ಕಾಂಗ್ರೆಸ್ ನ ಮುಂದುವರೆದ ಸನಾತನ ವಿರೋಧಿ ಭಾವನೆ
ಬೀದರ: ಜಿಲ್ಲೆಯ ಭಾಲ್ಕಿ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಮತ್ತೊಂದು ಘೋಷವಾಕ್ಯ ಬದಲಾಗಿದೆ. ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಕುವೆಂಪು ಅವರ ಘೋಷವಾಕ್ಯವನ್ನು ಮತ್ತೆ ತಿದ್ದುಪಡಿ ಮಾಡಿ ಜೊತೆಗೆ ಹೊಸ ಘೋಷವಾಕ್ಯ ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ ಎಂಬ ಘೋಷವಾಕ್ಯ ಹಾಕಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಈ ಹೊಸ ಘೋಷವಾಕ್ಯ ಬರೆಯಲು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಿಂದಲೇ ಸೂಚನೆ ಬಂದಿದ್ದು ಈಗಾಗಲೇ ಬಿಸಿಎಂ, ಎಸ್‌ಸಿ- ಎಸ್‌ಟಿ ಹಾಸ್ಟೆಲ್‌ಗಳಲ್ಲಿ ನೂತನ ಘೋಷವಾಕ್ಯ ಬರೆಯಲು ಸೂಚನೆ ನೀಡಲಾಗಿದೆಯೆನ್ನಲಾಗಿದೆ
ಈಗಾಗಲೇ ನಿಟ್ಟೂರು ಸೇರಿದಂತೆ ಹಲವೆಡೆ ಘೋಷವಾಕ್ಯ ಬರೆಯಲಾಗಿದೆ.
ಇತ್ತ ಬಿಜೆಪಿ ನಾಯಕರು ಕಾಂಗ್ರೆಸ್ ನ ಈ ನಡೆಯನ್ನು ಪ್ರಬಲವಾಗಿ ವಿರೋಧಿಸಿದ್ದು ಕಾಂಗ್ರೆಸ್ ಪಕ್ಷ ಎಡಪಂಥೀಯ ವಿಚಾರಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವು ಕಾಂಗ್ರೆಸ್ ನಾಯಕರು ಇದನ್ನು ಸಮರ್ಥಿಸಿಕೊಂಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