ಸಾವಿತ್ರಿ ಬಾಯಿ ಫುಲೆ ಜಯಂತ್ಯುತ್ಸವ
ಬೆಳಗಾವಿ :-ಅಕ್ಷರದ ಅವ್ವ ಎಂದೇ ಖ್ಯಾತರಾಗಿರುವ ಸಾವಿತ್ರಿ ಭಾಯಿ ಫುಲೆ ಯವರು ಶಿಕ್ಷಣದ ಮೂಲಕ ಕ್ರಾಂತಿ ಮಾಡಿದವರು, ಸಮಾಜ ಸುಧಾರಕರಾದ ಜ್ಯೋತಿಭಾ ಫುಲೆ ದಂಪತಿಗಳು ತಮ್ಮ ಬದುಕಿನಲ್ಲಿ ಅನೇಕ ರೀತಿಯಲ್ಲಿ ತೊಂದರೆ ಅನುಭವಿಸಿ ಅವುಗಳನ್ನು ಎದುರಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು, ಅವರ ಶೈಕ್ಷಣಿಕ ಕಾಳಜಿಯ ಕಾರ್ಯಗಳು ಸದಾ ಕಾಲ ಸ್ಮರಣೀಯ ಎಂದು ವಿಧಾನ ಪರಿಷತ್ ಸದಸ್ಯರು, ಶೈಕ್ಷಣಿಕ ಚಿಂತಕರಾದ ಡಾ, ಸಾಬಣ್ಣ ತಳವಾರ ಅಭಿಪ್ರಾಯ ಪಟ್ಟರು
ಅವರು ಕರ್ನಾಟಕ ರಾಜ್ಯ ಬರಹಗಾರರ ಸಂಘ ಜಿಲ್ಲಾ ಘಟಕ ಹಾಗೂ ಜಿಲ್ಲಾ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಾವಿತ್ರಿ ಭಾಯಿ ಫುಲೆ ಜಯಂತಿ ಉತ್ಸವದ ಅಂಗವಾಗಿ ಜಯಂತಿ ಹಾಗೂ ವಿವಿಧ ಸಾಧಕರಿಗೆ ಪ್ರಶಸ್ತಿ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದರು
ಅನಾಥರು, ದೀನ ದಲಿತರ ಮಕ್ಕಳಿಗೆ, ವಿಧವೆಯರಿಗೆ ಶಿಕ್ಷಣ ನೀಡಲು ಶ್ರಮಿಸಿದರು, ಸಮಾಜ ಸೇವೆಗೆ ಜೀವನವನ್ನೇ ಮುಡಿಪಾಗಿಟ್ಟ ಅವರು ಸದಾಕಾಲ ಸ್ಮರಣೀಯರು ಸರಕಾರಿ ಶಾಲೆಗಳು ಇಂದು ಸರ್ವ ರೀತಿಯಿಂದ ಅಭಿವೃದ್ಧಿ ಯಾಗಬೇಕು ಬೌದ್ಧಿಕ ಮೌಲ್ಯ ಬೆಳಸಬೇಕು ಶಿಕ್ಷಣ ದಿಂದಲೇ ರಾಷ್ಟ್ರ ಭವಿಷ್ಯ ನಿಂತಿದೆ, ಶಿಕ್ಷಣ ದಿಂದಲೇ ಸಮ ಸಮಾಜದ ನಿರ್ಮಾಣ ಸಾಧ್ಯ ಎಂದರು
ಜೊತೆಗೆ ಸರಕಾರಿ ಶಾಲೆಗಳ ಸಬಲೀಕರಣ ಕುರಿತು ವಿವರವಾಗಿ ಮಾತನಾಡಿದರು ಶೈಕ್ಷಣಿಕ ಸಾಧನೆ ಮಾಡಿದವರಿಗೆ ಸಾವಿತ್ರಿ ಭಾಯಿ ಫುಲೆ ಜಿಲ್ಲಾ ಪ್ರಶಸ್ತಿಯನ್ನು ಡಿ ಡಿ ಪಿ ಐ ರವರಾದ ಶ್ರೀಮತಿ ಎಲ್ ಎಸ್ ಹಿರೇಮಠ ರವರು ಪ್ರದಾನ ಮಾಡಿ ಮಾತನಾಡಿ ಶೈಕ್ಷಣಿಕ ಪ್ರಗತಿಗೆ ಸಮುದಾಯದ ಬೆಂಬಲ ಸಹಕಾರ ಬೇಕೆಂದರು
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುರೇಶ ಸಕ್ರೆನವರ ವಹಿಸಿ ಮಾತನಾಡಿ ಸಂಘದ ಕಾರ್ಯಕ್ರಮ ಚಟುವಟಿಕೆಗಳನ್ನು ವಿವರಿಸಿದರು
