spot_img
spot_img

ಅಶೋಕಪುರಂನ ದೊಡ್ಡಗರಡಿ ವತಿಯಿಂದ ಕೆ.ಶಿವರಾಮ್ ಪುಣ್ಯಸ್ಮರಣೆ – ಅನ್ನದಾನ

Must Read

spot_img
- Advertisement -

ನಗರದ ಅಶೋಕಪುರಂನ ದೊಡ್ಡಗರಡಿ ವತಿಯಿಂದ ನಟ, ಐಎಎಸ್ ಅಧಿಕಾರಿಯಾಗಿದ್ದ ಕೆ.ಶಿವರಾಮ್ ರವರ ಪುಣ್ಯಸ್ಮರಣೆಯನ್ನು ಇಂದು (11.03.2024) ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮಾಜಿ ಮಹಾಪೌರರಾದ ಪುರುಷೋತ್ತಮ್ ರವರು ಶಿವರಾಮ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿ, ಶಿವರಾಮ್ ನಾಡು ಕಂಡು ಅಪರೂಪದ ನಟ ಹಾಗೂ ದಕ್ಷ ಅಧಿಕಾರಿ. ಶೋಷಿತರ ಪರ ಹಾಗೂ ಹಿಂದುಳಿದ ವರ್ಗಗಳ ನೋವಿಗೆ ಸ್ಪಂದಿಸುವ ಹೃದಯವಾಗಿದ್ದರು ಎಂದರು.     

ಕಾರ್ಯಕ್ರಮದಲ್ಲಿ ಆದಿಕರ್ನಾಟಕ ಮಹಾಸಂಸ್ಥೆ ಅಧ್ಯಕ್ಷರಾದ ಸಿದ್ದರಾಜು.ಪಿ (ಸುನಿಲ್) ರವರು ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ಶಿವರಾಮ್ ರವರು ಪ್ರಾಮಾಣಿಕ ಅಧಿಕಾರಿಯಾಗಿದ್ದರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಾಗೂ ಸೂರಿಲ್ಲದೆ ಇರುವ ಅನೇಕ ಕುಟುಂಬಗಳಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಿ ಅವರಿಗೆ ಬದುಕಲು ವಸತಿಯನ್ನು ಕಲ್ಪಿಸಿದ ಶಿವರಾಮ್ ರವರು ದೊಡ್ಡ ವ್ಯಕ್ತಿಯಾಗಿದ್ದರು ಎಂದರು.    

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಶೋಕಪುರಂ ದೊಡ್ಡಗರಡಿ ಸಂಘದ ಅಧ್ಯಕ್ಷರಾದ ಗೋವಿಂದರಾಜ್ ರವರು ಮಾತನಾಡಿ ಕೆ.ಶಿವರಾಮ್ ರವರ ಅಕಾಲಿಕ ನಿಧನ ಶೋಷಿತರಿಗೆ ದೊಡ್ಡ ಆಘಾತದ ಸಂಗತಿ. ಇಂತಹ ಅಧಿಕಾರಿ ಕನ್ನಡದಲ್ಲಿ ಐಎಎಸ್ ನ್ನು ಪಾಸು ಮಾಡಿ ಇಡೀ ದೇಶದಲ್ಲಿಯೇ ಎಲ್ಲರ ಗಮನವನ್ನು ಸೆಳೆದಿದ್ದ ಮಹಾನ್ ವ್ಯಕ್ತಿ ಎಂದರು. ಕಾರ್ಯಕ್ರಮದಲ್ಲಿ ಆದಿಕರ್ನಾಟಕ ಮಹಾಸಂಸ್ಥೆಯ ಮಾಜಿ ಅಧ್ಯಕ್ಷರಾದ ವಿಜಯ್ ಕುಮಾರ್ ಸಿ, ದೊಡ್ಡಗರಡಿಯ ಕಾರ್ಯದರ್ಶಿ ದೊರೆಸ್ವಾಮಿ, ಉಪಾಧ್ಯಕ್ಷರಾದ ಶಿವಸ್ವಾಮಿ, ಮುಖಂಡರುಗಳಾದ ಮಹೇಶ್ (ಜೋಗಿ), ವೆಂಟಕಸ್ವಾಮಿ, ಕಾರ್ಯದರ್ಶಿ ರಾಜ್‍ಮೊಗ, ಖಜಾಂಚಿ ಕೃಷ್ಣಮೂರ್ತಿ, ಪೈಲ್ವಾನರುಗಳಾದ ರಾಜು, ಥಾಮಸ್, ಪುಟ್ಟರಾಜು ಉಪಸ್ಥಿತರಿದ್ದರು. ನಂತರ ಶಿವರಾಮ್ ರವರ ಪುಣ್ಯತಿಥಿಯ ಅಂಗವಾಗಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group