ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಮುಖ್ಯ

Must Read

ಸಿಂದಗಿ: ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಜೊತೆಗೆ ಸಂಸ್ಕಾರವನ್ನು ನೀಡಬೇಕು ಅಂದಾಗ ಮಾತ್ರ ಉತ್ತಮ ನಾಗರಿಕನ್ನಾಗಿ ಸಮಾಜದಲ್ಲಿ ಬದುಕು ಕಟ್ಟುಕೊಳ್ಳಲು ಸಹಾಯವಾಗುವುದು, ಕೇವಲ ಪಠ್ಯ ಚಟುವಟಿಕೆ ಮಾತ್ರವಲ್ಲ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಬೇಕು ಎಂದು ಆರ್. ಡಿ. ಪಾಟೀಲ್ ಪ್ರಾಧ್ಯಾಪಕರಾದ ಶಿವರಾಜ ಕುಂದಗೋಳ ಹೇಳಿದರು

ಪಟ್ಟಣದ ಹೊರವಲಯದ ಭೀಮಾ ಯುನಿರ್ವಸಲ್ ಸೆಂಟ್ರಲ್ ಶಾಲೆಯಲ್ಲಿ ನಡೆದ ಯುತ್ ಕಾರ್ನಿವಾಲ್  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲೆಯ ಅಧ್ಯಕ್ಷ ವಿಠ್ಠಲ ಜಿ, ಕೊಳೂರ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲಾ ತರಹದ ಮಾನಸಿಕ ಹಾಗೂ ದೈಹಿಕ ಬೆಳೆವಣಿಗೆಗೆ ಇಂತಹ ಕಾರ್ಯಕ್ರಮಗಳು ಮಾತ್ರ ಮಗುವಿನ ಕಲಿಕೆಗೆ ಸಹಕಾರವಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ  ಕಾರ್ಯಕ್ರಗಳಾದ ನೃತ್ಯ, ಮಿಮಿಕ್ರಿ, ಫುಡ್ ಕಾರ್ನಿವಾಲ್, ಮಹಾನ್ ನಾಯಕರ ವೇಷಧಾರಿ ಪಾತ್ರ, ಮಡಕೆ ಮೇಲೆ ಕರಕುಶಲ ಚಿತ್ರಗಳು, ಬಳಕೆಗೆ ಬಾರದ ವಸ್ತುಗಳನ್ನು ಇನ್ನೊಂದು ರೀತಿಯಲ್ಲಿ ಉಪಯೋಗಮಾಡಿಕೊಳ್ಳುವುದು. ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಸಹನಿರ್ದೇಕರಾದ  ಡಾ. ಎಂ.ಎಂ.ಪಡಶೆಟ್ಟಿ, ಜಿ.ಕೆ. ಪಡಗಾನೂರ, ಶ್ರೀಮಂತ್ ಮಲ್ಲೆದ, ಭೀಮಾಶಂಕರ ತಾರಾಪುರ, ಪ್ರಶಾಂತ ಕಮತಗಿ, ದತ್ತು ಮಾವೂರ, ಶರಣು ಮಾವೂರ, ಶಾಂತು ಕುಂಬಾರ ಸೇರಿದಂತೆ ಇದ್ದರು.

ಶಾಲೆಯ ಪ್ರಾಂಶುಪಾಲೆ ಶಾಂತಾ ದಸರಿ ಸ್ವಾಗತಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group