ವಿಶ್ವಾದ್ಯಂತ ಹರಡಿರುವ ಮುಸ್ಲಿಮರಿಗೆ ರಂಜಾನ್ ಎನ್ನುವುದು ಪವಿತ್ರವಾದ ತಿಂಗಳು. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಇದು ಒಂಬತ್ತನೇ ತಿಂಗಳು ಎಂಬ ನಂಬಿಕೆ.
ಅಲ್ಲಾ ಪ್ರಕಾರ, ಕುರಾನ್ ಆಚರಣೆಯು ಮೊದಲ ಭಾಗವೆಂದು ಹೇಳಲಾಗುತ್ತದೆ. ರಂಜಾನ್ ಹಬ್ಬ ಹತ್ತಿರ ಬರುತ್ತಿದೆ. ಇದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಒಂದೇ ಕಡೆ ಸೇರುತ್ತಾರೆ.
ಜಗತ್ತಿನಾದ್ಯಂತ 1.6 ಬಿಲಿಯನ್ ಮುಸ್ಲಿಮರು ಪ್ರತಿದಿನ ಉಪವಾಸ ಮಾಡುತ್ತಾರೆ. ಈ ಆಚರಣೆಯ ವೇಳೆ, ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಟ್ಟಿರುತ್ತಾರೆ. ಲೂನಾರ್ ಕ್ಯಾಲೆಂಡರ್ ಅನ್ನು ಇಸ್ಲಾಂ ಧರ್ಮದವರು ಅನುಸರಿಸುತ್ತಾರೆ.
ಕಾರಣ, ಅದರಲ್ಲಿ ರಂಜಾನ್ ದಿನಾಂಕ ಬದಲಾಗುತ್ತಿರುತ್ತದೆ. ಈ ಆಚರಣೆಯ ನಂಬಿಕೆಯಂತೆ, ಅಲ್ಲಾನೊಂದಿಗಿನ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು, ಉಪವಾಸ ಎಂಬುದು ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ಅದೃಷ್ಟ ಸಂಪಾದನೆ ಮಾಡಲು ಈ ಒಂದು ತಿಂಗಳು ಶ್ರದ್ಧೆಯಿಂದ ಉಪವಾಸವನ್ನು ಆಚರಿಸುತ್ತಾರೆ.
ತಿಂಗಳ ಪ್ರತಿಯೊಂದು ದಿನ ಮುಸ್ಲಿಮರು, ಈ ಹಬ್ಬದ ಆಚರಣೆ ಮೂಲಕ ಅಲ್ಲಾನಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾರೆ. ಇದಕ್ಕಾಗಿ, ಪ್ರಾರ್ಥನೆ, ಕುರಾನ್ ಪಠಣ ಮತ್ತು ದಾನ-ಧರ್ಮದಲ್ಲಿ ತೊಡಗುವುದು ಹಾಗೂ ಸ್ನೇಹಿತರು ಮತ್ತು ಕುಟುಂಬದವ ರೊಂದಿಗೆ ತಮ್ಮ ಒಡನಾಟವನ್ನು ಇನ್ನಷ್ಟು ಗಟ್ಟಿಯಾಗಿಸುತ್ತಾರೆ. ಸೂರ್ಯಾಸ್ತದ ವೇಳೆ, ಉಪವಾಸ ಮುರಿಯುವುದನ್ನು ಇಫ್ತಾರ್ ಎಂದು ಹೇಳಲಾಗುತ್ತದೆ. ಎಲ್ಲರೂ ಒಂದೇ ಕಡೆ ಸೇರುವುದು. ಅದು ಸಾರ್ವಜನಿಕ ಸ್ಥಳವೇ ಆಗಿರಲಿ, ಮನೆಯೇ ಆಗಿರಲಿ. ಒಟ್ಟಾಗಿ ಕುಳಿತು ಆಹಾರವನ್ನು ಸೇವಿಸುತ್ತಾರೆ.
ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಅವಧಿಗೆ ಉಪವಾಸ ಸಮಯವನ್ನು ನಿರ್ಧರಿಸುತ್ತದೆ. ಅದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಿಭಿನ್ನವಾಗಿದೆ. ಉದಾಹರಣೆಗೆ, ಲಂಡನ್ ನಲ್ಲಿ ಉಪವಾಸ ಮಾಡುವ ಅವಧಿ ದೀರ್ಘಾವಧಿಯದ್ದಾಗಿರುತ್ತದೆ. ಈ ಅವಧಿ ಆಸ್ಟ್ರೇಲಿಯಾದ ಸಿಡ್ನಿಗಿಂತ ಅಧಿಕ. ಸಾಮಾನ್ಯವಾಗಿ, ದೈಹಿಕವಾಗಿ ಸಮರ್ಥರಾದವರು ಉಪವಾಸ ಮಾಡುವರು. ಅನಾರೋಗ್ಯದಿಂದ ಬಳಲುತ್ತಿರುವವರು ವಿನಾಯಿತಿ ಪಡೆಯುತ್ತಾರೆ.
ಉಪವಾಸದಲ್ಲಿ ಹೆಚ್ಚು ಸಮಯ ಕಳೆಯವರು. ಅಂದರೆ, ಉಪಹಾರದ ಸಮಯ ಹತ್ತಿರವಾಗುವವರೆಗೂ ತಮ್ಮ ಉಪವಾಸವನ್ನು ಕಡೆಗಳಿಗೆಯವರೆಗೂ ಮುಂದುವರಿಸುತ್ತಾರೆ. ಇದು ಸುಹೂರ್‌ಗಾಗಿ ಸಾಂಪ್ರದಾಯಿಕವಾಗಿ ಎದ್ದೇಳುವುದು. ಸಣ್ಣ ಉಪಹಾರ ಸೇವನೆ ಅಥವಾ ಫಲಾಹಾರ ಇದ್ದಂತೆ. ಇದನ್ನು ಪಾಲಿಸಲೂಬಹುದು ಅಥವಾ ತಪ್ಪಿಸಿಕೊಳ್ಳಬಹುದು.
ರಂಜಾನಿನ ಕೊನೆಯ ಹತ್ತು ದಿನಗಳಲ್ಲಿ ಪ್ರವಾದಿ ಮೊಹಮ್ಮದ್‌ರನ್ನು ಕುರಾನ್ ಮೂಲಕ ನೆನಪಿಸಿಕೊಳ್ಳುವುದು ಎಂಬ ನಂಬಿಕೆ ಇದೆ. ಇದನ್ನು ಸೈಟ್ ಆಫ್ ಪವರ್ ಎಂತಲೂ ಹೇಳುತ್ತಾರೆ. ಈ ಅವಧಿಯಲ್ಲಿ ಮುಸ್ಲಿಮರು ಮಸೀದಿಯಲ್ಲೇ ತಂಗುವುದು ಅಥವಾ ಮಲಗುತ್ತಾರೆ. ಈ ಮೂಲಕ ಧಾರ್ಮಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಾರೆ.
ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಈ ಹಬ್ಬದ ಆಚರಣೆ ವೇಳೆ, ಹೆಚ್ಚು ಹೆಚ್ಚು ಶಾಪಿಂಗ್ ನಡೆಯುತ್ತದೆ. ಮುಸ್ಲಿಮರು ವಾಸವಿರುವ ಏರಿಯಾಗಳನ್ನು ಸಿಂಗರಿಸಿ, ಹಬ್ಬದ ವಾತಾವರಣ ಹಾಗೂ ವಿದ್ಯುದೀಪಾಲಂಕಾರ ಮಾಡಿರುತ್ತಾರೆ. ಸ್ಥಳೀಯ ನಿವಾಸಿಗಳು ತಮ್ಮ ವಾಸಸ್ಥಾನವನ್ನು ಅಲಂಕರಿಸುತ್ತಾರೆ. ಈ ಅವಧಿ ಹಬ್ಬದ ಆಚರಣೆಯ ಆರಂಭವಾಗಿದೆ.
