spot_img
spot_img

ಅಸೋಸಿಯೇಷನ್ ಆಫ್ ಅಲಯನ್ಸ್ ಜಿಲ್ಲಾ ಘಟಕಗಳ ಉದ್ಘಾಟನೆ

Must Read

- Advertisement -

ಮೈಸೂರು: ಅಸೋಸಿಯೇಷನ್ ಆಫ್ ಅಲಯನ್ಸ್ ಸೇವಾ ಸಂಸ್ಥೆಯ ಮೈಸೂರು ಮತ್ತು ಮಂಡ್ಯ ಜಿಲ್ಲಾ ಘಟಕಗಳ ಉದ್ಘಾಟನಾ ಕಾರ್ಯಕ್ರಮ ‘ಓಂಕಾರ’ ಭಾನುವಾರ (ಮಾ.10) ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಲಾಗಿತ್ತು.

ಮೈಸೂರಿನ ಪೊಲೀಸ್ ಆಯುಕ್ತ ಬಿ.ರಮೇಶ್ ಮತ್ತು ಅಲಯನ್ಸ್ ಇಂಟರ್‍ನ್ಯಾಷನಲ್ ಸೇವಾ ಸಂಸ್ಥೆಯ ಮಾಜಿ ಅಂತಾರಾಷ್ಟ್ರೀಯ ಅಧ್ಯಕ್ಷ ಹಾಗೂ ಅಲಯನ್ಸ್ ಸಂಸ್ಥಾಪಕ ತಿರುಪತಿ ರಾಜುರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಪೊಲೀಸ್ ಆಯುಕ್ತ ಬಿ.ರಮೇಶ್ ಮಾತನಾಡಿ, ಅಲಯನ್ಸ್ ಇಂಟರ್‍ನ್ಯಾಷನಲ್ ಸೇವಾ ಸಂಸ್ಥೆಯು ಭಾರತೀಯರಿಂದ, ಭಾರತೀಯರಿಗಾಗಿ, ಭಾರತದಲ್ಲಿ ಕೇಂದ್ರ ಸ್ಥಾನವನ್ನು ಹೊಂದಿ 32ಕ್ಕಿಂತಲೂ ಅಧಿಕ ರಾಷ್ಟ್ರಗಳಲ್ಲಿ ಜಿಲ್ಲಾ ಕೇಂದ್ರಗಳನ್ನು ಹೊಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 15 ವರ್ಷಗಳಿಂದ ನಿರಂತರವಾಗಿ ತನ್ನ ಸೇವೆಯನ್ನು ಮುಂದುವರೆಸುತ್ತಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹಾಗೂ ಸಕ್ಕರೆ ನಾಡು ಮಂಡ್ಯದಲ್ಲಿ ಸ್ವದೇಶಿ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಇಂದು ಅದ್ದೂರಿಯಾಗಿ 600ಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಪ್ರಾರಂಭಿಸಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

