ನಮಸ್ಕಾರ ಆತ್ಮೀಯ ಬೆಂಗಳೂರಿನ ನಾಗರಿಕರಲ್ಲಿ……
ಒಂದು ಪ್ರಮುಖ ವಿಚಾರ ಹಂಚಿಕೊಳ್ಳಲೇಬೇಕಾದದ್ದು ನನ್ನ ಪ್ರಮುಖ ಕರ್ತವ್ಯ…….
ಇಂದು ಬೆಳ್ಳಿಗ್ಗೆ 20.12.2025 ರ ಇಂದು ಕುಕ್ಕೆ ಸುಬ್ರಮಣ್ಯ ದಿಂದ ಬೆಂಗಳೂರು ನಗರದ ಮೆಜೆಸ್ಟಿಕ್ ಅನ್ನು ರಾತ್ರಿ 2.45 ಗಂಟೆಗೆ ತಲುಪಿ, ನಾನು ನನ್ನ ಹೆಂಡತಿ ಮತ್ತು ಮಗಳು – ನಗರದ ಮೆಜೆಸ್ಟಿಕ್ ನಲ್ಲಿ ಆಟೋ ನಂಬರ್ KA02 AK4880 ದಲ್ಲಿ ಪ್ರಯಾಣ ವನ್ನು ನಮ್ಮ ಮನೆಗೆ ಬನಶಂಕರಿ 3ನೇ ಹಂತದಲ್ಲಿ ಇರುವ ಮನೆಗೆ ಆಟೋ ಚಾಲಕ ರ ಬಳಿ ಹೇಳಿದಾಗ ಡಬ್ಬಲ್ ಮೀಟರ್ ಹಣ ಕೊಡಬೇಕು ಬಿಡುತ್ತೇನೆ ಎಂದರು,
ಅದಕ್ಕೆ ಒಪ್ಪಿ ಪ್ರಯಾಣ ಆರಂಭ ಮಾಡಿದರೆ ಮನೆ ಬಳಿ ಬರುವ ಹೊತ್ತಿಗೆ ಆಟೋ ಮೀಟರ್ RS. 333/-ಆಗಿತ್ತು, ಆದರೆ ವಾಸ್ತವ ಆಗಿ ಮೀಟರ್ ದರ ಆಗುವುದು ರೂಪಾಯಿ 175/-ರಿಂದ ಅಂದಾಜು ರೂಪಾಯಿ 200/-
ಆದರೆ ಚಾಲಕ ನಮ್ಮ ಬಳಿ ರೂಪಾಯಿ 670/-ಕೊಡಿ ಅಂದರು. ಆಟೋ ಒಳಗೆ ಮೊಬೈಲ್ ಟಾರ್ಚ್ ಹಾಕಿ ಹಣ ತೆಗೆಯಲು ಹೊರಟ ನಮಗೆ ಮೊಬೈಲ್ ಟಾರ್ಚ್ ಆನ್ ಮಾಡಬೇಡಿ ಮಗು ಇದೆ ಗ್ಯಾಸ್ ಬ್ಲಾಸ್ಟ್ ಆಗುತ್ತದೆ, ನಾನು ಲೈಟ್ ಹಾಕುತ್ತೇನೆ ಎಂದು ಹೇಳಿ ಲೈಟ್ ಹಾಕದೆ, ದಬ್ಬಾಳಿಕೆ ಮಾಡಿ ಬೇಗ ಬೇಗ ಹಣ ಕೊಡಿ ಎಂದು ಹೆದರಿಸಿ ನಾವು ಕೊಟ್ಟ ರೂಪಾಯಿ 500/- ರ ನೋಟನ್ನು ಚಾಲಾಕಿ ತನ ಮಾಡಿ ರೂಪಾಯಿ 100/ ಮಾಡಿ ರೂಪಾಯಿ 600/-ಅನ್ನು ಆಟೋ ಒಳಗೆ ಕುಳಿತುಕೊಂಡು ನೀವು ಕೊಟ್ಟಿದ್ದು 200/-ರೂಪಾಯಿ ಎಂದು ಹೇಳಿ ನಮ್ಮ ಬಳಿ 2ಬಾರಿ ಹಾಗೇ ಮಾಡಿ ಒಂದು ಸಾವಿರ ರೂಪಾಯಿ ಕಿತ್ತುಕೊಂಡು ಮತ್ತೇ ದಬ್ಬಾಳಿಕೆ ಮಾಡಿದ ಚಾಲಕ
ಆಗ ನಾನು ನನ್ನ ಹೆಂಡತಿ ಆಟೋ ದಿಂದ ಕೆಳಗೆ ಇಳಿಯಿರಿ ಹಣ ಕೊಡುತ್ತದೆ ಎಂದು ತಿಳಿಸಿ ಆಟೋ ಚಾಲಕನಿಗೆ ರೂಪಾಯಿ 670/-ಕೊಟ್ಟು ನಿಮಗೆ ಒಳ್ಳೆಯದು ಆಗುವುದಿಲ್ಲ ಎಂದು ಹೇಳಿ ವಿಧಿಯಿಲ್ಲದೆ ರಾತ್ರಿ 3ಗಂಟೆ ಸಮಯ, ನಿರ್ಜನ, ರಸ್ತೆಯಲ್ಲಿ ಯಾರು ಇಲ್ಲ ನಾವೇ 3 ಜನ ಅವನ ದಬ್ಬಾಳಿಕೆ ಗೆ ನಾನು ನನ್ನ ಹೆಂಡತಿ ಹಾಗು ನನ್ನ ಮಗಳ ಪ್ರಾಣ ಉಳಿಸಿ ಕೊಂಡರೆ ಸಾಕು ಎಂದು ಯೋಚನೆ ಮಾಡಿ ಅವನಿಗೆ ರೂಪಾಯಿ 1000 ಮತ್ತು 670 ಕೊಟ್ಟು ಮನೆಯ ಕಡೆ ಹೆಜ್ಜೆ ಹಾಕಿದೆವು….
ನಾಗರಿಕರೇ ಇಂತಹ ದುಷ್ಟ ಆಟೋ ಚಾಲಕರು ಇದ್ದಾರೆ ದಯವಿಟ್ಟು ಸಿಲಿಕಾನ್ ಸಿಟಿಯ ನಾಗರಿಕರು ಹುಷಾರು….
ವಂದನೆಗಳೊಂದಿಗೆ
ಅನಂತ ಕಲ್ಲಾಪುರ
ಈ ಬಗ್ಗೆ ಅನಂತ ಕಲ್ಲಾಪುರ ಅವರು ಬೆಂಗಳೂರು ಸಿಟಿ ಪೊಲೀಸರಿಗೆ ಟ್ವೀಟ್ ಮೂಲಕ ದೂರು ನೀಡಿದ್ದು ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುವರು ಎಂಬುದನ್ನು ಕಾದು ನೋಡಬೇಕಾಗಿದೆ.

