ಸಿಂದಗಿ; ಗ್ರಾಹಕರು ಅನ್ಯಾಯಕ್ಕೆ ಒಳಗಾದರೆ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹರೀಶ ಜಾಧವ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವಾಗ ಬಹಳ ಜಾಗರೂಕರಾಗಿ ವಸ್ತುವಿನ ಉತ್ಪಾದನೆಯ ಪ್ರಾರಂಭದ ದಿನಾಂಕ ಹಾಗೂ ಅದರ ಅಂತಿಮ ಬಳಕೆಯ ದಿನಾಂಕ ಕುರಿತು ಪರಿಶೀಲಿಸಬೇಕೆಂದು ಹೇಳಿ ಇಂದಿನ ಮಾರುಕಟ್ಟೆಯಲ್ಲಿ ಗ್ರಾಹಕನೇ ಒಡೆಯನಾಗಿದ್ದಾನೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಮಾತನಾಡಿ, ಗ್ರಾಹಕರು ಯಾವದೇ ಸರಕು ಸೇವೆಯನ್ನು ಖರೀದಿಸಿ ತೊಂದರೆಗೊಳಗಾದ ಗ್ರಾಹಕ ನ್ಯಾಯಾಲಯಕ್ಕೆ ಪೂರಕ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕೆಂದು ಗ್ರಾಹಕರಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಮಾತನಾಡಿ, ಪ್ರತಿಯೊಬ್ಬ ಗ್ರಾಹಕರು ಇಂದಿನ ಮಾರುಕಟ್ಟೆಯಲ್ಲಿ ವಸ್ತುಗಳ ಗುಣಮಟ್ಟ ಹಾಗೂ ಕಳಪೆ ವಸ್ತುಗಳನ್ನು ಹೇಗೆ ಗುರುತಿಸಬೇಕೆಂದು ಪ್ರಾತಿಕ್ಷತೆ ಮೂಲಕ ವಿವರಿಸಿದರು.
ದೇವರಹಿಪ್ಪರಗಿಯ ತಾಲೂಕು ದಂಡಾಧಿಕಾರಿ ಪ್ರಕಾಶ ಸಿಂದಗಿ ಮಾತನಾಡಿ, ಸ್ವತ: ತಾವು ಅನ್ಯಾಯಕ್ಕೆ ಒಳಗಾದಾಗ ಹೇಗೆ ಗ್ರಾಹಕ ನ್ಯಾಯಾಲಯದ ಮೊರೆಹೊಕ್ಕು ನ್ಯಾಯವನ್ನು ಪಡೆದುಕೊಂಡಿರುವದನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆಲಮೇಲ ತಾಲೂಕು ದಂಡಾಧಿಕಾರಿಗಳಾದ ವಿಜಯಕುಮಾರ ಕೆ , ಎಸ್ ಎಮ್ ಪಾಟೀಲ ವಕೀಲರು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ಇಲಾಖೆ ವಿದ್ಯಾರ್ಥಿಗಳಿಗೆ ದಿನ ಬಳಕೆಯ ವಸ್ತುಗಳು ಹಾಗೂ ತೂಕದ ಮಾಪನಗಳ ಕುರಿತು. ವಸ್ತು ಪ್ರದರ್ಶನವನ್ನು ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಲ್ಲಿ ಜಾಗ್ರತಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿರುವ ಹಲವು ಗ್ರಾಹಕರು ಭಾಗವಹಿಸಿದರು ಕಾಲೇಜಿನ ಪ್ರಾಧ್ಯಾಪಕರಾದ ಆರ್.ಬಿ ಜಹಾಗೀರದಾರ ,ಕೃಷ್ಣಾರೆಡ್ಡಿ, ಡಾ ಮಿರಾಜಪಾಶಾ, ಎಸ್ ಎಸ್ ಖಾದ್ರಿ, ಮುಜೀಬ್ ಅಹ್ಮದ ,ಡಾ ಹಣಮಂತ್ರಾಯ ಹರವಾಳ, ಸ್ವಾಗತ, ತಿಪ್ಪಣ್ಣ ದೊಡಮನಿ, ಆರ್ ಎಸ್ ಗಾಯಕವಾಡ ಡಾ ಎಸ್ ಪಿ ತಳವಾರ, ಎಸ್ ಬಿ ಜೋಶಿ, ಅನಿತಾ ಗುಂದಗಿ, ಶರಣಮ್ಮ ಬೀರಗೊಂಡ , ಡಾ ಗೀತಾ ರಜಪೂತ, ಕಾಳಮ್ಮ ಅರಕೇರಿ, ಡಾ ಲಕ್ಷೀಕಾಂತ ಹೂಗಾರ ಹಾಗೂ ಸಿಂದಗಿಯ ಆಹಾರ ಶಿರಸ್ತೆಧಾರ ಬಸವರಾಜ ಭೋವಿ, ಆಹಾರ ನಿರೀಕ್ಷಕಿ ವಿದ್ಯಾ ಹಿಪ್ಪರಗಿ ಹಾಗೂ ಆಲಮೇಲನ ಆಹಾರ ನಿರೀಕ್ಷಕ ರಮೇಶ ತಳವಾರ, ಆಹಾರ ಸುರಕ್ಷತಾ ಅಧಿಕಾರಿ ಚೇತನ ಲೋಣಿ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ವಿಜಯಪುರ ಶಶಿಕಾಂತ ಲಮಾಣಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೂ.ಎಸ್ ಎಸ್ ಹಳೇಮನಿ ಸ್ವಾಗತಿಸಿದರು. ಡಾ ವಾಯ್ ಸಿ.ಕೇಳಗೇರಿ ನಿರೂಪಿಸಿದರು. ಪ್ರೊ.ರಾಜೇಸಾಬ್ ವಂದಿಸಿದರು.