ಮೈಸೂರ -ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ದಿನದ 24 ಗಂಟೆಗಳು ಓದುವ ಕೇಂದ್ರವಾದ ಇನ್‍ಸ್ಪೈರ್ ಸ್ಟಡಿ ಸೆಂಟರ್ ಅನ್ನು ಇಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮಕ್ಕೆ ಟೇಪ್ ಕಟ್ ಮಾಡುವುದರ ಮೂಲಕ ಚಾಲನೆ ನೀಡಿದ ಶ್ರೀ ಕೇಟರರ್ಸ ನ ಮಾಲೀಕ ಹಾಗೂ ಉದ್ಯಮಿ ಹೆಚ್.ಎನ್.ಶ್ರೀಧರ್ ಮೂರ್ತಿಯವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳ ಸಾಧನೆಗೆ ನಾಂದಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಓದಿನ ಮೂಲಕ ಹೆಚ್ಚು ವಿಷಯಗಳನ್ನು ಮನನ ಮಾಡಲು ಪರೀಕ್ಷೆಗಳು ಸಹಕಾರಿಯಾಗುತ್ತದೆ. ಸತತ ಅಭ್ಯಾಸ ಹಾಗೂ ನಿರಂತರವಾದ ಕಲಿಕೆಯ ಚಟುವಟಿಕೆಗಳು ಓದುವವರಿಗೆ ಅನುಕೂಲವಾಗುತ್ತದೆಂದರು. ಉದ್ಯೋಗದ ಪೈಪೋಟಿಯ ಹಿನ್ನೆಲೆಯಲ್ಲಿ ಕೆಎಎಸ್ ಹಾಗೂ ಐಎಎಸ್ ಪರೀಕ್ಷೆಗಳಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ದಿನದ 24 ಗಂಟೆಗಳು ಇನ್‍ಸ್ಪೈರ್ ಸ್ಟಡಿ ಸೆಂಟರ್ ಓದುವವರಿಗೆ ಅನುಕೂಲ ಮಾಡಿಕೊಟ್ಟಿದೆ. ಇದರ ಉಪಯೋಗವನ್ನು ವಿದ್ಯಾರ್ಥಿ ಸಮುದಾಯ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರಲ್ಲದೇ, ಕಡಿಮೆ ದರದಲ್ಲಿ ವಿಶೇಷ ಪುಸ್ತಕಗಳು, ಓದಿನ ಲೇಖನ ಸಾಮಗ್ರಿಗಳನ್ನು ಪೂರಕವಾಗಿ ನೀಡುತ್ತಿದ್ದು, ವಿದ್ಯಾರ್ಥಿಗಳು ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇನ್‍ಸ್ಪೈರ್ ಸ್ಟಡಿ ಸೆಂಟರ್‍ನ ನಾಗರಾಜು, ಕಾರ್ತಿಕ್ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.