spot_img
spot_img

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಾಹಿತ್ಯದ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ

Must Read

- Advertisement -

ಬೆಂಗಳೂರು: ಆಗಸ್ಟ್ 6 ರಂದು ‘ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿ’ನ ಆಶ್ರಯದಲ್ಲಿ ನಗರದ ಹೊಸಕೆರೆಹಳ್ಳಿ ಕೆರೆ ಪರಿಸರದಲ್ಲಿ “ಸಾಹಿತ್ಯದ ಮೂಲಕ ಪರಿಸರ ಜಾಗೃತಿ” ಎಂಬ ವಿಶಿಷ್ಟ-ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಾಹಿತಿ ಎಚ್. ಎಸ್. ವೆಂಕಟೇಶ್ ಮೂರ್ತಿ ಸಾಹಿತ್ಯದ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಪ್ರಕೃತಿಗೆ ಗಾಸಿ ಮಾಡದಿರುವ ಜೀವನ ಕ್ರಮವನ್ನು ನಾವು ರೂಡಿಸಿಕೊಂಡಾಗ ಪ್ರಕೃತಿಯು ನಮ್ಮೊಂದಿಗೆ ಮಾತನಾಡಲೂ ಬಹುದು. ಇದು ಐತಿಹಾಸಿಕ ಸತ್ಯವೂ ಹೌದು ಎಂದು ನುಡಿದರು.

- Advertisement -

ಇತಿಹಾಸದ ಪುಟಗಳಲ್ಲಿ ಈ ಕುರಿತಾಗಿ ಇರುವ ಸತ್ಯಗಳನ್ನು ಅವರು ಬಿಡಿಸಿಟ್ಟರು. ಪ್ರಕೃತಿಯ ಉಳಿವು ಮನುಷ್ಯನ ಬದುಕಿಗೆ ಹೇಗೆ ಅನಿವಾರ್ಯ ಎಂಬ ಸತ್ಯವನ್ನು ಅವರು ಎಳೆ ಎಳೆಯಾಗಿ ವ್ಯಾಖ್ಯಾನಿಸಿ, ಪ್ರಕೃತಿಯನ್ನು ಉಳಿಸಲು ಸೂಕ್ಷ್ಮ ಮನಸ್ಸು ಬೇಕು ಎಂದು ನುಡಿದರು.

ಕೆರೆಗಳನ್ನು ಉಳಿಸಿದರೆ ಅಂತರ್ಜಲ ಹೆಚ್ಚುತ್ತದೆ

-ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಡಗಣಿ ವಿ ಗಣೇಶ

- Advertisement -

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನಕಪುರ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಡಗಣಿ ವಿ ಗಣೇಶ ಅವರು ಮಾತನಾಡಿ, ಕೆಂಪೇಗೌಡರು ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ ಮಳೆ ನೀರು ಕೆರೆ ಸೇರಿ ಯಾವುದೇ ಕಾಲಕ್ಕೂ ಅಂತರ್ಜಲ ಕಡಮೆಯಾಗದಂತೆ ಹಾಗೂ ಕುಡಿಯುವ ನೀರು ಸದಾ ಲಭ್ಯವಾಗುವಂತೆ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ್ದರು ಆದರೆ ಇಂದಿನ ದಿನಗಳಲ್ಲಿ ನಾವು ಕೆರೆಗಳನ್ನು ಉಳಿಸಲು ಹಲವು ಹೆಜ್ಜೆಗಳನ್ನು ಇಡಬೇಕಾಗುತ್ತದೆ ಎಂದು ಉದಾಹರಣೆ ಸಹಿತವಾಗಿ ಅವರು ವಿವರಿಸಿದರು.

ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಿ

-ಲ. ನ. ಶರ್ಮ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಲ. ನ. ಶರ್ಮ ಅವರು ಮಾತನಾಡಿ, ಪ್ಲಾಸ್ಟಿಕ್ ಹಾಗೂ ಕಾಗದದ ವಸ್ತುಗಳನ್ನು ಕಡಿಮೆ ಉಪಯೋಗ ಮಾಡಬೇಕು ಹಾಗು ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸದೇ ಹೋದರೆ ಮುಂದಿನ ದಿನಗಳಲ್ಲಿ ಅದರ ಘೋರ ಅಭಾವವನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಅಭಾಸಾಪ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಹಣ್ಣು ನೀಡುವ ಸಸಿಗಳನ್ನು ಕೆರೆಯ ದಂಡೆಯಲ್ಲಿ ಸ್ಥಳೀಯರ ಸಹಭಾಗಿತ್ವದೊಂದಿಗೆ ನೆಡಲಾಯಿತು ಮತ್ತು ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಸವಿತಾ ಭಟ್ ಹಾಗೂ ಶಾರದಾ ಶ್ರೀ ಪಬ್ಲಿಕ್ ಶಾಲೆಯ ಪುಷ್ಪಾವತಿ ಅವರು ಭಾಗವಹಿಸಿದ್ದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬೆಂಗಳೂರು ಮಹಾನಗರ ಸಂಯೋಜಕರಾದ ವಿಜಯಕುಮಾರ್ ಸ್ವಾಗತಿಸಿ ಬೆಂಗಳೂರು ಮಹಾನಗರದ ಕಾರ್ಯದರ್ಶಿಯಾದ ಶ್ರೀಕಂಠ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕಾರಿಣಿ ಸದಸ್ಯ ವರುಣ್ ವಂದನಾರ್ಪಣೆ ಮಾಡಿದರು. ಬೆಂಗಳೂರು ಮಹಾನಗರ ಸಹಕಾರ್ಯದರ್ಶಿ ಕೃಷ್ಣಮೂರ್ತಿ ಜೋಯಿಸ್ ಉಪಸ್ಥಿತರಿದ್ದರು.


ಚಿತ್ರ: ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ಸಿಂದಗಿ ನೀಲಗಂಗಾ ದೇವಿ ಜಾತ್ರೆ ಸಂಪನ್ನ

ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...
- Advertisement -

More Articles Like This

- Advertisement -
close
error: Content is protected !!
Join WhatsApp Group