ಹಳ್ಳೂರ – ಮಾಳಿ , ಮಾಲಗಾರ ಸಮಾಜದ ನಿಗಮ ಸ್ಥಾಪನೆಯನ್ನು ವಿಳಂಬ ಮಾಡದೆ ಅತಿ ತುರ್ತಾಗಿ ಮಾಡಬೇಕು ಏಕೆಂದರೆ ಈ ಸಮಾಜದವರು ಕಾಯಿಪಲ್ಲೆ,ಹೂ ಹಣ್ಣು ಮಾರಿಕೊಂಡು ಬದುಕುವ ಹಿಂದುಳಿದ ಸಮಾಜವಾಗಿದೆ ಹಿಂದಿನ ಬಿಜೆಪಿ ಸರಕಾರ 21/2/2023ರಂದು ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ನಡೆದ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಮುಖ್ಯಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ಮಾಳಿ, ಮಾಲಗಾರ ಸಮಾಜದ ನಿಗಮ ಘೋಷಣೆ ಮಾಡಿದ್ದಾರೆ . ಕಾಂಗ್ರೆಸ್ ಸರಕಾರ ಮಾಳಿ ಸಮಾಜದ ನಿಗಮವನ್ನು ಯಾವುದೇ ರೀತಿಯಲ್ಲಿ ಕಾರ್ಯರೂಪಕ್ಕೆ ತರದೇ ಇರುವುದು ವಿಪರ್ಯಾಸ ಸಂಗತಿಯಾಗಿದೆ ಅತೀ ಶೀಘ್ರವೇ ಮಾಳಿ, ಮಾಲಗಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಘೋಷಣೆ ಮಾಡಿ ಕಾರ್ಯರೂಪಕ್ಕೆ ತಂದು ನ್ಯಾಯ ಒದಗಿಸಬೇಕೆಂದು ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆ ಅವರು ಬೆಂಗಳೂರ ವಿಧಾನ ಸೌಧ ಅಧಿವೇಶನದಲ್ಲಿ ಸಭಾ ಅಧ್ಯಕ್ಷರಿಗೆ ಹಾಗೂ ಸರಕಾರವನ್ನು ಒತ್ತಾಯಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ,ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರು ಶಾಸಕ ದುರ್ಯೋಧನ ಐಹೊಳೆ ಅವರನ್ನೂ ಬೆಟ್ಟಿಯಾಗಿ ವಿಧಾನ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾಳಿ, ಮಾಲಗಾರ ಸಮಾಜದ ನಿಗಮ ಸ್ಥಾಪನೆ ಮಾಡಲು ಧ್ವನಿ ಎತ್ತಿ ಸರಕಾರವನ್ನು ಒತ್ತಾಯಿಸಿದ್ದಕ್ಕೆ ನನ್ನ ವೈಯಕ್ತಿಕ ಹಾಗೂ ಕರ್ನಾಟಕ ರಾಜ್ಯದ ಮಾಳಿ ಸಮಾಜದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮ್ಮ ಸಮಾಜಕ್ಕೇ ಬಹು ದಿನಗಳ ಬೇಡಿಕೆ ರಾಜ್ಯದ 25 ಲಕ್ಷಕ್ಕಿಂತ ಹೆಚ್ಚು ಜನರ ಬೇಡಿಕೆಯನ್ನು ಈಡೇರಿಸಿ ಕನಸು ನನಸಾಗಿಸಿ ನಿಗಮ ಸ್ಥಾಪನೆ ಮಾಡಿದರೆ ಅವರನ್ನು ನಮ್ಮ ಸಮಾಜ ಎಂದಿಗೂ ಮರೆಯುದಿಲ್ಲ ನಿಮ್ಮ ಬೆಂಬಲಕ್ಕೆ ಸದಾ ಸಿದ್ಧರಿದ್ದೇವೆ. ಸಮಾಜ ಬಾಂಧವರು ನಿಗಮ ಸ್ಥಾಪನೆ ಮಾಡಲು ಆಯಾ ಕ್ಷೇತ್ರದ ಶಾಸಕರ ಮೇಲೆ ಒತ್ತಡ ಹೇರಬೇಕು, ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರಕ್ಕೆ ಒತ್ತಡ ಹಾಕಿದಾಗ ಮಾತ್ರ ನಿಗಮ ಸ್ಥಾಪನೆ ಆಗುತ್ತದೆ ಎಂದು ಹೇಳಿದರು.