ಮುಸ್ಲಿಮರು ಜತೆಗೂಡಲು ಚಾರಿಟೇಬಲ್ ಟ್ರಸ್ಟ್ ಗಳು ವೇದಿಕೆ ನಿರ್ಮಿಸುತ್ತವೆ. ಅಲ್ಲಿ ಮುಸ್ಲಿಂ ಬಾಂಧವರು ಜತೆ ಸೇರಿ, ಉಪವಾಸ ಮುರಿಯುತ್ತಾರೆ. ಊಟ-ಉಪಹಾರವನ್ನು ಹಂಚಿ ತಿನ್ನಬೇಕೆಂಬುದು ಈ ಆಯೋಜನೆಯ ಮೂಲ ಉದ್ದೇಶ.ಇಸ್ಲಾಂ ಜೀವನ ವ್ಯವಸ್ಥೆಯಲ್ಲಿ ಎರಡು ಹಬ್ಬಗಳಿವೆ
1. ಈದುಲ್ ಫಿತರ್
2. ಈದ್ ಅಲ್ ಅದ್ಹಾ
ಈ ಎರಡೂ ಹಬ್ಬಗಳಿಗೆ ಅದರದ್ದೇ ಆದ ಮಹತ್ವ ಗಳಿವೆ : ರಮಜ್ಹಾನ್ ತಿಂಗಳು ಇಸ್ಲಾಮಿ ಕ್ಯಾಲಂಡರಿನ ಒಂಬತ್ತನೇ ತಿಂಗಳಾಗಿದೆ . ಈ ತಿಂಗಳಿಗೆ ಬಹಳ ಮಹತ್ವವಿದೆ . ಈ ಮಹತ್ವಕ್ಕೆ ಕಾರಣ ಈ ತಿಂಗಳಲ್ಲಿ ಮನುಕುಲದ ಮಾರ್ಗದರ್ಶನಕ್ಕಾಗಿ ಅವತೀರ್ಣ ಗೊಳಿಸಲಾದ ಅಂತಿಮ ಗ್ರಂಥ ಕುರಾನನ್ನು ಅವತೀರ್ಣ ಗೊಳಿಸಲಾಗಿತ್ತು .
ಕುರಾನ್ ಅದನ್ನು ಈ ರೀತಿ ವಿವರಿಸಿದೆ (ಅಧ್ಯಾಯ 2 ಸೂಕ್ತ 185)
ಮಾನವರಿಗೆ ಸಾದ್ಯಂತ ಸನ್ಮಾರ್ಗ , ಮಾರ್ಗದರ್ಶಕ ಮತ್ತು ಸತ್ಯಾಸತ್ಯತೆಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಳಗೊಂಡಿರುವ ‘ಕುರಾನ್’ ಅವತೀರ್ಣಗೊಂಡ ತಿಂಗಳು ರಮಜ್ಹಾನ್ ಆಗಿರುತ್ತದೆ .
ಆದುದರಿಂದ ಯಾರಾದರೂ ಈ ತಿಂಗಳನ್ನು ಪಡೆದರೆ ಅವನು ಆ ಸಂಪೂರ್ಣ ತಿಂಗಳ ಉಪವಾಸ ವ್ರತವನ್ನಾಚರಿಸಬೇಕು. ಯಾರಾದರು ರೋಗಿಯಾಗಿದ್ದರೆ ಅಥವಾ ಪ್ರಯಾಣಿಕನಾಗಿದ್ದರೆ ಆತನು ಇತರ ದಿನಗಳಲ್ಲಿ ಉಪವಾಸ ದಿನಗಳ ಸಂಖ್ಯಯನ್ನು ಪೂರ್ತಿ ಗೊಳಿಸಲು. ಅಲ್ಲಾಹನು ನಿಮಗೆ ಸೌಲಭ್ಯವನ್ನೀಯಲು ಬಯಸುತ್ತಾನೆ, ನಿಮ್ಮನ್ನು ಕಷ್ಟಕ್ಕೀಡು ಮಾಡಲು ಇಚ್ಚಿಸೂದಿಲ್ಲ
ನೀವು ಉಪವಾಸದ ದಿನಗಳನ್ನು ಪೂರ್ತಿಗೊಳಿಸಲು ಅನುಕೂಲವಾಗುವಂತೆಯೂ, ಸನ್ಮಾರ್ಗ ದರ್ಶನದ ಮೂಲಕ ನಿಮ್ಮನ್ನು ಪ್ರತಿಷ್ಟಿತಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾ ಅವನಿಗೆ ಕ್ರತಜ್ಞರಾಗಿರಲಿಕ್ಕ್ಕಾಗಿಯೂ ಈ ವಿಧಾನವನ್ನು ತೋರಿಸಿ ಕೊಡಲಾಗಿದೆ .
