ಅಂಡಮಾನ್ ಜೈಲಿಗೆ ಭೇಟಿ ನೀಡಿದ ಸಂಸದ ಈರಣ್ಣ ಕಡಾಡಿ

Must Read

ಬೆಂಗಳೂರು – ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಇಂದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರಿಗೆ ಸಿಂಹ ಸ್ವಪ್ನರಾಗಿದ್ದ ವೀರ ಸಾವರ್ಕರ್ ಸೇರಿದಂತೆ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಅಂಡಮಾನಿನ್ ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಿದರು.

ಬ್ರಿಟೀಷರು ಭಾರತೀಯ ಜನರಿಂದಲೇ ಜೈಲು ನಿರ್ಮಿಸಿದ್ಧರು. ಭಾರತೀಯರನ್ನೇ ಬಂಧಿಸುತ್ತಿದ್ದರು, ಭಾರತೀಯ ಜನರಿಂದಲೇ ಖೈದಿಗಳನ್ನು ಹೊಡೆಸುತ್ತಿದ್ದರು ಇದೆಂಥ ವಿಪರ್ಯಾಸ.

ಖೈದಿಗಳ ಯಾತನೆಯ ಬದುಕು ನೆನೆದು ಮತ್ತು ಹಗ್ಗಕ್ಕೆ ಚುಂಬಿಸಿ ನಗು ನಗುತ್ತಾ ಪ್ರಾಣ ತ್ಯಾಗ ಮಾಡಿದ ಹಲವು ಯುವ ಸ್ವಾತಂತ್ರ್ಯ ಸೇನಾನಿಗಳ ನೆನೆದು ಕಣ್ಣುಗಳು ತುಂಬಿ ಬಂದವು, ಮನಸ್ಸು ಭಾರವಾಯಿತು ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

ಅಂದು ಬ್ರಿಟಿಷರ ಎದುರು ಹೋರಾಟ ಮಾಡಿ ಬಲಿದಾನಗೈದ ಆ ಎಲ್ಲ ವೀರರ ಬಲಿದಾನ ವ್ಯರ್ಥವಾಗದಂತೆ ಮಾಡುವ ಗುರುತರ ಹೊಣೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ ಎಂದು ಕಡಾಡಿ ಹೇಳಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group