ಮತದಾರರ ಒಂದೊಂದು ಮತವೂ ಅಮೂಲ್ಯವಾದುದು

Must Read

ಸಿಂದಗಿ: ಕಾಂಗ್ರೆಸ್ ಸರ್ಕಾರ ತಂದ ಅನ್ನ ಭಾಗ್ಯ, ಕೃಷಿ ಭಾಗ್ಯ,ಕ್ಷೀರ ಭಾಗ್ಯ, ವಿದ್ಯಾಸಿರಿ, ಕೃಷಿಯಂತ್ರ ಭಾಗ್ಯ ಯೋಜನೆಗಳು ಜಾರಿಗೆ ಬಂದಿದ್ದು ಕಾಂಗ್ರೆಸ್ ಪಕ್ಷದಿಂದಲ್ಲ ನೀವು ಚುನಾಯಿಸಿದ ಮತದಿಂದ ಈ ಎಲ್ಲಾ ಭಾಗ್ಯಗಳು ಯಾವುದೇ ಜಾತಿ ಮತ ಪಂಥಕ್ಕೆ ಸೇರಿದ ಭಾಗ್ಯಗಳಲ್ಲ ಸರ್ವ ಕರ್ನಾಟಕ ಜನತೆ ಕಾಂಗ್ರೆಸ್‌ ಪಕ್ಷಕ್ಕೆ ನೀಡಿದ ಅಮೂಲ್ಯವಾದ ಮತದಿಂದ ಈ ಭಾಗ್ಯಗಳು ಕಾರಣ ಬಡವರ ಉಳಿವಿಗಾಗಿ ಕಾಂಗ್ರೆಸ ಪಕ್ಷಕ್ಕೆ ಮತ ನೀಡಿ ಎಂದು ಮಾಜಿ ಸಚಿವ ಹಾಲಿ ಶಾಸಕ ಪ್ರಿಯಾಂಕ ಖರ್ಗೆ ಹೇಳಿದರು.

ಕ್ಷೇತ್ರದ ಮೋರಟಗಿ ಗ್ರಾಮದ ಜೈ ಭೀಮ ಕಾಲೊನಿಯಲ್ಲಿ ಸಿಂದಗಿ ವಿಧಾನ ಸಭೆ ಉಪ ಚುನಾವಣೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತ ಯಾಚಿಸಿ ಮಾತನಾಡಿ, ಡಾ. ಅಂಬೆಡ್ಕರರು ಬರೆದ ಸಂವಿಧಾನದ ಆಧಾರದ ಮೇಲೆ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದವರಿಗೆ ಈ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು ಬಡವರಿಗಾಗಿ ಈಗಿನ ಬಿಜೆಪಿ ಸರ್ಕಾರ ಬಡವವ ದಿನ ದಲಿತರ ಕೂಲಿ ಕಾರ್ಮಿಕರ ವಿರೋಧಿ ಸರ್ಕಾರವಾಗಿದೆ. ಅವನತಿಯ ದಾರಿ ಹಿಡಿದಿದೆ ಹೀಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಅಶೋಕ ಮನಗೂಳಿ ಅವರನ್ನು ಗೆಲ್ಲಿಸಬೇಕು ಎಂದು ಕೇಳಿಕೊಂಡರು.

ನಂತರ ಮಾತನಾಡಿದ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ದ್ರುವ ನಾರಾಯಣ ನಿಮ್ಮ ಒಂದು ಮತ ಅಮೂಲ್ಯವಾದದು ಯಾಕೆಂದರೆ ನಾನು ಹಿಂದೆ ಒಂದೆ ಮತದಿಂದ ಶಾಸಕನಾಗಿ ಆರಿಸಿ ಬಂದಿದ್ದೇನೆ ಆದ್ದರಿಂದ ನಿಮ್ಮ ಒಂದೊಂದು ಮತ ಅಶೋಕ ಮನಗೂಳಿ ಅವರನ್ನು ವಿಜಯದ ಕಡೆ ತೆಗೆದುಕೊಂಡು ಹೋಗುತ್ತದೆ. ದುರಾಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾದರೆ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ಚಲಾಯಿಸಿ ಎಂದರು.

ಇದೆ ಸಂದರ್ಭದಲ್ಲಿ ನರಸಿಂಗಪ್ರಸಾದ ತಿವಾರಿ, ಮಹಿಬೂಬ ಕಣ್ಣಿ, ಎಮ್.ಟಿ.ಸಿಂಗೆ, ನಿಂಗನಗೌಡ ಪಾಟಿಲ, ಪ್ರಕಾಶ ಅಡಗಲ್, ರಮೇಶ ನಡುವಿನಕೇರಿ, ಭೂತಾಳಿ ವಸ್ತಾರಿ ಸೇರಿದಂತೆ ಇತರರು ಇದ್ದರು.

ವರದಿ: ಪಂಡಿತ್ ಯಂಪೂರೆ, ಸಿಂದಗಿ

Latest News

ವಿದ್ಯಾರ್ಥಿಗಳು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು – ಸಂತೋಷ ಬಂಡೆ

ಸಿಂದಗಿ: ಇಂದಿನ ಯುವ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ...

More Articles Like This

error: Content is protected !!
Join WhatsApp Group