ಸಂವಿಧಾನದಿಂದ ಸಮಾನತೆ ಸಿಕ್ಕಿದೆ – ವಿಠ್ಠಲ್ ಕೋಳೂರ

Must Read

ಸಿಂದಗಿ: ಸ್ವಾತಂತ್ರ್ಯಾನಂತರ ದೇಶ ಶೈಕ್ಷಣಿಕವಾಗಿ ಹಿಂದುಳಿದಿತ್ತು ಶೇ. 15 ರಷ್ಟು ಶಿಕ್ಷಣ ಹೊಂದಿದ ದೇಶವನ್ನು ಪ್ರತಿಯೊಬ್ಬ ಭಾರತೀಯನಿಗೆ ಶಿಕ್ಷಣ ನೀಡಲು ಸಂವಿಧಾನ ಅವಕಾಶ ಕಲ್ಪಿಸಿಕೊಟ್ಟಿದೆ. ಜಾತಿ, ಮತ, ಲಿಂಗ ಭೇದವನ್ನು ಮಾಡದೆ ಪ್ರತಿ ಭಾರತೀಯನಿಗೆ ಸ್ವಾತಂತ್ರ್ಯ ಸಮಾನತೆಯನ್ನು ನೀಡಿದೆ ಎಂದು ಭೀಮಾ ಶಾಲೆಯ ಅಧ್ಯಕ್ಷ ವಿಠ್ಠಲ್ ಕೋಳೂರ ಹೇಳಿದರು.

ಪಟ್ಟಣ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ ದಲ್ಲಿ ಬುಧವಾರ ಹಮ್ಮಿಕೊಂಡಿದ್ದ 73 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಡಾ ರಾಜೇಂದ್ರ ಪ್ರಸಾದವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿಕೊಂಡು ಡಾ ಬಿ.ಆರ್ . ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಲು ಪ್ರಾರಂಭಿಸಿದರು.ಅನ್ಯ ದೇಶದ ಪ್ರಜಾಪ್ರಭುತ್ವ ರಾಷ್ಟ್ರಗಳ ಉತ್ತಮವಾದ ಅಂಶವನ್ನು ತೆಗೆದುಕೊಂಡು ನಮ್ಮ ದೇಶಕ್ಕೆ ಅನುಕೂಲವಾಗುವಂತಹ ದೃಷ್ಟಿಯನ್ನು ಇಟ್ಟುಕೊಂಡು ಕೆಲವೂಂದು ಅಂಶವನ್ನು ತೆಗೆದುಕೊಂಡರು, ಸುಮಾರು 500 ಕ್ಕಿಂತ ಹೆಚ್ಚು ರಾಜ್ಯಗಳಾಗಿ ವಿಂಗಡನೆಯಾಗಿದ್ದು ಅವುಗಳನ್ನು ಒಗ್ಗೂಡಿಸಿ ಅತ್ಯಂತ ಬಲಿಷ್ಢ ರಾಷ್ಟ್ರವನ್ನಾಗಿ ಮಾರ್ಪಡಿಸಿದರು.

ಅನ್ಯ ದೇಶದಲ್ಲಿ  ಮಹಿಳೆಯರಿಗೆ ಮತದಾನದ ಹಕ್ಕು ನೀಡಿಲ್ಲ ಆದರೆ ನಮ್ಮ ದೇಶದಲ್ಲಿ 18 ವರ್ಷ ತುಂಬಿರುವ ಪ್ರತಿ ಹೆಣ್ಣು ಮಕ್ಕಳಿಗೆ ಮತದಾನವನ್ನು ಮಾಡುವ ಹಕ್ಕು ನೀಡಿದೆ, ರಾಜಕೀಯವಾಗಿ ಎಲ್ಲರೂ ಚುನಾವಣೆ ಜನಪ್ರತಿನಿಧಿಯಾಗಿ ನಿಲ್ಲುವ ಹಕ್ಕು ನಮ್ಮ ಸಂವಿಧಾನ ನೀಡಿದೆ,  ಇಂದು ಗ್ರಾಮೀಣ, ನಗರ, ಕೇಂದ್ರಾಡಳಿತ ಪ್ರದೇಶಗಳೆಲ್ಲ ಅಭಿವೃದ್ಧಿ ಪಥದತ್ತ ಸಾಗುತ್ತಿವೆ ಎಂದು ಹೇಳಿದರು.

ಶಾಲೆಯ ಪ್ರಾಂಶುಪಾಲರಾದ ಎಸ್.ಪಿ.ಶಾಹಿಮೋಲ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಸಂವಿಧಾನವನ್ನು ರಚಿಸಬೇಕಾದರೆ ನಮ್ಮ ನಾಯಕರ ಒಗ್ಗಟ್ಟು ಪರಿಶ್ರಮ ತುಂಬಾ ಇದೆ. ಸ್ವಾತಂತ್ರ್ಯ ಬಂದಾಗ ಭಾರತ ದೇಶವು ತುಂಬಾ ಬಡತನ ಹಾಗೂ ಹಸಿನಿಂದ ಬಳಲುತ್ತಿತ್ತು ಆ ಸಂದರ್ಭದಲ್ಲಿ ನಮ್ಮ ನಾಯಕರು ದಿಟ್ಟ ಹೆಜ್ಜೆ ಇಟ್ಟು  ದೇಶವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಿದರು ಎಂದು ಹೇಳಿದರು.

ಸಹ ಶಿಕ್ಷಕ ಅಭಿಷೇಕ ಅವರು ನಿರೂಪಿಸಿದರು.

ಕೋವಿಡ್-19 ಸರ್ಕಾರದ ನಿಯಮದ ಪ್ರಕಾರ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕಾರ್ಯಕ್ರವನ್ನು ಮಕ್ಕಳು ಆನ್ಲೈನ್ ಮುಖಾಂತರ ವಿಕ್ಷಿಸಿದರು.

ಸಹ ನಿರ್ದೆಶಕರಾದ ಡಾ. ಎಂ.ಎಂ. ಪಡಶೆಟ್ಟಿ, ಜಿ.ಕೆ. ಪಡಗಾನೂರ, ಶರಣು ಮಾವೂರ, ಭೀಮಾಶಂಕರ ತಾರಾಪೂರ. ಪ್ರಶಾಂತ ಕಮತಗಿ, ಶಾಂತು ಕುಂಬಾರ, ದತ್ತು ಮಾವೂರ, ಶ್ರೀಮಂತ ಮಲ್ಲೇದ, ಸಂಯೋಜಕರಾದ ಟ್ಯಾನಿ ರಾಬಿನ್ ಸಹ ಶಿಕ್ಷಕರು ಭಾಗವಹಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group