ಈ ಸೂಕ್ತದಲ್ಲಿ ಹೇಳಿದಂತೆ ಒಂದು ತಿಂಗಳ ಸಂಪೂರ್ಣ ಉಪವಾಸ ವ್ರತದಲ್ಲಿ ಕುರಾನಿನೊಂದಿಗೆ ಅತೀ ಹೆಚ್ಚು ಸಂಭಂದ ಬೆಳೆಸುವ ಏಪರ್ಾಡು ಕೂಡ ಆದೇಶಿಸಲಾಗಿದೆ.. ರಾತ್ರೆ ದೀರ್ಘ ನಮಾಜನ್ನು ನೆರವೇರಿಸಿ ಕುರಾನ್ನೊಂದಿಗೆ ಗಾಢ ಸಂಭಂದ ಬೆಳೆಸಲಾಗುತ್ತದೆ.
ಹಗಲಿರುಳೂ ಆದರ ಪಠಣ, ಮಾತ್ರವಲ್ಲ ಆದನ್ನು ಅಥರ್ೈಸುವ ಕಾರ್ಯಗಳನ್ನು ಹಮ್ಮಿ ಕೊಳ್ಳಲಾಗುತ್ತದೆ. ಅಷ್ಟು ಮಾತ್ರವಲ್ಲದೆ ದೈನಂದಿಕ ಜೀವನದಲ್ಲಿ ಅದರ ಆದೇಶ ಪಾಲನೆಯನ್ನು ಬಹಳ ಜಾಗ್ರತೆಯಿಂದ ಮಾಡಲಾಗುತ್ತದೆ. ಇ ರೀತಿ ಒಂದು ತಿಂಗಳ ಕೆಡುಕಿನಿಂದ ಸಂಪೂರ್ಣ ದೂರವಾಗಿ ಬರೇ ಒಳಿತನ್ನೇ ಬೆಳೆಸುವ ವಸಂತ ಕಾಲವಿದು.
ಇಡೀ ಲೋಕದಲ್ಲಿ ಒಂದೇ ಸಮಯ ಒಗ್ಗಟ್ಟಾಗಿ ನೆರವೇರಿಸಲಾಗುತ್ತದೆ.. ಸತ್ಯ ನಂಬಿಕೆ ಹೊಂದಿದ, ಪ್ರೌಢ, ಭುದ್ದಿ ಸೀಮಿತವುಳ್ಳ ಧನಿಕ ಬಡವ ಗಂಡು ಹೆಣ್ಣು ಎಂದು ಯಾವ ಭೇದವಿಲ್ಲದೆ ಎಲ್ಲರ ಮೇಲೆ ಕಡ್ಡಾಯ.
ಬರೇ ರೋಗಿಗಳಿಗೆ, ಪ್ರಯಾಣಿಕರಿಗೆ, ಮತ್ತು ಮುಟ್ಟಾದ ಸ್ತ್ರೀಗಳಿಗೆ ಬಿಟ್ಟು ಹೋದ ಉಪವಾಸಗಳನ್ನು ಬೇರೆ ದಿನಗಳಲ್ಲಿ ಇಡಬೇಕಾಗಿದೆ .
