ಎಸ್ ಎಸ್ ರವಿಗೌಡ – ದಿವ್ಯ ಸುರೇಶ್(ಬಿಗ್ ಬಾಸ್) ಅಭಿನಯದ ಚಿತ್ರ ಫೆಬ್ರವರಿ 11ರಂದು ಬಿಡುಗಡೆಯಾಗಲಿದೆ.
ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಸ್ ಎಸ್ ರವಿಗೌಡ ಹಾಗೂ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ನಾಯಕ -ನಾಯಕಿಯಾಗಿ ಅಭಿನಯಿಸಿರುವ “ರೌಡಿ ಬೇಬಿ” ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರ ಫೆಬ್ರವರಿ 11ರಂದೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Warfoot studios ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಈಪುರು ಕೃಷ್ಣ ನಿರ್ದೇಶನ ಮಾಡಿದ್ದಾರೆ. ಸಾಮ್ರಾಟ್ ಛಾಯಾಗ್ರಹಣ, ಅಭಿಷೇಕ್ ಹಿನ್ನೆಲೆ ಸಂಗೀತ, ಅರ್ಮಾನ್ ಮೆರುಗು ಸಂಗೀತ ನಿರ್ದೇಶನ ಹಾಗೂ ವೆಂಕಿ ಯುಡಿವಿ ಅವರ ಸಂಕಲನ ಈ ಚಿತ್ರಕ್ಕಿದೆ.
ಎಸ್ ಎಸ್ ರವಿಗೌಡ ಅವರಿಗೆ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ಹಾಗೂ ಹೀರಾ ಕೌರ್ ನಾಯಕಿಯರಾಗಿ ನಟಿಸಿದ್ದಾರೆ. ಅಮಿತ್, ಕೆಂಪೇಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಒಂದು ವಿಭಿನ್ನ ಲವ್ ಸ್ಟೋರಿ ಜೊತೆಗೆ ನಿಮ್ಮನ್ನು ರಂಜಿಸಲು ಬರುತ್ತಿರುವ ರೌಡಿ ಬೇಬಿ ಚಿತ್ರ ಯಶಸ್ವಿಯಾಗಿ ಶತದಿನ ಪೂರೈಸಲಿ ಎಂಬುದೇ ನಮ್ಮ ಆಶಯ.