ಸಿಂದಗಿ: ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಅಂದಾಗ ಜೀವನದ ಪಯಣದಲ್ಲಿ ಯಶಸ್ಸು ಕಾಣಲು ಸಾಧ್ಯ ಅಲ್ಲದೆ ಗುರುವಿನ ಕೃಪೆ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ. ಗುರುವಿನಂತಹ ಕರುಣಾ ಮೂರ್ತಿ ಜಗತ್ತಿನಲ್ಲಿ ಎಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಯಂಕಂಚಿ ಹಿರೇಮಠದ ಶ್ರೀ ಷ.ಬ್ರ. ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಯಂಕಂಚಿ ಹಿರೇಮಠದ ಲಿಂ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯರ ೪೮ ನೇಯ ಪುಣ್ಯಾರಾಧನೆಯ ನಿಮಿತ್ತ ನವಲಗುಂದದ ಶ್ರೀ ಅಜಾತ ನಾಗಲಿಂಗ ಸ್ವಾಮಿಗಳ ಪುರಾಣ ಪ್ರವಚನ ಹಾಗೂ ತುಲಾಭಾರ ಕಾರ್ಯಕ್ರಮ ನೇತೃತ್ವವಹಿಸಿ ಆಶೀರ್ವಚನ ನೀಡಿ ಜೀವನದಲ್ಲಿ ಬಡತನ ಇದ್ದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿದರೆ ಪಾಲಕರ ಜೀವನ ಸಾರ್ಥಕತೆ ಹೊಂದಲು ಸಾಧ್ಯವಿದೆ ಎಂದರು.
ಶಹಾಪೂರ ವಿಶ್ವಕರ್ಮ ಸರಸ್ವತಿ ಪೀಠದ ಪ ಪೂ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಪುರಾಣ ಪ್ರವಚನ ನೀಡಿ ಮಾತನಾಡಿ ಹರ ಮುನಿದರೆ ಗುರು ಕಾಯುವನು ಎಂಬಂತೆ ಗುರುವಿಗೆ ಅಗ್ರಸ್ಥಾನವನ್ನು ನೀಡಲಾಗಿದೆ. ಆದ್ದರಿಂದ ವಿದ್ಯಾರ್ಥಿ ಜೀವನದಿಂದಾಗಿ ಸಕಲ ಕಾಲದಲ್ಲಿಯೂ ಗುರುವಿನ ಮಾರ್ಗದರ್ಶನದಲ್ಲಿ ನಡೆಯಿರಿ ಎಂದರು.
ಯಂಕಂಚಿ ನಿಂಗಣ್ಣ ವಿಶ್ವಕರ್ಮ, ಪಡದಳ್ಳಿ ಕಲ್ಲಯ್ಯಸ್ವಾಮಿ .ಮೋರಟಗಿ ರವಿ ವಿಭೂತಿ ಸಂಗೀತ ಸೇವೆ ನಡೆಸಿ ಕೊಟ್ಟರು. ಶಂಕರಗೌಡ ಸಾಹೇಬಗೌಡ ಬಿರಾದಾರ, ಬಂದಾಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಸಮಿತಿ ಅಧ್ಯಕ್ಷ ನಿಂಗನಗೌಡ ಸಾ ಬಿರಾದಾರ ಹಾಗೂ ವಿಶ್ರಾಂತ ಪೋಲೀಸ ಇಲಾಖೆಯ ಎ ಎಸ್ ಆಯ್ ಮಡಿವಾಳಪ್ಪಗೌಡ ಗು ಬಿರಾದಾರ, ಮಾತೊಶ್ರೀ ಶ್ರೀಮತಿ ದೊಡ್ಡಮ್ಮ ಕೊಣ್ಣೂರ, ಗುತ್ತಪ್ಪಗೌಡ ಬೆಕಿನಾಳ, ಯತಿರಾಜ ಶಿಕ್ಷಣ ಸಂಸ್ಥೆ ಸಾಸಬಾಳ, ಶೇಖರಗೌಡ ಪಾಟೀಲ, ನಾನಗೌಡ ಪಾಟೀಲರ ಕುಟುಂಬಸ್ಥರು ಹಾಗೂ ಇನ್ನೂ ಹಲವಾರು ಭಕ್ತರು ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರಿಗೆ ತುಲಾಭಾರ ನೆರವೇರಿಸಿದರು.