ಅದಲ್ಲದೆ ಇದಕ್ಕಿಂತ ಮೊದಲು ಅವತೀರ್ಣ ಗೊಳಿಸಲಾಗಿದ್ದ ಎಲ್ಲ ದೇವ ಗ್ರಂಥಗಳೂ ಇದೇ ತಿಂಗಳಲ್ಲಿ ಅವತೀರ್ಣ ಗೊಂಡಿವೆ ಎಂಬ ಪ್ರವಾದಿ ವಚನವಿದೆ . ಹಾಗಾಗಿ ಈ ಉಪವಾಸ ವ್ರತವು ಗತಿಸಿಹೋದ ಎಲ್ಲಾ ಸಮುದಾಯಗಳ ಮೇಲೂ ಕಡ್ದಾಯವಾಗಿತ್ತೆಂದು ಕುರಾನ್ ಸಾರಿದೆ. ಇಂತಹಾ ಒಂದು ಗ್ರಂಥವನ್ನು ನೀಡಿ ಅದರ ಮೇಲೆ ನಡೆದು, ದೇವ ಪ್ರಜ್ಞೆ ,ದೇವ ಸ್ಥುತಿ, ದೇವ ಧ್ಯಾನ, ದೇವ ಸ್ಮರಣೆ, ದೇವ ಭಯ, ದೇವ ಸಂಪ್ರೀತಿ ಧರ್ಮ ನಿಷ್ಠೆ ಬೆಳಸುವ ತರಬೇತಿಯನ್ನು ನೀಡಿ ಮಾರ್ಗದರ್ಶನ ನೀಡಿದ ಆ ಅಲ್ಲಾಹನಿಗೆ ಕ್ರತಜ್ಞತೆ ಸಲ್ಲಿಸುವ ದಿನವೇ ಈ ಇದುಲ್ ಫಿತರ್ ಹಬ್ಬ.
ಇದು ರಮಜ್ಹಾನಿನ ನಂತರದ ತಿಂಗಳಾದ ಶವ್ವಾಲ್ ಒಂದಕ್ಕೆ ಆಚರಿಸಲಾಗುತ್ತದೆ. ಅಂದು ಉಪವಾಸವಿಡುವಂತಿಲ್ಲ. ಪ್ರಾಥಃ ಬೇಗನೆ ಎದ್ದು ಸ್ನಾನ ಮಾಡಿ ಹೊಸ/ ಉತ್ತಮ ಬಟ್ಟೆಯನ್ನು ಧರಿಸಿ ನಮಾಜ್ಹಿನ ನಂತರ ಅಲ್ಲಾಹನ ಹಿರಿಮೆ ಮಹಿಮೆ ಉಚ್ಚ ಸ್ವರದಲ್ಲಿ ಹೇಳುತ್ತಾ ಮನೆಗೆ ಬಂದು ಏನಾದರು ತುಸು ತಿಂದು ಮತ್ತೆ ಈದ್ಗಾಹ್ ಮೈದಾನಿನಲ್ಲಿ ಎಲ್ಲರೂ ಸೇರಿ ಹಬ್ಬದ ನಮಾಝ್ ನೆರವೇರಿಸಲಾಗುತ್ತದೆ. ಮಸೀದಿಗೆ ಹೋಗುವಾಗ ಅಲ್ಲಿ ನಮಾಜ್ಹ್ ಪ್ರಾರಂಭವಾಗುವವರೆಗೂ ದೇವನ ಮಹಾನತೆಯನ್ನು ಹೊಗಳುತ್ತಾ ಕ್ರತಜ್ಞತೆ ಸಲ್ಲಿಸುತ್ತಿರಲಾಗುತ್ತದೆ. ನಮಾಜ್ಹಿನ ನಂತರ ಜನರಿಗೆ ಉಪವಾಸದ ಈ ತಿಂಗಳಲ್ಲಿ ಗಳಿಸಿದ ಪುಣ್ಯ ಫಲವನ್ನು ,ಮತ್ತು ಆ ಪಡೆದ ತರಬೇತಿಯನ್ನು ಹಾಳು ಗೆಡಹದಂತೆ ಮುಂಬರುವ ಹನ್ನೊಂದು ತಿಂಗಳಿಗಾಗಿ ಜಾಗ್ರತರಾಗಿ ದೇವಾದೇಶಗಳನ್ನು ಪಾಲಿಸುತ್ತಾ ಜೀವಿಸಲು ಪ್ರವಚನವನ್ನು ನೀಡಲಾಗುತ್ತದೆ. ತಿಂಗಳಿಡೀ ಅತೀ ಹೆಚ್ಚು ದಾನ, ಕಡ್ಡಾಯ ದಾನ ಝಕಾತ್ ನೀಡಿ ಬಡವರ ದರಿದ್ರರ ಕಷ್ಟ ದುಖಗಳಿಗೆ ಸ್ಪಂದಿಸುತ್ತಾ ಕಳೆದಿದ್ದರೂ ಈ ಹಬ್ಬದ ನಮಾಜಿನ ಮೊದಲು ಬಡವರಿಗೆ ಹಬ್ಬ ಆಚರಿಸುವಂತೆ ಅಕ್ಕಿಯನ್ನೋ, ಇತರ ಖಾದ್ಯ ಧಾನ್ಯಗಳನ್ನೂ, ಖರ್ಜೂರ, ದ್ರಾಕ್ಷಿ ಗಳನ್ನು ನೀಡಬೇಕಾಗಿದೆ ಈ ದಾನವನ್ನು ‘ಝಾಕಾತುಲ್ ಫಿತರ್’ ಎನ್ನಲಾಗುತ್ತದೆ. ಅದನ್ನು ಈದ್ ನಮಾಜ್ಹಿನ ನಂತರ ನೀಡುವಂತಿಲ್ಲ. ಈ ಫಿತರ್ ದಾನ ದಿಂದಾಗಿ ಈ ಹಬ್ಬಕ್ಕೆ ಈದುಲ್ ಫಿತರ್ ಎಂದು ಹೆಸರಿಸಲಾಗಿದೆ.
ಈ ಹಬ್ಬದ ನಂತರ ಪರಸ್ಪರ ಹಸ್ತಾಲಂಘನ, ಮಾಡುತ್ತಾ ಆಲಂಗಿಸುತ್ತ ಈದ್ ಮುಬರಾಕನ್ನು ಹಾರೈಸುತ್ತಾ ಶುಭ ಕೋರುತ್ತಾ ಪರಸ್ಪರ ಮನೆಗಳಿಗೆ ಭೇಟಿ ನೀಡುತ್ತ ಸೌಹಾರ್ದತೆಯನ್ನು ಎತ್ತಿ ಹಿಡಿಯಲಾಗುತ್ತದೆ. ಉತ್ತಮ ತಿಂಡಿಗಳನ್ನು ಸಿಹಿಯಾದ ಶೀರ್ ಕುರ್ಮವನ್ನು ಹೆಚ್ಚಾಗಿ ಮಾಡಲಾಗುತ್ತದೆ. ಒಟ್ಟಿನಲ್ಲಿ ದೇವನಿಗೆ ಕ್ರತಜ್ಞತೆ ಸಲ್ಲಿಸುವುದು ಮತ್ತು ಜನರೊಂದಿಗೆ ಭಾಂದವ್ಯ ಬೆಳೆಸುವುದು ಹಬ್ಬದ ದಿನದ ಮುಖ್ಯ ಅಂಶವಾಗಿರುತ್ತದೆ. ಒಂದು ಹೊಸ ಜೀವನವನ್ನು ಗತಿಸಿ ಹೋದ ಜೀವನಕ್ಕಿಂತ ಉತ್ತಮ ರೀತಿಯಲ್ಲಿ ನಡೆಸುವಲ್ಲಿ ಈ ಈದ್ ಮೊದಲ ದಿನವಾಗಿರುತ್ತದೆ ಅದಕ್ಕೆ ಬೇಕಾಗಿರುವ ವೈಹಾರಿಕ ಪ್ರೇರಣೆಯನ್ನು ಈ ಈದುಲ್ ಫಿತರ್ ನೀಡುತ್ತದೆ . ಹಾಗಾಗಿ ಈ ಈದ್ ಆಚರಿಸುವಾಗಲೂ ನೈತಿಕತೆಯ ಮಟ್ಟ ಜಾರಿ ಹೋಗದಂತೆ ಬಹಳ ಜಾಗ್ರತೆ ವಹಿಸಬೇಕಾಗುತ್ತದೆ.ರಂಜಾನ್ ಅಥವ ರಮದಾನ್ (ಅರೇಬಿಕ್ ಭಾಷೆಯಲ್ಲಿ: رمضان ) ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ (ಉಪವಾಸ) ಇಸ್ಲಾಮ್‌ನ ಐದು ಕಂಬಗಳಲ್ಲಿ ನಾಲ್ಕನೆಯದು ಹಾಗೂ ರಮದಾನ್‌ನ ಸಮಯದಲ್ಲಿ ಉಪವಾಸ ನಡೆಯುತ್ತದೆ.
