ನ್ಯಾಯಾಧೀಕರಣ ತೀರ್ಪಿನಂತೆ ಜಲಾಶಯದ ನೀರಿನ ಮಟ್ಟ ಹೆಚ್ಚಿಸಿ – ರೈತ ಮುಖಂಡ ಅರವಿಂದ ಕುಲಕರ್ಣಿ

Must Read

ಸಿಂದಗಿ: ನ್ಯಾ, ಬೃಜೇಶಕುಮಾರ ನೇತೃತ್ವದ ೩ನೇ ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಲಾಲ್‌ಬಹುದೂರ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು ೫೧೯.೬೦ ರಿಂದ ೫೨೪-೨೫೬ ಮೀ ಗೆ ನೀರು ನಿಲ್ಲಿಸಲು ಕ್ರಮ ಕೈಕೊಳ್ಳಬೇಕು ಹಾಗೂ ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಅಖಂಡ ಕರ್ನಾಟಕ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ್ಯಾ. ಬೃಜೇಶಕುಮಾರ ನೇತೃತ್ವದ ೩ನೇ ನ್ಯಾಯಾಧೀಕರಣ ೨೦೧೦ರಲ್ಲಿ ತೀರ್ಪು ನೀಡಿತ್ತು ೨೦೧೩ರಲ್ಲಿ ಸ್ಪಷ್ಟೀಕರಣ ತೀರ್ಪು ನೀಡಿ ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ ನಿಲ್ಲಿಸಲು ಅನುಮತಿ ನೀಡಿ ೧೫ ವರ್ಷಗಳೇ ಕಳೆದರು ಇಲ್ಲಿಯವರೆಗೆ ಜಲಾಶಯದ ನೀರಿನ ಮಟ್ಟ ಹೆಚ್ಚಿಸಲು ಕೇಂದ್ರ ಸರಕಾರ ಅದಿಸೂಚನೆ ಹೊರಡಿಸಲು ಮುತುವರ್ಜಿ ವಹಿಸುತ್ತಿಲ್ಲ. ಮಹಾರಾಷ್ಟ್ರ ಸರಕಾರದ ತಕರಾರು ನೆಪ ಮುಂದಿಟ್ಟುಕೊಂಡು ಅನವಶ್ಯಕ ಕಾಲಹರಣ ಮಾಡುತ್ತ ಕೇಂದ್ರ ಸರಕಾರ ರಾಜ್ಯ ಸರಕಾರದ ಕಡೆ ಬೆರಳು ತೋರಿಸುತ್ತ ಕುಂಟು ನೆಪ ಹೇಳುತ್ತಿದೆ. ಇದರಿಂದ ಉತ್ತರ ಕರ್ನಾಟಕದ ಮಹಾತ್ವಾಕಾಂಕ್ಷಿ ಯೋಜನೆ ಹಳಿ ತಪ್ಪಿದ್ದು ವಿಜಯಪುರ -ಬಾಗಲಕೋಟ ಅವಳಿ ಜಿಲ್ಲೆಯ ರೈತರು ಆಡಳಿತ ಸರಕಾರಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆಲಮಟ್ಟಿ ಅಣೆಕಟ್ಟಿನ ಕೃಷ್ಣಾ ನದಿ ನೀರು ರೈತರ ಕಣ್ಣೀರಿನ ಕಥೆಯಾಗಿದ್ದು ಜನಪ್ರತಿನಿಧಿಗಳ ಹಾಗೂ ಆಧಿಕಾರಿಗಳ ಪಾಲಿಗೆ ಅಕ್ಷಯ ಪಾತ್ರೆಯಾಗಿದೆ ಇಂಥ ಬ್ರಹತ್ ಯೋಜನೆಗಳಿಂದಲೇ ಸರಕಾರ ಬದುಕುವಂತಾಗಿದ್ದು ಜನಪ್ರತಿನಿಧಿಗ:ಳು ಮತ್ತು ಅಧಿಕಾರಿಗಳ ಸ್ವಾರ್ಥಕ್ಕೆ ಬಲಿಯಾಗಿ ಈ ಯೋಜನೆ ನೆನೆಗುದಿಗೆ ಬಿದ್ದು ನಲಗುವಂತಾಗಿದೆ ಆಣೆಕಟ್ಟು ನಿರ್ಮಾಣಕ್ಕೆ ಅವಳಿ ಜಿಲ್ಲೆಯ ರೈತರು ಲಕ್ಷಾಂತರ ಎಕರೆ ಜಮೀನು, ಮನೆ ಕಳೇದುಕೊಂಡು ನಿರಾಶ್ರಿತರಾಗಿ ಹೊರರಾಜ್ಯಗಳಿಗೆ ಗುಳೆ ಹೋಗಿದ್ದಾರೆ. ತ್ಯಾಗ ಮಾಡಿದ ರೈತರಿಗೆ ನೀರು ಕೊಡದೇ ಹಂತಗಳ ನೆಪ ಹೇಳುತ್ತ ರೈತರ ಕೈಗೆ ಚಿಪ್ಪು ಕೊಟ್ಟಿದೆ ಎಂದು ಆರೋಪಿಸಿದರು.

ಸದ್ಯ ಇದ್ದ ೫೧೯ ರಿಂದ ೫೨೪ಕ್ಕೆ ಹೆಚ್ಚಿಸಲು ಅವಳಿ ಜಿಲ್ಲೆಯ ರೈತರಿಗೆ ಸಮರ್ಪಕ ನೀರು ಪೂರೈಸುವ ಈ ಯೋಜನೆಯನ್ನು ಪೂರ್ಣಗೊಳಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ ಕೇಂದ್ರ ತನ್ನ ಸುಪರ್ಧಿಗೆ ತೆಗೆದುಕೊಂಡು ಯೋಜನೆ ಪೂರ್ತಿಗೊಳಿಸಬೇಕು ಪ್ರಸ್ತುತ ಇರುವ ಅಣೆಕಟ್ಟು ೫೧೯.೬೦ ಎತ್ತರದಿಂದ ೧೨೩-೦೮೧ ಟಿಎಂಸಿ ನೀರು ರಾಜ್ಯ ಸರಕಾರದ ಪಾಲಾಗಿದ್ದು ಇದರಲ್ಲಿ ವಿಜಯಪುರ, ಬಾಗಲಕೋಟ, ಕೊಪ್ಪಳ, ಕಲಬುರ್ಗಿ, ಯಾದಗಿರ, ರಾಯಚೂರು ಜಿಲ್ಲೆಗಳು ನೀರು ಉಪಯೋಗಿಸುತ್ತಿವೆ ಇನ್ನೂ ೫೧೯ರಿಂದ ೫೨೪ಕ್ಕೆ ಹೆಚ್ಚಳವಾದರೆ ೧೩೦ ಟಿಎಂಸಿ ನೀರು ಹೆಚ್ಚುವರಿಯಾಗಿ ಲಭಿಸಲಿದ್ದು ಇದರಲ್ಲಿ ೮೦ ಟಿಎಂಸಿ ನೀರು ವಿಜಯಪುರ-ಬಾಗಲಕೋಟ ನೀರಾವರಿ ಯೋಜನೆಗಳಿಗೆ ಸಿಗಲಿದೆ ಕಾರಣ ಸಂತ್ರಸ್ಥರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರಕಾರಗಳು ಯೋಜನೆಗಳನ್ನು ಸಂಪೂರ್ಣ ಅನುಷ್ಠಾನಕ್ಕೆ ತರಲು ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group