spot_img
spot_img

ಹಿಂದೂಗಳ ಪ್ರಮುಖ ಹಬ್ಬ ಶ್ರೀಕೃಷ್ಣ ಜನ್ಮಾಷ್ಠಮಿ

Must Read

spot_img
- Advertisement -

ಸಿಂದಗಿ; ಭಾರತ ಹಲವಾರು ಸಂಸ್ಕೃತಿ ಹಬ್ಬಗಳ ತವರೂರು ಅದರಲ್ಲಿ ವಿಶೇಷವಾಗಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಠಮಿಯು ಒಂದಾಗಿದೆ ಎಂದು ಬಿಎನ್‌ಬಿ ಫೌಂಡೇಶನ್ ಅಧ್ಯಕ್ಷ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿರುವ ಮಾಂಗಲ್ಯ ಭವನದಲ್ಲಿ ಲಿಟಲ್ ವಿಂಗ್ಸ್ ಸ್ಕೂಲ್ ವತಿಯಿಂದ ಹಮ್ಮಿಕೊಂಡ ಕೃಷ್ಣ ಜನ್ಮಾಷ್ಠಮಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ದಿನವು ಶ್ರೀಕೃಷ್ಣ ಭೂಮಿಯ ಮೇಲೆ ಅವತರಿಸಿದ ಶುಭ ದಿನವನ್ನೇ ನಾವು ಶ್ರೀಕೃಷ್ಣ ಜನ್ಮಾಷ್ಠಮಿ ಎಂದು ಆಚರಿಸುತ್ತೇವೆ. ಸಂಪೂರ್ಣವಾಗಿ ಶ್ರೀಕೃಷ್ಣ ನ ಆರಾಧನೆಗೆ ಈ ದಿನ ಮೀಸಲಾಗಿದೆ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾ ಅಕ್ಕನವರು ಹಿಂದೂಗಳಿಗೆ ಜನ್ಮಾಷ್ಠಮಿ ಬಹಳ ಪ್ರಮುಖವಾದ ದಿನ. ಭಗವಾನ್ ಕೃಷ್ಣನ ಭಕ್ತರು ಈ ಹಬ್ಬವನ್ನು ಪ್ರಪಂಚದಾದ್ಯಂತ ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಕೃಷ್ಣ ಪಕ್ಷದ ಅಷ್ಠಮಿ ತಿಥಿಯ ಈ ಅದೃಷ್ಠದ ದಿನದಂದು ಭಗವಾನ್ ವಿಷ್ಣುವಿನ ಅಭಿವ್ಯಕ್ತಿಯಾದ ಶ್ರೀಕೃಷ್ಣ ನು ಜನಿಸಿದನು. ಶ್ರೀಕೃಷ್ಣನು ವಿಷ್ಣುವಿನ ಒಂಬತ್ತನೇ ಅವತಾರವಾಗಿದೆ ಈ ದಿನ ಶ್ರೀಕೃಷ್ಣನ ಮಗುವಿನ ರೂಪಕ್ಕೆ ಪೂಜೆ ಮಾಡುವುದು ಸಂಪ್ರದಾಯ. ಇಂದು ನಾವೆಲ್ಲರೂ ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಕೃಷ್ಣ ರಾಧೆಯರ ವೇಷವನ್ನು ಹಾಕಿ ಸಂಭ್ರಮಿಸುತ್ತೇವೆ ಅದು ಕೇವಲ ವೇಷಭೂಷಣಕ್ಕೆ ರಾಧಾಕೃಷ್ಣರ ಗುಣಗಳ ಸಂಸ್ಕಾರ ಮತ್ತು ದೈವಿ ಗುಣಗಳನ್ನು ಬೆಳೆಸುವದು ಪಾಲಕರ ಕರ್ತವ್ಯವಾಗಿದೆ ಎಂದರು.

- Advertisement -

ಪತ್ರಕರ್ತ ಟಿ ಕೆ ಮಲಗೊಂಡ, ಜ್ಞಾನಭಾರತಿ ವಿದ್ಯಾಮಂದಿರ ಸಂಚಾಲಕ ಸತೀಶ ಹಿರೇಮಠ ಯಂಕಂಚಿ ಕೆ ಪಿ ಎಸ್ ಪ್ರೌಢಶಾಲಾ ಶಿಕ್ಷಕ ಬಸವರಾಜ್ ಹೂಗಾರ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಅಭಿಷೇಕ್ ಚೌಧರಿ, ಗಣ್ಯ ವರ್ತಕಿ ಕಾವೇರಿ ಮಲ್ಲೇವಾಡಿ, ಗುತ್ತಿಗೆದಾರ ಬಸವರಾಜ ಶಿಲವಂತ, ಸುನಿತಾ ತೇಲಿ, ದಾದಾಪೀರ ಅಂಗಡಿ ಮುಖ್ಯ ಗುರುಮಾತೆ ಪೂಜಾ ಗಾಯಕವಾಡ ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ಭಾರತಿ ಚೌಧರಿ, ಭಾರತಿ ಜೋಗೂರ, ಪೂರ್ಣಿಮಾ ಗುಮಟೆ,ಸಂಗೀತಾ ಕರಾಬಿ, ನಾಗರೇಖಾ, ಸುರುಭಿ,ಪ್ರಿಯಾಂಕಾ, ಸುಷ್ಮಾ ಚೌಧರಿ,ಹೊಸಮನಿ, ಕಾವ್ಯ ಹಿಪ್ಪರಗಿ, ಖುಷ್ಬೂ ಪಾಟೀಲ ಮುನ್ನಾ ಖೇಡ, ಸಂತೋಷ ಇಂಗಳೆ, ಪ್ರಕಾಶ ಸೇರಿದಂತೆ ಮಾತಿತರು ಉಪಸ್ಥಿತರಿದ್ದರು

- Advertisement -
- Advertisement -

Latest News

ಜಾನುವಾರುಗಳಿಗೆ ಉಚಿತ ತಪಾಸಣಾ ಶಿಬಿರ

ಶ್ರೀಮತಿ ಸೋಮವ ಚನ್ನಬಸಪ್ಪ ಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ ಕೆ ಕೊಪ್ಪ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ವತಿಯಿಂದ ಜಾನುವಾರುಗಳಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group