ತಮ್ಮನ ಕುಟುಂಬ ಆತ್ಮಹತ್ಯೆ ಗೆ ಕಾರಣವಾದ ಅಣ್ಣ; ಮೂವರು ಕಂದಮ್ಮಗಳ ಜೊತೆಗೆ ತಂದೆ ಕೂಡ ಸಾವು

Must Read

ಕರುಳು ಹಿಂಡುವ ಈ ದುರಂತ ಘಟನೆಯ ಹಿಂದೆ ಇದೆ ಕ್ರೈಮ್ ಸ್ಟೋರಿ….

ಬೀದರ : ಆಸ್ತಿ ಮಾರಾಟ ಮಾಡಿದ್ದ ಹಣ ಒಡಹುಟ್ಟಿದ ಸಹೋದರ ಹಿಂತಿರುಗಿಸದೇ ಕಾಡಿಸುತ್ತಿರುವ ಹಿನ್ನೆಲೆ ಮನನೊಂದು ಮೂವರು ಪುಟ್ಟ ಪುಟ್ಟ ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ.

ಅದೃಷ್ಟವಶಾತ್ ಬದುಕಿದ ತಾಯಿ ಕರುಳು ಕಿತ್ತು ಬರುವಂತೆ ಕಣ್ಣೀರು ಹಾಕುತ್ತಿದ್ದಾಳೆ, ಸಾಲಭಾಧೆಯಿಂದ ಮನೆ ಮಠ ಬಿಟ್ಟು ದರ್ಗಾ ಸೇರಿಕೊಂಡ ಕುಟುಂಬ ಆತ್ಮಹತ್ಯೆಗೆ ನಿರ್ಧರಿಸಿ ಕಾಲುವೆಗೆ ಹಾರಿದ ಕಣ್ಣೀರಿನ ಕಥೆಯ ಹಿಂದಿನ ವ್ಯಥೆ ಇಲ್ಲಿದೆ ನೋಡಿ…

ಆಸ್ತಿ ಖರೀದಿಸಿದ ಅಣ್ಣನೇ ತಮ್ಮನಿಗೆ ವಿಲನ್ ಆದನೆ ?  ಈ ಘೋರ ದುರಂತದಿಂದ ಇಡೀ ಜಿಲ್ಲೆಯೇ ಒಂದು ಕ್ಷಣ ಬೆಚ್ಚಿಬಿದ್ದಿತ್ತು, ಬದುಕುಳಿದ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು, ಸಾಲದ ಸುಳಿಗೆ ಸಿಲುಕಿ ಮನೆ – ಮಠ ಬಿಟ್ಟು ಭಾಲ್ಕಿ ತಾಲೂಕಿನ ಮರೂರ ಗ್ರಾಮದ ದರ್ಗಾದಲ್ಲಿ ಆಶ್ರಯ ಪಡೆದಿದ್ದ ಶಿವಮೂರ್ತಿ ಕುಟುಂಬ ಮನನೊಂದು ತೆಗೆದುಕೊಂಡ ನಿರ್ಧಾರದಿಂದ ಬಾಳಿ ಬದುಕಬೇಕಾದ ತಂದೆ ಜೊತೆ ಮೂವರು ಕಂದಮ್ಮಗಳು ಸಾವನ್ನಪ್ಪಿವೆ ತಂದೆ ಶಿವಮೂರ್ತಿ ಮಾರುತಿ(45), ರಿತೀಕ್(04), ರಾಕೇಶ್(07), ಶ್ರೀಶಾಂತ್(09) ಹೀಗೆ ಮೂವರು ಮಕ್ಕಳೊಂದಿಗೆ ಕಾಲುವೆ ನೀರಿನ ಪಾಲಾಗಿದ್ದಾರೆ,.ಶಿವಮೂರ್ತಿಯ ಅಣ್ಣನೆ ವಿಲನ್ ಆಗಿದ್ದಾನೆಂದು ಬದುಕುಳಿದ ತಾಯಿ ಕಣ್ಣೀರು ಹಾಕಿದ್ದಾಳೆ,..

