ಮೂಡಲಗಿ : ಇಂದಿನ ದಿನಮಾನದಲ್ಲಿ ಹಣಗಳಿಸುವುದು ಮುಖ್ಯವಲ್ಲ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ಬಹಳ ಮುಖ್ಯವಾಗಿದೆ ಇಲ್ಲಿಯ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪಾ ಗಡಾದ ಹೇಳಿದರು.
ಪಟ್ಟಣದ ಗುಡ್ಡಮಡ್ಡಿ ಈರಣ್ಣ ದೇವಸ್ಥಾನ ಬಳಿಯ ಸಂಕಲ್ಪ ಶಿಕ್ಷಣ ಸಂಸ್ಥೆಯಿಂದ ಯುರೋ ಕಿಡ್ಸ್ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳ ಮನಸ್ಸು ಪರಿವರ್ತನೆ ಮಾಡುವ ಶಾಲೆಯಾಗಿ ದೇಶಕ್ಕೆ ಒಳ್ಳೆಯ ನಾಗರಿಕರನ್ನಾಗಿ ಮಾಡು ವುದರ ಜೊತೆಗೆ ವಿದ್ಯೆ ಮತ್ತು ಸಂಸ್ಕಾರ ನೀಡುವುದು ಬಹಳ ಮುಖ್ಯವಾದದು ಎಂದ ಅವರು ಮೂಡಲಗಿ ಪಟ್ಟಣದಲ್ಲಿ ಇಂತಹ ಶಾಲೆಗಳ ಅವಶ್ಯಕತೆಯನ್ನು ಸಂಕಲ್ಪ ಶಿಕ್ಷಣ ಸಂಸ್ಥೆ ಹೋಗಲ್ಲಾಡಿಸಿದೆ ಮೂಡಲಗಿ ಮತ್ತು ಸುತ್ತಮುತ್ತಲಿನ ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಶಿಗ್ಗಾಂವಿ ಸಿಪಿಐ ರಾಜಶೇಖರ ಪಾಟೀಲ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಸತ್ಯ, ವಿಶ್ವಾಸಾರ್ಹತೆ, ಆಂತರಿಕ ಪರಿಶುದ್ಧತೆ ಈ ಮೂರು ಗುಣಗಳನ್ನು ಹೊಂದಿದ್ದವರನ್ನು ಅಲುಗಾಡಿಸಲು ಸಾಧ್ಯವಿಲ್ಲ, ಮಕ್ಕಳು ಚಿಕ್ಕವರಿದ್ದಾಗಲೇ ಸರಿಯಾದ ಮಾರ್ಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಆಶ್ಯಕವಾಗಿದೆ ಎಂದ ಅವರು ಮಕ್ಕಳನ್ನು ದೈಹಿಕ, ಮಾನಸಿಕವಾಗಿ ಸದೃಢಗೊಳಿಸುವಲ್ಲಿ ಯುರೋ ಕಿಡ್ಸ್ ಸಂಸ್ಥೆಯ ಶ್ರಮಿಸುತ್ತದೆ ಎಂದರು.
ಪಟ್ಟಣದ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯ ಬೋಧ ಸ್ವಾಮೀಜಿ ನೂತನ ಯುರೋ ಕಿಡ್ಸ್ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯ ಮ ಶಾಲೆಯನ್ನು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ಗುಂಡಪಾ ಕಾಳಪ್ಪಗೋಳ ವಹಿಸಿದ್ದರು. ಸಮಾರಂಭವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಖುರ್ಷಾದ ನದಾಫ್, ಪ್ರಗತಿಪರ ರೈತರಾದ ಗಿರಿಗೌಡ ಪಾಟೀಲ, ಮಹಾಲಕ್ಷ್ಮೀ ಸೊಸೈಟಿ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಮಲ್ಲು ಕಲ್ಯಾಣಿ, ಯುರೋ ಕಿಡ್ಸ್ ಸಂಚಾಲಕಿ ರೇಖಾ ಅಂಗಡಿ ಸಂಚಾಲಕಿ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಕಾಳಪ್ಪಗೋಳ ಉಪಸ್ಥಿತರಿದ್ದರು. ಅರ್ಜುನ ಗಾಣಿಗೇರ ಸ್ವಾಗತಿಸಿದರು, ಪ್ರತೀಕ್ಷಾ ನೇಮಗೌಡ್ರ ನಿರೂಪಿಸಿ ವಂದಿಸಿದರು.