ಪರಿಸರ ಕಾವ್ಯ ಕೃತಿ ಲೋಕಾರ್ಪಣೆ

Must Read

ಕವಿ ಹಾಗೂ ಗಸ್ತು ಅರಣ್ಯ ಪಾಲಕ ವೆಂಕಟೇಶ್ ಅವರ ಪ್ರಥಮ ಕೃತಿ ಪರಿಸರ ಕಾವ್ಯ ಕೃತಿಯನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಪಕ್ಷಿ ಸಮೀಕ್ಷೆಯ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಅರಣ್ಯಾಧಿಕಾರಿಗಳು ಲೋಕಾರ್ಪಣೆ ಮಾಡಿದರು.

ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿ.ಎನ್.ಎನ್. ಮೂರ್ತಿ,ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹರ್ಷಕುಮಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಕವಿ ವೆಂಕಟೇಶ್ ಅವರ ಪರಿಸರ ಪ್ರೀತಿ ಹಾಗೂ ವನ್ಯ ಪ್ರಾಣಿಗಳ ಬಗೆಗಿನ ಕಾಳಜಿಯನ್ನು ಶ್ಲಾಘಿಸಿದರು.

ಪರಿಸರ ಕಾವ್ಯ ಕೃತಿಯು ಪರಿಸರ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸಬೇಕೆಂಬ ಚಿಂತನೆಯ ಸುಮಾರು ತೊಂಬತ್ತು ಕವನಗಳನ್ನು ಒಳಗೊಂಡಿದೆ. ಹಿರಿಯ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಈ ಕೃತಿಗೆ ಮುನ್ನುಡಿ ಬರೆದು ಕವಿಗೆ ಶುಭಹಾರೈಸಿದ್ದಾರೆ.

Latest News

ವಾರದ ಸಾಮೂಹಿಕ ಪ್ರಾಥ೯ನೆ ಹಾಗೂ ವಚನ ವಿಶ್ಲೇಷಣೆ.

ಬೆಳಗಾವಿ - ವಚನ ಪಿತಾಮಹ ಡಾ. ಫ .ಗು. ಹಳಕಟ್ಟಿ  ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 08.02.2026ರಂದು ಸಾಮೂಹಿಕ ಪ್ರಾರ್ಥನೆ ಹಾಗೂ ವಚನ...

More Articles Like This

error: Content is protected !!
Join WhatsApp Group