ಈ ಘಟನೆಯಲ್ಲಿ ಬದುಕುಳಿದ ರಮಾಬಾಯಿಯ ಅಣ್ಣ ಹೇಳಿದ್ದು….   ನನ್ನ ತಂಗಿ ನನ್ನ ಬಾವ ಸಾಯಬೇಕಿತ್ತು ಆದರೆ ಚಿಕ್ಕ ಮುಗ್ದ ಮಕ್ಕಳು ಸಾವು ಆಗಿದ್ದು ನನಗೆ ಬಹಳ ದುಃಖ ಆಗಿದೆ..ಸಾಲಾ ಆದರೂ ನಾವು ಕೊಡುತ್ತೇವೆ ನೀವು ಚೆನ್ನಾಗಿ ಇರಿ ಎಂದು ಹೇಳಿದರೂ.. ನನ್ನ ಬಾವ ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡರು

ತನಗೆ ಹೆಣ್ಣು ಮಕ್ಕಳಿಲ್ಲ ಎಂದು ದೊಡ್ಡಣ್ಣನ ಹೆಣ್ಣು ಮಕ್ಕಳಿಗೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದ ತಮ್ಮ ಶಿವಮೂರ್ತಿಗೆ ಇನ್ನೊಬ್ಬ ಅಣ್ಣ ಸುರೇಶ ವಿಲನ್ ಆಗಿದ್ದಾನೆ, ಶಿವಮೂರ್ತಿಗೆ ಆದ ಸಾಲ ತೀರಿಸಲಾಗದೇ ತಾವು ವಾಸ ಇರುವ ಮನೆ ನಡುವಿನ ಅಣ್ಣ ಸುರೇಶನಿಗೆ ಮಾರಾಟ ಮಾಡಿದ್ದನಂತೆ, 4 ಲಕ್ಷಕ್ಕೆ ಮನೆ ಖರೀದಿಸಿದ್ದ ಅಣ್ಣ ಸುರೇಶ ಮುಂಗಡವಾಗಿ 1 ಲಕ್ಷ ಹಣ ಕೊಟ್ಟು ಉಳಿದ ಹಣ ವಾಪಸ್ ನೀಡದೇ ಮೂರು ವರ್ಷದಿಂದ ಕಾಡಿಸುತ್ತಿದ್ದ ಪರಿಣಾಮ ಸಾಲಗಾರರ ಕಾಟ ತಾಳಲಾರದೆ ಪತ್ನಿಯ ಊರಲ್ಲಿ ಹೋಗಿ ವಾಸವಾಗಿದ್ದರಂತೆ ಅಲ್ಲಿಯೂ ಸಾಲಗಾರರ ಕಾಟದಿಂದ ಕೆಲದಿನಗಳಿಂದ ಭಾಲ್ಕಿಯ ಮರೂರ ದರ್ಗಾಕ್ಕೆ ಬಂದಿದ್ದರು ಅಲ್ಲಿಯೇ ಕುಟುಂಬ ಆತ್ಮಹತ್ಯೆಗೆ ನಿರ್ಧರಿಸಿದ್ದ ಶಿವಮೂರ್ತಿಗೆ ನಾವು ಉಳಿದು ಏನೂ ಮಾಡೋಣ ಎಂದ ಪತ್ನಿ ಮಾತಿಗೆ ಕುಟುಂಬ ಸಮೇತ ಆತ್ಮಹತ್ಯೆಗೆ ನಿರ್ಧಸಿದ್ದರಂತೆ

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೇಟಿ ನೀಡಿದರು… ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಎಸ್ಪಿ ಪ್ರದೀಪ್ ಗುಂಟಿ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ, ಆಸ್ತಿ ಖರೀಧಿಸಿರುವ ಅಣ್ಣನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಆದರೆ ಅದೇನೇ ಆಗಲಿ ಈ ದಂಪತಿ ತೆಗೆದುಕೊಂಡ ಆತ್ಮಹತ್ಯೆಯ ನಿರ್ಧಾರಕ್ಕೆ ಬಾಳಿ ಬದುಕಬೇಕಿದ್ದ ಮಕ್ಕಳು ಬಲಿಯಾಗಿದ್ದು ಘೋರ ದುರಂತವೆ ಸರಿ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group