ಮೂಡಲಗಿ: ಗ್ರಾಮೀಣ ಭಾಗಗಳಲ್ಲಿ ಜಾನಪದ ಕಲೆಗಳು ಕಲಾಸಕ್ತರಿಂದ ಪೋಷಿಸಲ್ಪಟ್ಟು ಉಳಿದುಕೊಂಡಿವೆ. ಯಾವ ಕಾಲಘಟ್ಟದಲ್ಲೂ ಜಾನಪದ ಕಲೆಗಳು ನಾಶವಾಗಿಲ್ಲ. ಆದರೆ ಅವುಗಳ ಸಂರಕ್ಷಣೆಗೆ ಎಲ್ಲರೂ ಬದ್ಧರಾಗಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಶನಿವಾರದಂದು ತಾಲೂಕಿನ ಜೋಕಾನಟ್ಟಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಶ್ರೀ ಶಿವಾನಂದ ಭಾರತಿಸ್ವಾಮಿ ಜಾನಪದ ಕಲಾ ಯುವ ಸಂಘ, ನೆಹರು ಯುವ ಕೇಂದ್ರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಜರುಗಿದ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸಿನಿಮಾ ಕಲಾವಿದರಿಗೆ ಸಿಗುವ ಗೌರವ ಹಾಗೂ ಮನ್ನಣೆಗಳು ಜಾನಪದ ಕಲಾವಿದರಿಗೆ ದೊರಕುತ್ತಿಲ್ಲ. ಆದರೂ ಕಲೆಯನ್ನು ಜೀವನವನ್ನಾಗಿ ಮುಂದುವರಿಸುತ್ತಿರುವ ಕಲಾವಿದರಿಗೆ ಎಂದಿಗೂ ಗೌರವ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಬತ್ತಿಹೋಗಿಲ್ಲ. ಜಾನಪದ ಕಲೆಗಳು ಗ್ರಾಮೀಣ ಭಾಗದಲ್ಲಿ ಹುಟ್ಟಿರುವುದರಿಂದ ಕಲಾವಿದರ ಜೀವನಮಟ್ಟ ಸುಧಾರಣೆಯಾಗುವಂತೆ ಗ್ರಾಮೀಣ ಭಾಗದ ಯುವಕರು ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಜನರಲ್ಲಿ ಜಾನಪದ ಕಲೆಗಳ ಉಳಿವಿಗಾಗಿ ಜಾಗೃತಿ ಮೂಡಿಸಬೇಕೆಂದರು.
ಜಾನಪದ ಕಲಾತಂಡಗಳಿಂದ ಜಾನಪದ ತತ್ತ್ವಪದ, ಜಾಗೃತಿಗೀತೆ, ಗೀಗಿಪದ, ಲಾವಣಿ ಹೀಗೆ ಅನೇಕ ಜಾನಪದ ಕಲೆಗಳು ಇಂದಿನ ಟಿವಿ ಮಾಧ್ಯಮಗಳ ಹಾವಳಿಯಿಂದ ನಶಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರಿಂದ ಗ್ರಾಮೀಣ ಭಾಗದ ಯುವಕರು ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಿದೆ. ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಜಾನಪದ ಕಲಾ ತಂಡಗಳಿಗೆ ಪ್ರಶ್ತಸಿ ನೀಡಿ ಗೌರವಿಸಲಾಯಿತು.
ವೇದಿಯಲ್ಲಿ ಬೆಳಗಾವಿ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ರಾಮಚಂದ್ರ ಕಾಂಬಳೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಸಿದ್ದಣ್ಣ ದುರದುಂಡಿ, ಮಿಲೀಂದ್ರ ಸಂಗನ್ನವರ, ಕನಾಟಕ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಶಿವಾನಂದ ಮಾದರ, ಉಪಾಧ್ಯಕ್ಷ ರಾಜು ಗಾರಗೋಟ, ಸಿದ್ಧಾರೂಢ ಜಾನಪದ ಮಹಿಳಾ ಸಂಘದ ಅಧ್ಯಕ್ಷೆ ಯಮನವ್ವ ಮಾದರ, ಕಾರ್ಯದರ್ಶಿ ಲಕ್ಷ್ಮೀ ಜೋಕಾನಟ್ಟಿ ಹಾಗೂ ಗ್ರಾಮದ ಮುಖಂಡರಾದ ಸಿದ್ದಪ್ಪ ದೊಡ್ಡಶಿವಪ್ಪಗೋಳ, ಭೀಮಪ್ಪ ಮಾದರ, ಪಾಂಡು ದೊಡಮನಿ, ಸಿದ್ದಲಿಂಗಪ್ಪ ಕಂಬಳಿ, ಮಂಜುನಾಥ ಹೆಳವರ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.