ನಾಡೋಜ ಡಾ.ಮಹೇಶ್ ಜೋಷಿ
ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್
ಬೆಂಗಳೂರು ಹಾಗೂ
ಟಿ.ಎಸ್.ನಾಗಾಭರಣ
ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು
ಇವರಿಗೆ,
ಸನ್ಮಾನ್ಯರೆ,
ವಿಷಯ: ಕನ್ನಡ ಧ್ವಜಕ್ಕೆ ಬೆಳಗಾವಿಯಲ್ಲಿ ಬೆಂಕಿ ಹಚ್ಚಿ ಅವಮಾನಿಸಿರುವ ಪುಂಡರ ಗಡೀಪಾರಿಗೆ ಒತ್ತಾಯಿಸಲು ಮನವಿ
ನ್ಯಾಯಾಲಯದಲ್ಲಿರುವ ಗಡಿ ವಿವಾದವನ್ನು ಕೆದಕುತ್ತಿರುವ, ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿರುವ ಬೆಳಗಾವಿಯ ಕನ್ನಡ ವಿರೋಧಿಗಳಿಗೆ ಕನ್ನಡ ನಾಡಿನಿಂದ ಗಡೀಪಾರು ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳ ವತಿಯಿಂದ ಬೆಳಗಾವಿಯಲ್ಲಿ ಕನ್ನಡ ಸಾಹಿತಿಗಳ ,ಚಿಂತಕರ ಮಹಾಸಭೆ ನಡೆಸಿ ಈ ಕನ್ನಡ ವಿರೋಧಿ ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಮೈಸೂರಿನ ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳನ್ನು ಒತ್ತಾಯಿಸುತ್ತೇವೆ.
ಯಾಲಯದಲ್ಲಿರುವಯಚಂದ್ರರು ಇರುವವರೆಗು ಕನ್ನಡ ನಾಡಿಗೆ ಸೇರಿದ್ದು. ಕನ್ನಡ ನಾಡಿನ ಅನ್ನ, ನೀರು ಸೇವಿಸಿ ಕನ್ನಡನಾಡಿನ ಮಣ್ಣಿನಲ್ಲಿ ಆಶ್ರಯ ಪಡೆದು ಕನ್ನಡದ ಧ್ವಜವನ್ನು ಸುಟ್ಟವರು ನಾಡು-ನುಡಿಯ ದ್ರೋಹಿಗಳು.
ಅಂತಹವರಿಗೆ ಉಗ್ರ ಶಿಕ್ಷೆ ವಿಧಿಸಬೇಕು.ಸದ್ಯದಲ್ಲೇ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಳ ವತಿಯಿಂದ ಬೆಳಗಾವಿಯಲ್ಲಿ ಕನ್ನಡಿಗರ ಬೃಹತ್ ಸಮಾವೇಶ ನಡೆಸಿ, ಕನ್ನಡನಾಡಿನ ವಿರೋಧಿಗಳಿಗೆ ಸೂಕ್ತ ಪ್ರತ್ಯುತ್ತರ ನೀಡಬೇಕು. ಈ ಬಗ್ಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ
ಮಹೇಶ್ ಜೋಷಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂಬುದು ನಮ್ಮ ಮನವಿ.
ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೈಸೂರು