spot_img
spot_img

ಲಿಂಗಾಯತ ಸಂಘಟನೆ ವೇದಿಕೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Must Read

- Advertisement -

ದಿ.10 ರಂದು ಬೆಳಗಿನ ಸಮಯದಲ್ಲಿ ವಾರದ ಸತ್ಸಂಗ ಸಂದರ್ಭದಲ್ಲಿ ಮೌಲಿಕ ಉಪನ್ಯಾಸ , ಸಾಧಕರ ಸನ್ಮಾನ ಮತ್ತು ವಿವಿಧ ಸಾಂಸ್ಕೃತಿಕ  ಚಟುವಟಿಕಗಳ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅತಿಥಿ ಉಪನ್ಯಾಸಕರಾಗಿ ವೇದಿಕೆಯನ್ನು  ಉದ್ದೇಶಿಸಿ ಮಾತನಾಡಿದ  ರಾಜ್ಯ ಪ್ರಶಸ್ತಿ ವಿಜೇತ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಂಶೋಧಕರು ಆದ ಡಾ. ದಾನಮ್ಮ ಜಳಕಿಯವರು , ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಮತ್ತು ಉದ್ದೇಶ, ಮಹಿಳಾ ಸಬಲೀಕರಣ, ಭಾರತೀಯ ಸಮಾಜದಲ್ಲಿ ಸ್ತ್ರೀ ಬೆಳೆದು ಬಂದ ಹೆಜ್ಜೆಗಳು, ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರನ್ನು ಸಮಾನತೆಯ ನೆಲೆಗಟ್ಟಿನಲ್ಲಿ ನೋಡುವ ರೀತಿ.. ಹೀಗೆ ಹತ್ತು ಹಲವು ವಿಷಯಗಳನ್ನು ಉದಾಹರಣೆ ಸಹಿತ ಪ್ರಸ್ತುತಪಡಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ  ಸಾಹಿತಿ ಮತ್ತು ಸಮಾಜ ಸೇವಕರು ಆದ ಶರಣೆ ವಿದ್ಯಾ  ಹುಂಡೆಕರ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಲಿಂಗ ಸಮಾನತೆಯನ್ನು ನೆಲೆಗೊಳಿಸುವಲ್ಲಿ ಶರಣರ ಕೊಡುಗೆ  ಅನನ್ಯವಾದದ್ದು. ಹಾಗೆ  ಮೌಢ್ಯ ಮುಕ್ತ ಸಮಾಜ ನಿರ್ಮಾಣದ ಗುರಿ ಅವರದಾಗಿತ್ತು ಎನ್ನುವುದನ್ನು ಒತ್ತಿ ಹೇಳಿದರು.

- Advertisement -

ಬೆಳಗಾವಿಯ ಸಮೃದ್ಧಿ ಸಮಾಜ ಸೇವಾ ಸಂಸ್ಥೆಯ ಸಿ. ಇ. ಒ.. ಆದ ಶರಣೆ ವೈಷ್ಣವಿ ಕಿವಡಸಣ್ಣವರ  ಮಾತನಾಡುತ್ತಾ, ಮದುವೆ ಎನ್ನುವದು ಮಹಿಳೆಯರ  ಸಾಧನೆಗೆ ಅಡ್ಡಿಯಾಗಬಾರದು. ನಮ್ಮ ಸಾಧನೆಗೆ ಪೂರಕವಾಗಬಲ್ಲ ಸ್ಫೂರ್ತಿಯಾಗಬೇಕು. ಅರುಂಧತಿ ಸಿನ್ಹಾ, ಬಚೆಂದ್ರಿಪಾಲ್ ಅವರಂತಹ ಮಹಾನ್ ಸಾಧಕ ಮಹಿಳೆಯರು ನಮ್ಮ ಸಾಧನೆಗೆ ಸ್ಫೂರ್ತಿ ತುಂಬುವ  ಶಕ್ತಿಗಳು… ಎನ್ನುವುದನ್ನು  ಸಾಂದರ್ಭಿಕ ಸಾಕ್ಷಿ ಸಮೇತ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.

2024 ರ ಸಾಲಿನ Venus International Women Award  ನ್ನು ಪಡೆಯುವ ಮೂಲಕ  ಸಂಶೋದನಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಲ್ಪಟ್ಟರುವ, GIT ಸಂಸ್ಥೆಯ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ  ಶರಣೆ ಮಂಜುಳಾ ಮಹಾಂತೇಶ ಪಾಟೀಲ್ ತಮ್ಮ ಅನುಭವ ಹಂಚಿಕೊಳ್ಳುತ್ತಾ, ಸಾಧನೆಯ ಛಲ ಮತ್ತು ಪ್ರಯತ್ನದೊಂದಿಗೆ ಕುಟುಂಬದ ಸಹಕಾರ ಮತ್ತು  ಪ್ರೋತ್ಸಾಹ ಇದ್ದರೆ ಮಹಿಳೆ ಏನನ್ನಾದರೂ ಸಾಧಿಸಬಹುದು.  ಪಿಯುಸಿ ಓದುತ್ತಿರುವಾಗ ಅವರಿಗೆ ವಿವಾಹ ಆದ ಪ್ರಸಂಗವನ್ನು, ತದನಂತರ ವಿದ್ಯಾಬ್ಯಾಸ ಮುಂದುವರೆಸಿ, ಪಿ. ಎಚ್. ಡಿ ವರೆಗೂ ಓದಲು ಮತ್ತು ಸಾಧನೆ ಮಾಡಲು  ಅವರ ಕುಟುಂಬದ ಸಹಕಾರ ಮತ್ತು ಪ್ರೋತ್ಸಾಹವನ್ನು ಸ್ಮರಿಸಿಕೊಂಡರು.

