ದೇವಿಯ ಗ್ರಂಥವು ಚಿಂತಾಮಣಿಗಿಂತ ಅಧಿಕ -ಶರಣಬಸವ ಶಾಸ್ತ್ರಿಗಳು

Must Read

ಮುಧೋಳ – ಸಾಧನದಿಂದಾಗದ ಕಾರ್ಯಗಳು ನೆನಹು ಮಾತ್ರದಿಂದಾಗುವುದು ಆದ್ದರಿಂದ ಜಗನ್ಮಾತೆ ದೇವಿಯ ಗ್ರಂಥವು ಕಾಮಧೇನು ಕಲ್ಪವೃಕ್ಷ ಚಿಂತಾಮಣಿಗಳಿಗಿಂತ ಅಧಿಕವಾಗಿದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು.

ಅವರು ತಾಲೂಕಿನ ಸುಕ್ಷೇತ್ರ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಗ್ರಾಮದ ಗ್ರಾಮದೇವತಾ ಆರಾಧನೆ. ವಾರದ ಆಚರಣೆ ನಿಮಿತ್ತ ಶುಕ್ರವಾರ ಬೆಳಿಗ್ಗೆ  ಪ್ರಾರಂಭಗೊಂಡ ದೇವಿ ಪುರಾಣ ಪ್ರವಚನದಲ್ಲಿ ಮಾತನಾಡುತ್ತಾ ಭಕ್ತಿಯಿಂದ ಜಗನ್ಮಾತೆಯ ಚರಿತ್ರೆಯನ್ನು ಪಠಿಸುವುದರಿಂದ ತಾಪತ್ರಯಾದಿಗಳು ಸರ್ವ ದುಃಖಗಳು ಪರಿಹಾರ ಆಗುತ್ತವೆ ಎಂದರು.

ಬಗಳಾ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಯುವ ಮುಖಂಡ ಎಲ್ ಶ್ರೀನಿವಾಸ ಪ್ರಸಾದ್ ಪ್ರಾಥ೯ನೆ ಹೇಳಿದರು. ಆಶ್ರಮದ ಪೂಜ್ಯರಾದ ಕುಮಾರ ಗುರು ಪ್ರಸಾದ ಸ್ವಾಮೀಜಿ ಅವರು ಮಂಗಲಪಾಡಿದರು.

LEAVE A REPLY

Please enter your comment!
Please enter your name here

Latest News

ಕವನ : ಎಡಗೈ ಶಕ್ತಿ

ಎಡಗೈ ಶಕ್ತಿ ಬಲಕ್ಕಿಲ್ಲದ ವೇಗ, ಎಡಕ್ಕಿಹುದು ನೋಡಿ ಯುವರಾಜ್ ಸಿಂಗ್ ನ ಬ್ಯಾಟಿಂಗ್ ಶಕ್ತಿಯಲ್ಲಿ ಹರಿಯಿತು ರನ್ ಮಳೆ ಎಡಗೈಯ ಸವಿನಯ ನಗು ಎಲ್ಲರನು ಮೋಡಿಮಾಡಿದಾಗ ಜಗವೆಲ್ಲ ಕೊಂಡಾಡಿತು ಸಾಧನೆಯನುವಿಷ್ಣುವರ್ಧನ್ ಎಡಗೈ...

More Articles Like This

error: Content is protected !!
Join WhatsApp Group