ಮುಖ್ಯ ಅತಿಥಿಗಳಾಗಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಯವರು ಮಾತನಾಡಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಶಿಕ್ಷಕಿಯರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು
ಜಿಲ್ಲಾ ಬರಹಗಾರರ ಸಂಘದ ಗೌರವಾಧ್ಯಕ್ಷರಾದ ಬಸವರಾಜ ಸುಣಗಾರ ರವರು ಮಾತನಾಡಿ ಸಂಘದ ಕಾರ್ಯ ಚಟುವಟಿಕೆ ವಿವರಿಸಿ ಮುಂದಿನ ಕಾರ್ಯಗಳಿಗೆ ಸರ್ವರ ಸಹಕಾರ ಬಯಸಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ದಾಸಪ್ಪನವರ, ಬಿ ಆರ್ ಸಿ ಸಮನ್ವಯಾಧಿಕಾರಿ ಎಮ್ ಎಸ್ ಮೇದಾರ, ಶಿಕ್ಷಕರ ಪರಿಷತ್ತಿನ ಅಧ್ಯಕ್ಷರಾದ ಸಂಗಮೇಶ ಖನ್ನಿನಾಯ್ಕರ, ಸಾವಿತ್ರಿಭಾಯಿ ಫುಲೆ ಸಂಘದ ಜಿಲ್ಲಾಧ್ಯಕ್ಷೆ ನಸ್ರಿನ ಬಾನು ಕಾಶಿಮನವರ, ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷೆ ಚಾಂದಬಿ ಕಲಾಲ, ಪ್ರಧಾನ ಕಾರ್ಯದರ್ಶಿ ಮೈಲಾರ ಹೊರಕೇರಿ, ಅಹಿಂದ ನೌಕರರ ಸಂಘದ ಅಧ್ಯಕ್ಷರಾದ ಬಿ ಡಿ ತಮ್ಮಣ್ಣವರ ಆಗಮಿಸಿ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು
ಈ ಸಮಾರಂಭದಲ್ಲಿ ಶೈಕ್ಷಣಿಕ ಕಾರ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಐವತ್ತು ಜನ ಶಿಕ್ಷಕಿಯರಿಗೆ ಜಿಲ್ಲಾ ಮಟ್ಟದ ಸಾವಿತ್ರಿಭಾಯಿ ಫುಲೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು
ಶಿಕ್ಷಕಿಯರಾದ ಗಂಗಮ್ಮ ಪಾಟೀಲ ಕಾರ್ಯಕ್ರಮ ನಿರ್ವಹಣೆ ಮಾಡಿದರು, ಶಿಕ್ಷಕ ಲಕ್ಷ್ಮಣ ಮೇತ್ರಿ ಪ್ರಾರ್ಥಿಸಿದರು ಎಮ್ ವಿ ಹಿರೇಮಠ ವಂದಿಸಿದರು
ಈ ಕಾರ್ಯಕ್ರಮಕ್ಜೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಶಿಕ್ಷಣಾಭಿಮಾನಿಗಳು,ಶಿಕ್ಷಕರು ಶಿಕ್ಷಕಿಯರು ಆಗಮಿಸಿದ್ದರು ಯಶಸ್ವಿಗಾಗಿ ಸಂಘಟಕರಾದ ಸುರೇಶ ಸಕ್ರೆನವರ, ಬಸವರಾಜ ಸುಣಗಾರ, ಪುಷ್ಪಾ ಖನ್ನಿನಾಯ್ಕರ, ಗೀತಾ ಮಡಿವಾಳರ, ಮಹೇಶ ನಿಲಜಿ, ಬಸವರಾಜ ಮೇದಾರ, ಪ್ರವೀಣ ಪಾಲೇಕರ, ಡಿ ಡಿ ಹೋಳಿ, ಯವರು ಶ್ರಮಿಸಿದರು