ಅಮಾನತ್ತು ಮಾಡಿ ರೀ‌ ಪೋಸ್ಟಿಂಗ್ ಮಾಡದ ಡಿಎಸ್ ಮೇಲೆ ಕಚೇರಿಯಲ್ಲೇ ಚಪ್ಪಲಿಯಿಂದ ಹಲ್ಲೆ

Must Read

ಬೀದರ: ಎರಡು ತಿಂಗಳ ಹಿಂದೆ ವಿವಿಧ ಕಾಮಗಾರಿಯಲ್ಲಿ ಅಕ್ರಮ ಮಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ಅಮಾನತ್ತು ಮಾಡಲ್ಪಟ್ಟಿದ್ದ  ಪಿಡಿಓ ಪ್ರಭುದಾಸ್ ಎಂಬುವವನು ಜಿಪಂ ಉಪಕಾರ್ಯದರ್ಶಿ ಸೂರ್ಯಕಾಂತ ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ

ಅಮಾನತುಗೊಂಡ ಅಧಿಕಾರಿಯನ್ನು ರೀ ಪೋಸ್ಟಿಂಗ್ ಮಾಡುವ ವಿಷಯದಲ್ಲಿ ಇಬ್ಬರ ಮಧ್ಯೆ ಗಲಾಟೆ ಸಂಭವಿಸಿದ್ದು  ಗಲಾಟೆ ಬಳಿಕ ಡಿಎಸ್ ಗೆ ಪಿಡಿಓ ಚಪ್ಪಲಿಯಿಂದ‌ ಹಲ್ಲೆ ಮಾಡಿದನೆಂದು ಆರೋಪಿಸಲಾಗಿದೆ. 

ಜಿಪಂ ಸಿಇಓ ಗಿರೀಶ್ ಬದೋಲೆ ಗಲಾಟೆ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡುತ್ತ, ಜಿಪಂ ಡಿಎಸ್ ಮತ್ತು ಪಿಡಿಓ ಮಧ್ಯೆ ಭಾರಿ ಗಲಾಟೆಯಾಗಿದ್ದು ನಿಜ. ಆದರೆ ಚಪ್ಪಲಿಯಿಂದ ಹೊಡೆದ ಬಗ್ಗೆ ಸಿಸಿಟಿವಿ ಚೆಕ್‌ ಮಾಡುತ್ತೇವೆ ತನಿಖೆ ಮಾಡಿದ ಬಳಿಕ ಸರಿಯಾದ ಕಾರಣ ತಿಳಿಯಲಿದೆ. ಠಾಣೆಯಲ್ಲಿ ಪ್ರಕರಣ ದಾಖಲಿಸುವುದು ಅವರ ವೈಯಕ್ತಿಕ ವಿಚಾರ ಎಂದರು.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group