ಇತ್ತೀಚೆಗೆ ನಡೆದ ಬೆಳಗಾವಿ ನಗರ ವಲಯದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ  ಲೇಖಕರು ಮತ್ತು ಸಾಮಾಜಿಕ ಸೇವೆಯಲ್ಲಿತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಶರಣೆಜ್ಯೋತಿ ಬಾದಾಮಿ ಅಧ್ಯಕ್ಷೀಯ ನುಡಿಗಳಲ್ಲಿವೇದಿಕೆಯಲ್ಲಿ ತಮ್ಮ ಅನುಭವದ ನುಡಿಗಳನ್ನು ಹಂಚಿಕೊಂಡು ಮಾತನಾಡಿದ ಎಲ್ಲರ ಸೇವೆಯನ್ನು ಮತ್ತೊಮ್ಮೆ ಸ್ಮರಿಸುತ್ತಾ, ಲಿಂಗಾಯತ ಸಂಘಟನೆ ಇದುವರೆಗೂ ನಿರ್ವಹಿಸಿದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ವಿದಾಯಕ ಕಾರ್ಯಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

ಇದೇ ಸಂದರ್ಭದಲ್ಲಿ ವಿಜಯಾ ಆರ್ಥೋ ಆ್ಯಂಡ್ ಟ್ರೂಮಾ ಸೆಂಟರನ ನಿರ್ದೇಶಕರು ಆದ  ಶರಣೆ ಡಾ. ಸುನೀತಾ ಪಾಟೀಲ್ ಅವರನ್ನೂ ವೇದಿಕೆಯ ಮೂಲಕ ಸನ್ಮಾನಿಸಲಾಯಿತು. ವರ್ಷಪೂರ್ತಿ ಸಂಘಟನೆಯಲ್ಲಿ ಪ್ರತಿ ರವಿವಾರ ವಚನ ಪ್ರಾರ್ಥನೆಯ ನೇತೃತ್ವ ವಹಿಸುತ್ತಿದ್ದ  ಮಹಾದೇವಿ ಅರಳಿ ಅವರನ್ನೂ ಗೌರವಿಸಲಾಯಿತು. ಸಂಗಮೇಶ ಅರಳಿ ಅವರ ಚಿರಂಜೀವಿ ಶಿವಕುಮಾರ್ ಅರಳಿ ಅವರ ಜನ್ಮದಿನದ ಪ್ರಯುಕ್ತ ಮತ್ತು ಪ್ರಸಾದ ದಾಸೋಹ  ಸೇವೆಗೋಸ್ಕರ ವೇದಿಕೆ ಮೂಲಕ ಶುಭಾಶಯ ಕೋರಿ ಗೌರವಿಸಲಾಯಿತು.

ಶರಣೆ ದೀಪಾ ಪಾಟೀಲ್ ನೇತೃತ್ವದಲ್ಲಿ ಸಂಘಟನೆಯ ಬಹುತೇಕ ಶರಣೆಯರಿಂದ ವಾಚನ ಗಾಯನ ಮತ್ತು ನೃತ್ಯ ಸಂಗೀತ  ಕಾರ್ಯಕ್ರಮಗಳು ಕೂಡ ವೇದಿಕೆಯಲ್ಲಿ  ಎಲ್ಲರನ್ನು ರಂಜಿಸಿದವು. ಶರಣೆ ಶ್ರೀದೇವಿ ನರಗುಂದ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು.ಶರಣೆ ಕಮಲಾ ಗಣಾಚಾರಿ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು. ಶರಣೆ ಸುವರ್ಣ ಗುಡಸ ವಂದನಾರ್ಪಣೆ ನೇರವೇರಿಸಿದರು. ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೆಯನ್ನವರ ಆದಿಯಾಗಿ ಸರ್ವ ಸದಸ್ಯರು ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿ ವಹಿಸಿದ್ದರು.

ಸಂಗಮೇಶ ಅರಳಿ,ಸತೀಶ ಪಾಟೀಲ , ಸದಾಶಿವ ದೇವರಮನಿ, ಅಶೋಕ ಇಟಗಿ, ಶಂಕರ ಶೆಟ್ಟಿ,ವಿಜಯ ಹುದಲಿಮಠ,ರಮೇಶ  ಕಳಸಣವರ, ಸುರೇಶ ನರಗುಂದ,ಬಸವರಾಜ ಕರಡಿಮಠ,ಶಿವಾನಂದ ನಾಯಕ,ಆನಂದ ಕರ್ಕಿ, ಬಿ.ಪಿ. ಜೇವನಿ. ವಿ. ಕೆ. ಪಾಟೀಲ್ ಹೀಗೆ  ಎಲ್ಲಾ ಶರಣ ಬಳಗ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group