ಮನೆ ಮನೆಗೂ ಹರ್ಷ ಹುಟ್ಟಲಿ, ಭಾರತ ಮಾತಾ ಕಿ ಜೈ – ಹರ್ಷನ ತಾಯಿ

Must Read

ಶಿವಮೊಗ್ಗ – ಪ್ರತಿಯೊಬ್ಬರೂ ಬಂದು ಸಾಂತ್ವನ ಹೇಳುತ್ತಿದ್ದಾರೆ. ಯಾರು ಅಂತ ಹೇಳೋದಕ್ಕಾಗಲ್ಲ. ಎಲ್ಲರ ನೆನಪಾಗಿ ಆತ ಉಳಿದುಕೊಂಡಿದ್ದಾನೆ. ಮನೆ ಮನೆಗೂ ಹರ್ಷ ಹುಟ್ಟಲಿ ಅಂತ ಕೇಳಿಕೊಳ್ಳುತ್ತೇನೆ. ಸಚಿವರಾದಿಯಾಗಿ ಎಲ್ಲರೂ ಬಂದು ಧೈರ್ಯ ಹೇಳುತ್ತಿದ್ದಾರೆ. ಪ್ರತಿಯೊಬ್ಬರಲ್ಲೂ ಹರ್ಷನನ್ನು ಕಾಣುತ್ತಿದ್ದೇವೆ. ಭಾರತ ಮಾತಾ ಕಿ ಜೈ ಎಂದು ಹರ್ಷನ ತಾಯಿ ನುಡಿದರು.

ಶಿವಮೊಗ್ಗದಲ್ಲಿ ಮತಾಂಧ ಮುಸ್ಲಿಮರಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಹರ್ಷ ಅವರ ಮನೆಗೆ ಕೆ ಎಸ್ ಈಶ್ವರಪ್ಪ, ಬಸವರಾಜ ಪಾಟೀಲ ಯತ್ನಾಳ ಭೇಟಿ ಕೊಟ್ಟು ಸಾಂತ್ವನ ಹೇಳಿದರು. ಅಲ್ಲದೆ ಹರ್ಷನ ಕುಟುಂಬಸ್ಥರಿಗೆ ೫ ಲಕ್ಷ ರೂ. ಗಳ ನೆರವನ್ನೂ ನೀಡಿದರು.

ಹತ್ಯೆಯಾದ ಹರ್ಷನ ಕುಟುಂಬಕ್ಕೆ ರಾಜ್ಯ ಅಲ್ಲದೆ ಇಡೀ ದೇಶಾದ್ಯಂತದಿಂದ ನೆರವಿನ ಮಹಾಪೂರ ಹರಿದು ಬರುತ್ತಿದ್ದು ಹರ್ಷನ ತಾಯಿ, ತಂದೆ ಸಹೋದರಿಗೆ ಸಾಂತ್ವನ ಹಾಗೂ ಧೈರ್ಯ ಕೂಡ ಹೇಳುತ್ತಿದ್ದದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹರ್ಷನ ತಾಯಿ ಹಾಗೂ ಸಹೋದರಿ, ಎಲ್ಲರಲ್ಲೂ ಹರ್ಷನನ್ನೇ ಕಾಣುತ್ತಿದ್ದೇವೆ. ಮನೆ ಮನೆಗೂ ಹರ್ಷ ಹುಟ್ಟಿಬರಲಿ ಎಂದು ಬೇಡಿಕೊಳ್ಳುತ್ತೇವೆ ಎಂದರು.

ಇತ್ತ ರಾಜ್ಯ ಸರ್ಕಾರ ಕೂಡ ಹರ್ಷನ ಹತ್ಯೆಯ ಬಗ್ಗೆ ತನಿಖೆ ನಡೆಸಲು ಎನ್ಐಎ ಗೆ ನೀಡಲು ಗಂಭೀರವಾಗಿ ಆಲೋಚನೆ ಮಾಡುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದೆ.

ಹರ್ಷನಿಗೆ ಹಲವು ಬಾರಿ ಕೆಲ ಹುಡುಗಿಯರು ಕರೆ ಮಾಡಿದ್ದು ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಆದರೆ ಹರ್ಷನ ಮೊಬೈಲ್ ಕಾಣೆಯಾಗಿದ್ದು ತನಿಖೆಗೆ ಸ್ವಲ್ಪ ಅಡಚಣೆಯಾದಂತಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group