ಸಿಂದಗಿ : ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸ್ಕೌಡ್ಸ್ ಮತ್ತು ಗೈಡ್ಸ್ ರೋವರ್ ಮತ್ತು ರೇಂಜರ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಹೊರರಾಜ್ಯ ಮಹಾರಾಷ್ಟ್ರದ ಕೊಲ್ಲಾಪೂರ, ಕನ್ಹೇರಿ ಕ್ಷೇತ್ರಗಳಿಗೆ ೨೦೨೫-೨೬ ನೇ ಸಾಲಿನ ಪರಿಸರ ಅಧ್ಯಯನ ಪ್ರವಾಸ ಕೈಗೊಂಡರು.
ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ಶಿವಯೋಗೆಪ್ಪ ತಾಳಿಕೋಟಿ, ಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ, ಪಿ.ವಿ.ಮಹಲಿನಮಠ, ಎನ್.ಬಿ.ಪೂಜಾರಿ, ಡಾ. ವಿಶ್ವನಾಥ ನಂದಿಕೋಲ, ಸ್ನೇಹಾ ಧರಿ, ಸ್ನೇಹಾ ಕುಲಕರ್ಣಿ, ಬಿ.ಬಿ.ಜಮಾದಾರ, ಎಸ್.ಎಚ್.ಜಾಧವ, ಪ್ರಸನ್ ಜೋಗೂರ, ಸುನೀಲ ಪಾಟೀಲ, ಎಸ್.ಎಸ್.ಹೂಗಾರ, ರಾಹುಲ ನಾರಾಯಣಕರ್, ಪ್ರಿಯಾಂಕಾ ಪಡಶೆಟ್ಟಿ, ಭಾಗ್ಯಶ್ರೀ ಕೆಂಭಾವಿ, ಸೌಮ್ಯಾ ನಿಗಡಿ, ಚಿನ್ಮಯಿ ಬಳಿಗಾರ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಇದ್ದರು.

