ಮೂಡಲಗಿ : ಜನಪ್ರತಿನಿಧಿಗಳು ತಮ್ಮನ್ನು ಆಯ್ಕೆ ಮಾಡಿದ ಮತದಾರ ಪ್ರಭುಗಳಿಗೆ 5 ವರ್ಷದಲ್ಲಿ ತಾವು ಮಾಡಿದ ಕಾರ್ಯಕ್ರಮಗಳ ವರದಿ ನೀಡಬೇಕು ಎಂಬ ಸಂಕಲ್ಪದಡಿ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆ ಪಾರಂಭಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ಮಂಗಳವಾರ ಅರಭಾವಿ ಮತಕ್ಷೇತ್ರದ ಮುನ್ಯಾಳ ಗ್ರಾಮ ಮರಡಿಸಿದ್ದೇಶ್ವರ ಸಭಾಭವನದಲ್ಲಿ ಆಯೋಜಿಸಿದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 525 ಗ್ರಾಮ ಪಂಚಾಯತಗಳಿದ್ದು, ಎಲ್ಲಾ ಗ್ರಾಮಗಳಿಗೂ ಈ ಯಾತ್ರೆಯ ಗುರಿ ಮುಟ್ಟಿಸುವ ಪ್ರಯತ್ನವಾಗಿದೆ ಎಂದರಲ್ಲದೇ, ಕೇಂದ್ರ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನರಿಗೆ ತಿಳಿಹೇಳುವದರ ಜೊತೆಗೆ ಅವುಗಳು ಜನರಿಗೆ ಎಷ್ಟರ ಮಟ್ಟಿಗೆ ಫಲಪ್ರಧವಾಗಿವೇ ಹಾಗೂ ಇನ್ನುಳಿದ ಫಲಾನುಭವಿಗಳು ಸರ್ಕಾರದ ಯೋಜನೆಗಳನ್ನು ಪಡೆಯಲು ಮುಂದೆ ಬರಬೇಕೆಂದು ಕರೆ ನೀಡಿದರು.
ಇತ್ತಿಚಿನ ದಿನಗಳಲ್ಲಿ ರೈತರೆಲ್ಲರ ಬಳಿ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಇದ್ದರು ಸಹ ಸರ್ಕಾರದ ಯಾವ ಯೋಜನೆಗಳ ಬಗ್ಗೆಯೂ ಮಾಹಿತಿ ಪಡಯದೆ ಇರುವದು ಕಳವಳಕಾರಿಯಾದ ಅಂಶವಾಗಿದೆ, ಮಣ್ಣು ಪರಿಕ್ಷೆಯ ಮೂಲಕ ಯಾವ ಬೆಳೆ ಬರುತ್ತದೆ ಎಂದು ಯೋಜನೆ ಇದ್ದರು ಪದೇ ಪದೇ ಕಬ್ಬು ಬೆಳೆಯುವದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ ಇದರ ಬಗ್ಗೆ ಮಾಹಿತಿ ಪಡೆಯದೆ ಇರುವದು ವಿಷಾದನೀಯ ಎಂದರು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಕಿಸಾನ್ ಮಾನ್ ಧನ್ ಯೋಜನೆ, ಪಿಎಂ ಫಸಲ್ ಬಿಮಾ ಯೋಜನೆ, ಪಿಎಂ ಕೃಷಿ ಸಿಂಚಾಯಿ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ರಸಗೊಬ್ಬರ ಸಬ್ಸಿಡಿ, ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಪಿಎಂ ಉಜ್ವಲಾ ಯೋಜನೆ, ಆಯುಷ್‌ಮಾನ್ ಕಾರ್ಡ್ ವಿತರಣೆ, ಜಲ್ ಜೀವನ್ ಮಿಷನ್, ಪಿಎಂ ಮುದ್ರಾ ಯೋಜನೆ, ಪಿಎಂ ಜೀವನ್ ಜ್ಯೋತಿ, ಪಿಎಂ ಸುರಕ್ಷ ಭೀಮಾ ಯೋಜನೆ, ಆಟಲ್ ಪಿಂಚಣಿ ಯೋಜನೆ, ಸ್ವಸಹಯ ಗುಂಪುಗಳಿಗೆ ಸಾಲ ಯೋಜನೆ, ಪಿಎಂ ವಿದ್ಯಾರ್ಥಿ ವೇತನ, ಸೇರಿದಂತೆ ಅನೇಕ ಯೋಜನೆಗಳನ್ನ ಜಾರಿ ಮಾಡಿದ್ದಾರೆ ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.
ನಿಜವಾದ ರೈತ ತನ್ನ ಕಾಯಕದಲ್ಲಿ ಯಾವದೇ ಫಲಾಪೇಕ್ಷೆಯಿಲ್ಲದೆ ಸದಾ ನಿರಂತರವಾಗಿ ದುಡಿಯುತ್ತಿದ್ದು ರೈತರಿಗೆ ಈ ಯೋಜನೆಗಳನ್ನು ಮುಟ್ಟಿಸಬೇಕು, ಆಯುಷ್‌ಮಾನ್ ಕಾರ್ಡಿನಡಿ ದೇಶದ ಜನತೆಗೆ 5 ಲಕ್ಷದ ವರಗೆ ಆರೋಗ್ಯದ ಲಾಭ ಪಡೆಯಬೇಕು ಮತ್ತು ಸರ್ಕಾರದ ಆಸ್ಪತ್ರೆಯಲ್ಲೂ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ, ಜನಧನ ಖಾತೆಯಲ್ಲಿ 450 ರೂಗಳನ್ನು ತುಂಬಿದರೆ ಖಾತೆದಾರನಿಗೆ ಏನಾದರು ಅನಾಹುತವಾದರೆ 4 ಲಕ್ಷ ರೂ.ಗಳು ಮನೆ ಬಾಗಿಲಿಗೆ ಬರುತ್ತದೆ ಎಂದರು.
ಮಾಜಿ ತಾ ಪಂ ಸದಸ್ಯ ಆನಂದರಾವ ನಾಯ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಪ್ರಕಾಶ ಮಾದರ, ಮಲ್ಲಪ್ಪ ನೇಮಗೌಡರ, ಡಾ. ಬಿ.ಎಂ. ಪಾಲಭಾಂವಿ, ಮಹಾಂತೇಶ ಕುಡಚಿ, ಮಹಾನಿಂಗ ವಂಟಗೋಡಿ, ಮಹಾದೇವ ಮಸರಗುಪ್ಪಿ, ಮೂಡಲಗಿಯ ಕೆನರಾ ಬ್ಯಾಂಕ ವವ್ಯಸ್ಥಾಪಕ ಗಂಗೇಶನಾಥ ತಿವಾರಿ, ಡಾ. ದೀಪಾ ಮಾಚಪ್ಪನ್ನವರ. ಗ್ರಾ.ಪಂ ಅಧ್ಯಕ್ಷೆ ದುರ್ಗವ್ವ ಜಂಬಗಿ.ಉಪಾಧ್ಯಕ್ಷ ಉದಯ ಸನದಿ. ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್ ಬಿ ತಡಸನ್ನವರ.ಗ್ರಾಮದ ಮುಖಂಡರಾದ ಹಣಮಂತ ಗೊಡಿಗೌಡರ, ಸಂಗಪ್ಪ ಸೂರನ್ನವರ. ರಾಜು ಹಿರೆಹೋಳಿ ಸೇರಿದಂತೆ ರೈತರು, ಮಹಿಳೆಯರು, ಕಾರ್ಯಕರ್ತರು ಉಪಸ್ಥಿತರಿದ್ದರು.