ಕ್ರೆಸೆಂಟ್ ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟಿದೆ ಮತ್ತು ರಮದಾನ್ ಸಮಯದಲ್ಲಿ ಸುಂದರವಾಗಿ ಪ್ರಕಾಶಿಸಲ್ಪಟ್ಟಿದೆ.
ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಮದಾನ್ ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರ್ಆನ್ ಅವತೀರ್ಣಗೊಂಡಿತು.ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.
ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ಧಾರ್ಮಿಕವಾಗಿ ಈದ್-ಉಲ್-ಫಿತರ್ ಎಂತಲೂ ಕರೆಯುತ್ತಾರೆ.
ಒಂದು ತಿಂಗಳ ಕಠಿಣ ವ್ರತಾಚರಣೆಯ ಬಳಿಕ ಈದ್-ಉಲ್-ಫಿತರ್ ಬಂದಿದೆ. ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮುಸ್ಲಿಮರೆಲ್ಲರು ಸಮಾನರೆನಿಸಿದರು.
ಅಲ್ಲಿ ಬಡವ – ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವೃತಾಚರಣೆಯಲ್ಲಿ ತೊಡಗಿದರು. ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ತಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು ಈದ್-ಉಲ್-ಫಿತರ್ ಬಂದಿದೆ. ಇದು ದಾನದ ಹಬ್ಬ. ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತ ಮುಸ್ಲಿಮನಿಗೆ ಈಗ ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. ಇಸ್ಲಾಂ ಎಂದೂ ಸಂಪತ್ತಿನ ಕೇಂದ್ರೀಕರಣ ವನ್ನು ವಿರೋಧಿಸುತ್ತದೆ.
ಯಾವತ್ತೂ ಶೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಒಂದಾದ ‘ಝಕಾತ್’ ಇದಕ್ಕೆ ಪುಷ್ಟಿ ನೀಡುತ್ತದೆ. ಅದಲ್ಲದೇ ಹಲವಾರು ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯಗೊಳಿಸುತ್ತದೆ. ಅಂತಹ ಒಂದು ಹಬ್ಬವಾಗಿದೆ ಈದ್-ಉಲ್-ಫಿತರ್.
ಇಸ್ಲಾಂ ಆಚರಿಸುವ ಎರಡೂ ಹಬ್ಬಗಳೂ ದಾನವನ್ನು ಪ್ರೋತ್ಸಾಹಿಸುತ್ತದೆ. ಅದರಲ್ಲೂ ಈಗ ಬಂದಿರುವ ಈದ್-ಉಲ್-ಫಿತರ್ ಸಂದರ್ಭೋಚಿತವಾಗಿ ‘ಧಾನ್ಯ’ ದಾನ ಮಾಡುವುದನ್ನು ಹೇಳುತ್ತದೆ. ಇದು ಪ್ರತೀ ಮುಸ್ಲಿಮನ ಕಡ್ಡಾಯ ಕರ್ಮವಾಗಿದೆ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದಿಂದ ಉಧ್ದೇಶಿಸಲಾಗಿದೆ.