- Advertisement -

ಅವರು ಮುಂದುವರೆಸಿ, ಮುಖ್ಯವಾಗಿ ಹಸಿವು ನಿವಾರಣೆ, ವಿಶೇಷಚೇತನರ ಅಭಿವೃದ್ಧಿ, ಆರೋಗ್ಯ ತಪಾಸಣೆ, ಅವಶ್ಯಕತೆ ಇರುವಂತಹ ಸೇವಾ ಕಾರ್ಯಗಳನ್ನು ಗುರುತಿಸಿ ಎಲ್ಲಾ ಸದಸ್ಯರು ಒಂದುಗೂಡಿ ಸಾರ್ವಜನಿಕರಿಗೆ ಸಹಾಯ ಹಸ್ತ ನೀಡುವುದು ಈ ಸಂಸ್ಥೆಯ ಗುರಿಯಾಗಿದೆ. ಈಗಾಗಲೇ ಮೈಸೂರು ನಗರದಲ್ಲಿ 25 ಶಾಖೆಗಳು ಪ್ರಾರಂಭಗೊಂಡು, ಸೇವಾ ಕಾರ್ಯಕ್ರಮ ಪ್ರಾರಂಭಿಸಿವೆ ಹಾಗೂ ಮಂಡ್ಯದಲ್ಲಿ 15 ಕ್ಲಬ್ಬುಗಳು ಪ್ರಾರಂಭಗೊಂಡು ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿದೆ. ನೆರೆಯ ರಾಷ್ಟ್ರಗಳಾದ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅತಿ ಹೆಚ್ಚು ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಲೈ ತಿರುಪತಿ ರಾಜು ಮಾತನಾಡಿ, ಈ ಸಂಸ್ಥೆ ಸುಮಾರು 50 ಸಾವಿರ ಸದಸ್ಯರನ್ನು ಹಾಗೂ 1800 ಶಾಖೆಗಳನ್ನು ಹೊಂದಿದ್ದು, ಅತೀ ವೇಗದಲ್ಲಿ ದೇಶದ ಪ್ರತಿ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಪ್ರಾರಂಭಿಸಿದೆ. ಇದರ ಮುಖ್ಯ ಅನುಕೂಲ ಏನೆಂದರೆ ಅತೀ ಕಡಿಮೆ ಸೇವಾ ಶುಲ್ಕ ಮತ್ತು ನಿರಂತರ ನಾಯಕತ್ವ ಅಭಿವೃದ್ಧಿ. ಮೈಸೂರು ಮತ್ತು ಮಂಡ್ಯದಲ್ಲಿ 40 ಕ್ಲಬ್ಬುಗಳ ಜಿಲ್ಲೆಗಳು ಪ್ರಾರಂಭವಾಗಲು ಅಂತರರಾಷ್ಟ್ರೀಯ ನಿರ್ದೇಶಕರಾದ ಅಲೈ ನಾಗರಾಜ್ ವಿ.ಭೈರಿ ಹಾಗೂ ಮಾಜಿ ಅಂತರರಾಷ್ಟ್ರೀಯ ನಿರ್ದೇಶಕ ಜಿ.ಪಿ.ದಿವಾಕರ್, ಮಾಜಿ ರಾಜ್ಯಪಾಲ ಕೆ.ಎಂ.ಮುನಿಯಪ್ಪ ಹಾಗೂ ಅನಂತ ರಂಗಸ್ವಾಮಿಯವರುಗಳು ಮುಖ್ಯ ಕಾರಣ ಎಂದು ಅವರನ್ನು ಶ್ಲಾಘಿಸಿದರು. 

ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯಾದ 255ರ ರಾಜ್ಯಪಾಲರಾಗಿ ಅಲೈ ನಂಜುಂಡಸ್ವಾಮಿ ಹಾಗೂ ಮಂಡ್ಯ ಜಿಲ್ಲೆ 268ರ ರಾಜ್ಯಪಾಲರಾಗಿ ಅಲೈ ಕೆ.ಟಿ.ಹನುಮಂತು ಅಧಿಕಾರ ವಹಿಸಿಕೊಂಡರು. ಅಲೈ ಬಾಲಕೃಷ್ಣರಾಜು (ಸಿರಿಬಾಲು) ಹಾಗೂ ಮಾದೇಗೌಡರು ಒಂದನೇ ಉಪರಾಜ್ಯಪಾಲರಾಗಿ ಹಾಗೂ ಅಲೈ ವೆಂಕಟೇಶ್ ಮತ್ತು ಕೆ.ಆರ್.ಶಶಿಧರ್ ಈಚಗೆರೆ ಎರಡನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು. 

- Advertisement -

ವೇದಿಕೆಯಲ್ಲಿ ಸಂತೋಷ್‍ಕುಮಾರ್, ಗಂಗಾಧರಪ್ಪ, ರವೀಂದ್ರನಾಥ್, ರಮೇಶ್, ಚಂದ್ರಶೇಖರ್, ಅಪ್ಪಾಜಿ, ಅತಿಥೇಯ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಭೈರಿ, ಕಾರ್ಯದರ್ಶಿ ಶ್ರೀಶೈಲ, ಉಪಾಧ್ಯಕ್ಷ ಕೃಷ್ಣಾಜಿರಾಯ್, ಕೋ-ಛೇರ್ಮನ್ ಶೋಭಾ ಸಿರಿಬಾಲು, ಖಜಾಂಚಿ ಸಂಪತ್ ಕುಮಾರ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group