ನವದೆಹಲಿಯಲ್ಲಿ ರೈಲ್ವೆ ಬೋರ್ಡ ಚೇರಮನ್ ಜಯಾವರ್ಮ ಸಿನ್ಹಾ ಅವರನ್ನು ಮಂಗಳವಾರ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ, ಬೆಳಗಾವಿ ಜಿಲ್ಲೆಯ ರೈಲ್ವೆಗೆ ಸಂಬಂಧಪಟ್ಟಂತಹ ವಿಷಯಗಳ ಕುರಿತು ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಿದರು.
ಜಯಾವರ್ಮ ಸಿನ್ಹಾ ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.
ಅನಂತರ ಕೇಂದ್ರ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ದ್ವಿವೇದಿ ಅವರನ್ನೂ ಕೂಡ ಈರಣ್ಣ ಕಡಾಡಿ ಅವರು ಭೇಟಿಯಾಗಿ, ಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಕೇಂದ್ರಗಳು ಮತ್ತು ಚಾನೆಲ್‌ಗಳ ಸ್ಥಾಪನೆಗೆ ಮನವಿ ಮಾಡಿದರು.
ಗೌರವ್ ದ್ವಿವೇದಿ ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರಸ್ತಾವನೆ ಪರಿಶೀಲಿಸಿ, ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬೆಳಗಾವಿ ಕೋರ್ ಡೆವಲಪ್‌ಮೆಂಟ್ ಗ್ರೂಪ್ ಸದಸ್ಯರಾದ ಶೈಲೇಶ್ ಯಲಮಳ್ಳಿ, ಅಶ್ವಿನ್ ಪಾಟೀಲ್, ಸಂದೀಪ್ ಪಾಟೀಲ್ ಉಪಸ್ಥಿತರಿದ್ದರು.