ಒಬ್ಬ ಮುಸ್ಲಿಮ ಆತನ ಈದ್ ದಿನದ ಹಗಲಿನ ಮತ್ತು ಆ ರಾತ್ರಿಯ ಖರ್ಚಿಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಕಡ್ಡಾಯ ವಾಗಿ ದಾನ ನೀಡ ತಕ್ಕದ್ದು. ಅದು ಆ ಊರಿನ ಆಹಾರ ಧಾನ್ಯ ವಾಗಿರಬೇಕು ಮತ್ತು ಅದಕ್ಕಾಗಿ ಒಂದು ಅಳತೆಯನ್ನು ನಿಗದಿಪಡಿಸಿದೆ(ಪ್ರತೀ ವ್ಯಕ್ತಿಯ ಮೇಲೂ ಸುಮಾರು 3 ಕೆಜಿ – ಇದು ಮಝಹಬ್ ಗಳಿಗೆ ಅನುಸರಿಸಿ ಬದಲಾಗಬಹುದು).
ಯಾರೆಲ್ಲ ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನಪಡಯಲು ಅರ್ಹರು. ಆದರೆ ಈ ದಾನದ ಲೆಕ್ಕಾಚಾರದಲ್ಲಿ ಒಬ್ಬಾತನ ಮನೆಯಲ್ಲಿರುವ ಪಾತ್ರೆ ಮೊದಲಾದ ವಸ್ತುಗಳೂ ಒಳಗೊಳ್ಳುತ್ತದೆ. ಅಂದರೆ ಪಾತ್ರೆಗಳನ್ನು ಮಾರಿಯಾದರೂ ದಾನ ನಿಡಬೇಕು!!!. ಮಾತ್ರವಲ್ಲ ಒಂದು ಮನೆಯಲ್ಲಿರುವ ಪ್ರತಿವ್ಯಕ್ತಿಯ ಮೇಲೂ ಈ ದಾನ ಖಡ್ಡಾಯ ವಾಗಿದೆ.
ಹಾಗಿದ್ದರೆ ಯೋಚಿಸಿ ನೋಡಿ ವಿಶ್ವದ ಎಲ್ಲ ಮುಸ್ಲಿಮ ಈ ದಾನವನ್ನು ನೀಡಿದರೆ ಕನಿಷ್ಟ ಒಂದು ವಾರವಾದರೂ ಹಸಿವಿಲ್ಲದ ವಾರ ವಾಗಿರಬಹುದು!!. “ಜಿಹಾದ್-ಜಿಹಾದ್” ಅನ್ನುವ ನಾಮಧಾರಿ ಮುಸ್ಲಿಮ “ಝಕಾತ್ – ಝಕಾತ್” (ದಾನ) ಅಂದರೆ ಇಂದು ಹಸಿವಿನಿಂದ ಸಾಯುವವರ ಸಂಖ್ಯೆ ಬಹಳ ಕಡಿಮೆ ಇರುತ್ತಿತ್ತು.
ಸಾಹೋದಾರ್ಯ ಭಾವ ತುಂಬಿಸುವ ಈದ್ ನ ಈ ದಿನ ಎಲ್ಲರೂ ದಾನ ಕರ್ಮಗಳಿಂದ ಸುಂದರವಾಗಿಸಲು, ಸೃಷ್ಟಿಕರ್ತ ನಮ್ಮನ್ನು ಕರುಣಿಸಲೀ (ಆಮೀನ್) ಎಂದು ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಈದ್-ಉಲ್-ಫಿತರ್ (ಧಾನ್ಯ ದಾನದ ಹಬ್ಬ)ನ ಶುಭಾಶಯಗಳು.
ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು,
ಹತ್ತಿಮತ್ತೂರು