ಸಿಂದಗಿ : ಪ್ರಾಥಮಿಕ ಶಿಕ್ಷಣ ಎಲ್ಲ ಕ್ಷೇತ್ರಕ್ಕೆ ಮೂಲ ತಾಯಿ ಬೇರು ಎಂದು ಹೇಳಲಾಗುತ್ತಿತ್ತು ಇಂದು ಅನುತ್ಪಾದಕ ಕ್ಷೇತ್ರವಾಗಿದೆ ಇಂತಹ ಸಂದರ್ಭದಲ್ಲಿಯು ಗುಣಾತ್ಮಕ ಶಿಕ್ಷಣ ನೀಡಲು ಹೊರಟಿರುವ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹಂದಿಗನೂರ ಸರಕಾರಿ ಪ್ರೌಡಶಾಲೆಯ ಮುಖ್ಯಗುರು ಎಸ್.ಕೆ.ಗುಗ್ಗರಿ ಹೇಳಿದರು.
ಸಮೀಪದ ಕೊರವಾರ ಗ್ರಾಮದ ವೀರಭದ್ರೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಸರಸ್ವತಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶಾರದೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನ ಎಲ್ಲ ಧರ್ಮಗ್ರಂಥಗಳು ಒಂದೇ ಒಂದು ಸದಾಸತ್ಯವನ್ನು ಪ್ರತಿಪಾದಿಸಿವೆ ಸತ್ಯ ಎಂದರೆ ತಂದೆ-ತಾಯಿ ಕಾರಣ ಮಕ್ಕಳು ಸದಾ ಸತ್ಯವನ್ನೆ ಹೇಳಬೇಕು. ಸತ್ಯಕ್ಕೆ ಯಾವಾಗಲು ಜಯವಿದೆ. ಕಾಲ ಕೆಟ್ಟು ಹೋಗಿದೆ ಎನ್ನುವುದು ಶುದ್ಧ ತಪ್ಪು ನಾವು ಮಕ್ಕಳನ್ನು ಬೆಳೆಸುವ ಪರಿ ತಪ್ಪಿಸಿ ನಾವೆ ಮಕ್ಕಳನ್ನು ಕೆಡಿಸಿದ್ದೇವೆ. ಒಂದು ಮಗುವಿಗೆ ತಾಯಿ ಗರ್ಭಾಂಶದಲ್ಲಿಯೇ ಸಂಸ್ಕಾರ ಬರುತ್ತದೆ ಆದರೆ ಶಾಲೆಯಲ್ಲಿ ಸಂಸ್ಕೃತಿ ದೊರೆಯುತ್ತದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದ್ದಾದರೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ ಬೆಂಗಳೂರ ಎಚ್‌ಡಿಎಫ್‌ಸಿ ಬ್ಯಾಂಕಿನ ಉಪಾಧ್ಯಕ್ಷ ದೇವರಾಜಗೌಡ ಪೊಲೀಸಪಾಟೀಲ ಮಾತನಾಡಿ, ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವಾನು ದೇವತೆಗಳು ನೆಲೆಸುತ್ತಾರೆ ಎನ್ನುವಂತೆ ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೇ ತೂಗಬಲ್ಲಳು ಹೆಣ್ಣು ಸಮಾಜದ ಕಣ್ಣು ಇಂತಹ ಅನೇಕ ಉದಾಹರಣೆಗಳನ್ನು ತಾಯಂದಿರಿಗೆ ಕೊಟ್ಟಿದ್ದಾರೆ ಅವರು ಮನಸ್ಸು ಮಾಡಿದ್ದಾದರೆ ಜಗತ್ತಿನ ಚಿತ್ರಣವನ್ನೆ ಬದಲಿಸಬಲ್ಲರು ಆ ಕಾರಣಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಮುಂಚೂಣಿಯಲ್ಲಿ ಬರುತ್ತಿದ್ದಾರೆ. ಇಂತಹ ಹೆಣ್ಣು ಮಗಳು ಒಂದು ಶಿಕ್ಷಣ ಸಂಸ್ಥೆಯನ್ನು ತೆರೆದು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಹೊಸ ಸಮಾಜ ನಿರ್ಮಾಣ ಮಾಡಿದಂತಾಗಿದೆ ಎಂದು ಬಣ್ಣಿಸಿದರು.
ಶಾರದೋತ್ಸವ ಕಾರ್ಯಕ್ರಮವನ್ನು ಗ್ರಾಪಂ ಅದ್ಯಕ್ಷರ ಪ್ರತಿನಿಧಿ ರಫೀಕ ಬ್ಯಾಕೋಡ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಗಮ್ಮ ಮಠ, ಜಯಶ್ರೀ ಪೊಲೀಸಪಾಟೀಲ, ಅಂಜನಾ ಕುಲಕರ್ಣಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಹಾಗೂ ನವೋದಯ, ಸೈನಿಕ, ರಾಣಿ ಚೆನ್ನಮ್ಮ, ಮುರಾರ್ಜಿ ದೆಸಾಯಿ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಂದಿಗನೂರ ಶಾಲೆಯ ಮುಖ್ಯಗುರು ವಿ.ಆರ್.ಕುಲಕರ್ಣಿ, ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಛಾಯಾಗೋಳ, ಕಾಂಚನಾ ನಾಗರಬೆಟ್ಟ, ಭೀಮನಗೌಡ ಕಡಕೋಳ, ಮಾದೇವ ರಾಮನಳ್ಳಿ, ರುಕುಮಪಟೇಲ ವಡಗೇರಿ, ಶರಣಗೌಡ ಪಾಟೀಲ, ಸುಭಾಷಗೌಡ ಪಾಟೀಲ, ಸಂಸ್ಥೆಯ ಅದ್ಯಕ್ಷ ಡಾ.ಶಿವನಗೌಡ ಪೋಲಿಸಪಾಟೀಲ, ಕಾರ್ಯದರ್ಶಿ ರೂಪಾ ಪಾಟೀಲ, ಸುನೀತಾ ಕುಳೇಕುಮಟಗಿ, ಕಸಾಪ ಅದ್ಯಕ್ಷ ಶಿವು ಬಡಾನೂರ, ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಈರಪ್ಪಸಾಹುಕಾರ ಕುಳೇಕುಮಟಗಿ, ಈರನಗೌಡ ಪೊಲೀಸಪಾಟೀಲ, ಶಾಂತಾಬಾಯಿ ಬಿರಾದಾರ, ಹೆಡ್ ಕಾನ್ಸಟೆಬಲ್ ಶಿವಲಿಂಗಪ್ಪ ಬತಗೌಡ, ಸುರೇಶಗೌಡ ಪೋ.ಪಾಟೀಲ, ಪತ್ರಕರ್ತರ ಸಂಘದ ಅದ್ಯಕ್ಷ ಪಂಡಿತ ಯಂಪೂರೆ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಮಕ್ಕಳ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.
ಕಾವ್ಯ ನಾಗರಬೆಟ್ಟ, ಭಾಗ್ಯಶ್ರೀ ಪಾಟೀಲ ಪ್ರಾರ್ಥನಾ ಗೀತೆ ಹಾಡಿದರು. ಅಶ್ವಿನಿ ಪಾಟೀಲ ವರದಿವಾಚನ ಮಾಡಿದರು. ಪ್ರಾಧ್ಯಾಪಕ ಮಹಾಂತೇಶ ನೂಲಾನವರ ನಿರೂಪಿಸಿದರು. ಚಂದ್ರಶೇಖರ ನಾಹಗರಬೆಟ್ಟ ವಂದಿಸಿದರು.