Homeಸುದ್ದಿಗಳುಸ್ಪರ್ಧಾತಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆ ಅಲಂಕರಿಸಿ; ಉಪನ್ಯಾಸಕ ಕುಂಬಾರ

ಸ್ಪರ್ಧಾತಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆ ಅಲಂಕರಿಸಿ; ಉಪನ್ಯಾಸಕ ಕುಂಬಾರ

ಸಿಂದಗಿ; ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಹೀಗಾಗಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಕಲಕೇರಿ ಶ್ರೀ ಜಗಜ್ಯೋತಿ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ ಎಂ ಕುಂಬಾರ ಸಲಹೆ ನೀಡಿದರು.

ಮೋರಟಗಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಜೀವನದಲ್ಲಿ ಯಾರೇ ಕೈ ಬಿಟ್ಟರು ಪುಸ್ತಕ ನಿಮ್ಮನ್ನು ಕೈ ಬಿಡುವುದಿಲ್ಲ ಪುಸ್ತಕವನ್ನು ಪ್ರೀತಿಸಿ ಶಿಕ್ಷಕರನ್ನು ಗೌರವಿಸಿ ವಿದ್ಯಾಮಾತೆ ನಿಮ್ಮನ್ನು ಯಾವತ್ತು ಕೈ ಬಿಡುವುದಿಲ್ಲ ವಿದ್ಯಾರ್ಥಿಗಳಿಗೆ ಸಮಯದ ಪ್ರಜ್ಞೆ ಇರಬೇಕು ಜೀವನದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಕನಸನ್ನು ಕಟ್ಟಿಕೊಳ್ಳಿ ಎಂದರು.

ಪ್ರಾಚಾರ್ಯ ಡಾ. ವ್ಹಿ ಸಿ ಗೋಲಾ ಮಾತನಾಡಿ, ದೇಶದಲ್ಲಿ ಗ್ರಾಮೀಣ ಮಟ್ಟದ ಬಡ ವಿದ್ಯಾರ್ಥಿಗಳು ಅತೀ ಹೆಚ್ಚು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಈ ಮೂರು ವರ್ಷದ ಪದವಿಯಲ್ಲಿ ಕಠಿಣ ಪರಿಶ್ರಮ ಪಟ್ಟರೆ ಸುಂದರವಾದ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗುತ್ತದೆ. ಆತ್ಮ ಸಾಕ್ಷಿಯಾಗಿ ಗುರಿಯನ್ನು ಇಟ್ಟುಕೊಂಡು ಮುನ್ನುಗ್ಗಿದರೆ ಕನಸಿನ ಬಾಗಿಲು ತಾನಾಗಿ ತೆರೆಯುತ್ತದೆ ಆ ನಿಟ್ಟಿನಲ್ಲಿ ತಾವೆಲ್ಲರು ಪಾಲಕರ ಮನ ನೋಯಿಸದೆ ಶಿಕ್ಷಕರ ಹಾದಿಯಲ್ಲಿ ನಡೆದು ಉತ್ತಮ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಸಂಸ್ಥೆಯ ಕೀರ್ತಿ ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರಮನ್ ಬಿ ಆಯ್ ಮಸಳಿ, ಕಾರ್ಯದರ್ಶಿ ಎಂ ಎಸ್ ಪಾಟೀಲ, ಆಡಳಿತಾಧಿಕಾರಿ ಬಿ ಎಸ್ ಪಾಟೀಲ, ಸಂಯೋಜಕ ಆರ್ ವಾಯ್‌ ಕುಂಬಾರ, ಉಪನ್ಯಾಸಕಿಯರುಗಳಾದ. ಎಸ್ ಎಂ ಹರನಾಳ, ವ್ಹಿ ಎಸ್ ಶಹಾಪೂರ, ಸಿಬ್ಬಂದಿ ವರ್ಗ ಹಾಗೂ ಸಮಸ್ತ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group