ಹಿಂಡಲಗಾ ಬಿಜೆಪಿ ಕಾರ್ಯಾಲಯಕ್ಕೆ ಈಶ್ವರಪ್ಪ ಭೇಟಿ

Must Read

ಬೆಳಗಾವಿ – ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ವಿಜಯ ನಗರ, ಹಿಂಡಲಗಾ ಕಾರ್ಯಾಲಯಕ್ಕೆ ಮಾಜಿ ಪಂಚಾಯತ ರಾಜ್ ಮಂತ್ರಿಯಾದ ಕೆ.ಎಸ್. ಈಶ್ವರಪ್ಪ ಶನಿವಾರ ಭೇಟಿ ಕೊಟ್ಟರು.

ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಅವರು ಈಶ್ವರಪ್ಪ ಅವರನ್ನು ಸ್ವಾಗತಿಸಿ ಸತ್ಕರಿಸಿದರು. ಈ ಸಮಯದಲ್ಲಿ ಉಪಸ್ಥಿತರಿದ್ದ ಬಿಜೆಪಿ ಎಲ್ಲ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಕಾರ್ಯಾಲಯವು ಕಾರ್ಯಕರ್ತರ ದಾನಶೂರ ಪ್ರವೃತ್ತಿಯಿಂದ ನಡೆಯುತ್ತದೆ ಎಂದು ಕೇಳಿ ಆನಂದ ವಾಯಿತು. ಇದರಲ್ಲಿ ಧನಂಜಯ ಜಾಧವ ಇವರ ಸಂಘಟನೆಯನ್ನು ಹೇಗೆ ಮಾಡಬೇಕೆಂದು ತಿಳಿಯುತ್ತದೆ. ನಾನೂ ಕೂಡಾ ಹೀಗೆಯೇ ಸಂಘಟನೆಯ ಮೂಲಕ ಬಂದ ವ್ಯಕ್ತಿಯನ್ನು ಬರುವ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯನ್ನಾಗಿ ಮಾಡಿದರೆ, ಈ ಗ್ರಾಮೀಣ ಕ್ಷೇತ್ರವು ಬಿಜೆಪಿಯದಾಗುತ್ತದೆ ಎಂದು ಹೇಳಿದರು.
ಈ ಸಮಯದಲ್ಲಿ ಬಿಜೆಪಿಯ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group