ್ಷದ ಮುಂದಾಲೋಚನೆಯಲ್ಲಿ ಸುಮಾರು ರೂ. 2 ನೂರು ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ ಅವು ಅಚ್ಚುಕಟ್ಟುತನದಿಂದ ನಡೆಯುವಂತೆ ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳು ನಿಗಾವಹಿಸಬೇಕು ಎಂದರು.
ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, 2018ರ ಸಮ್ಮಿಶ್ರ ಸರಕಾರದಲ್ಲಿ ನಮ್ಮ ತಂದೆ ದಿ. ಎಂ.ಸಿ.ಮನಗೂಳಿಯವರು ಕ್ಷೇತ್ರದ ಅಭಿವೃದ್ಧಿಗೆ ಸುಮಾರು 7 ನೂರು ಕೋಟಿ ಅನುದಾನ ತಂದಿದ್ದು ಕ್ಷೇತ್ರದ ಪ್ರತಿಯೊಂದು ಗ್ರಾಮದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ ಅವರ ಹೆಸರು ಅಜರಾಮರವಾಗಿ ಉಳಿವಿಗೆ ಶ್ರಮಿಸುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶರಣಸಾಹಿತ್ಯ ಪರಿಷತ್ತಿನ ಅದ್ಯಕ್ಷ ಚೆನ್ನಪ್ಪ ಕತ್ತಿ, ಬಂದೆನವಾಜ ಕರ್ಜಗಿ, ಪ್ರದೀಪ ಕತ್ತಿ, ಬೀಮನಗೌಡ ಬಿರಾದಾರ, ಚೆನ್ನಪ್ಪ ಪಟ್ಟಣಶೆಟ್ಟಿ, ಪ್ರಸನ್ ಜೇರಟಗಿ, ಮಲ್ಲು ಶೆಂಬೆವಾಡ ಸೇರಿದಂತೆ ಹಲವರು ಇದ್ದರು.