ಸಿಂದಗಿ: ಮಹಿಳೆಯರಿಗೆ ತಾಳ್ಮೆ ಬಹಳ ಮುಖ್ಯ. ಮಹಾ — ಇಳೆ ಮಹಿಳೆಯರು ಎಂದು ಕರೆಯುವರು ಇಳೆ ಎಂದರೆ ಭೂಮಿ ಮಹಿಳೆಯರನ್ನು ಭೂಮಿಗೆ ಹೋಲಿಸಿದ್ದಾರೆ. ಭೂಮಿ ತಾಯಿಯ ಪ್ರತಿ ರೂಪವೆ ಮಹಿಳೆ ಎಂದು ಶ್ರೀಮಠದ ಶ್ರೀಶ್ರೀ ತಪೋರತ್ನ ಮಹಾಲಿಂಗ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬೋರಗಿ ಗ್ರಾಮದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಹಾಗೂ ಬೋರಗಿ ವಿವಿಧ ಮಹಿಳಾ ಸ್ವ-ಸಂಘಗಳ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ದಿವ್ಯಾ ಸಾನ್ನಿಧ್ಯವಹಿಸಿ ಮಾತನಾಡಿ, ಮಹಿಳೆಯರು ಮೊದಲು ಶಾಂತರಾಗಿರಬೇಕು ಅಂದಾಗ ಮಾತ್ರ ಮನೆ ಶಾಂತವಾಗಿರುತ್ತದೆ. ಇದರಲ್ಲಿ ಅತ್ತೆ ಸೊಸೆ ತುಂಬಾ ತಾಳ್ಮೆಯಿಂದ ಇದ್ದರೆ ಮನೆಯಲ್ಲಿ ಯಾವುದೇ ಜಗಳ ಇರುವುದಿಲ್ಲ ನಿಮ್ಮ ಮನೆಯು ನಂದನ ವನವಾಗುತ್ತದೆ ನಂದ ಗೋಕುಲವಾಗುತ್ತದೆ. ತಾಳ್ವಿಕೆಗಿಂತ ತಪವು ಇಲ್ಲ ಕೇಳಬಲ್ಲವರಿಗೆ ಹೇಳುವರು ಸೊಲ್ಲ” ಆದ್ದರಿಂದ ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ ಆಚರಣೆಗಿಂತಲೂ ಹಿರಿತನದ್ದು ಮಹಿಳಾ ದಿನಾಚರಣೆ. ಈ ಮಹಿಳಾ ದಿನಾಚರಣೆ ಸಾರ್ಥಕ ಆಗಬೇಕಾದರೆ ಒಗ್ಗಟ್ಟು ತುಂಬಾ ಅವಶ್ಯಕ ಇದರ ಜೊತೆ ಜೊತೆಗೆ ಸಹನೆ ಕೂಡಾ ತುಂಬಾ ಅವಶ್ಯಕ ಎಂದರು.
ಅಧ್ಯಕ್ಷತೆ ವಹಿಸಿದ ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಂತಿಯಾ ಡಿಮೆಲ್ಲೊ ಮಾತನಾಡಿ, ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ ಎಂಬ ಧ್ಯೇಯ ವಾಕ್ಯದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮೊದಲ ಬಾರಿಗೆ ಕೂಲಿ ಚಳವಳಿಯ ಮೂಲಕ ಎಲ್ಲಾ ದೇಶಗಳಲ್ಲಿ ಹೊರಹೊಮ್ಮಿತು. ಮಹಿಳಾ ದಿನಾಚರಣೆಯ ಮೂಲಕ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಹೇಳಲು ಈ ದಿನ ಒಂದು ದೊಡ್ಡ ವೇದಿಕೆ ಯಾಗಿರುತ್ತದೆ. ಅಲ್ಲದೆ ದೇಶಕ್ಕೆ ಮಹಿಳಾ ಸಾಧಕರ ಕೊಡುಗೆಯನ್ನು ನೆನೆದು ಸಾರುವ ದಿನವಿದು.
1975 ರ ಮಾರ್ಚ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಅರಂಭಿಸಿದ್ದಾರೆ ಎಂದು ತಿಳಿಸಿದರು.
ತಾಲೂಕ ಪಂಚಾಯತಿಯ ನ್ಯಾಷನಲ್ ರೂರಲ್ ಲವ್‍ಲಿಹುಡ್ ಮಿಷನ್ ಮೆಲ್ವಿಚಾರಕಿ ಲಕ್ಷ್ಮೀ ಡಿ ಪಾಟೀಲ ಮಾತನಾಡಿ, ಸ್ವ-ಸಹಾಯ ಸಂಘಗಳಿಗೆ ವಿವಿಧ ಸ್ಕೀಮಗಳು ಬರುತ್ತವೆ, ಗ್ರಾಮ ಪಂಚಾಯಿತಿ ವತಿಯಿಂದ ಒಕ್ಕೂಟ ಇದೆ ಇದರಲ್ಲಿ ಪ್ರತಿಯೊಂದು ಗುಂಪಿನವರಿಗೆ ನಲವತ್ತರಿಂದ ಎಂಬತ್ತು ಸಾವಿರ ರೂಪಾಯಿಗಳು ಸಾಲ ಕೊಡಲಾಗುವುದು ಮತ್ತು ನಿಮ್ಮ ಮಕ್ಕಳಿಗೆ ಅನೇಕ ಕೌಶಲ್ಯ ತರಬೇತಿಗಳು ಇರುತ್ತವೆ ಆದ್ದರಿಂದ ಪ್ರತಿಯೊಬ್ಬರು ಸಂಘ ಮಾಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ತಾಲೂಕ ಬ್ಲಾಕ್ ಕಾಂಗ್ರೆಸ್ ವಕ್ತಾರ ಮಲ್ಲಿಕಾರ್ಜುನ್ ಸಾವಳಸಂಗ, ಶಿವಣ್ಣ ಪರಮಣ್ಣ ಕೊಟಾರಗಸ್ತಿ, ಕೃಷಿ ಮಾರುಕಟ್ಟಿ ಸಮೀತಿ ನಿರ್ದೇಶಕ ಬಸವರಾಜ ಚಾವರ, ಶ್ರೀಶೈಲ ಮಹಾಸ್ವಾಮಿಗಳು ಹಾಗೂ ಇತರೆ ಗ್ರಾಮಪಂಚಾಯತ್ ಸದಸ್ಯರು ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಪುರದಾಳ, ಬೋರಗಿ, ಕರವಿನಾಳ ತಾಂಡಾ ಹಾಗೂ ಖಾನಾಪೂರದ ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಶ್ರೀಮತಿ ತೇಜಸ್ವಿನಿ ಹಳ್ಳದಕೇರಿ ನಿರೂಪಿಸಿದರು, ಭಾಗ್ಯವಂತಿ ಸ್ವ-ಸಹಾಯ ಸಂಘದ ಸದಸ್ಯೆ ಮಡಿವಾಳಮ್ಮ ಸ್ವಾಗತಿಸಿದರು. ಮಲಕ್ಕಪ್ಪ ಹಲಗಿ ವಂದಿಸಿದರು.