spot_img
spot_img

ಸಿಂದಗಿ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ಜಾತ್ರಾ ಮಹೋತ್ಸವ

Must Read

spot_img
- Advertisement -

ಸಿಂದಗಿ: ಪಟ್ಟಣದ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ೨೯ ನೇ ಜಾತ್ರಾಮಹೋತ್ಸವದ ನಿಮಿತ್ತ ಜ.೧೨ರಿಂದ ಜ.೨೨ವರೆಗೆ ಶ್ರೀ ರೇವಣಸಿದ್ದೇಶ್ವರ ಮಹಾಪುರಾಣ ಪ್ರವಚನ ಕಾರ್ಯಕ್ರಮ ಪ್ರಾರಂಭೋತ್ಸವ ಹಾಗೂ ಜ.೨೩ರಂದು ಬೆಳಿಗ್ಗೆ ೯ ಗಂಟೆಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆ ಮತ್ತು ಬೆಳಿಗ್ಗೆ ೧೧.೩೦ ಗಂಟೆಗೆ ಧರ್ಮಸಭೆ ನಡೆಯಲಿದೆ ಕಾರಣ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಮಹಾಸ್ವಾಮಿಗಳು ಕರೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಶ್ರೀಗಳು, ಜ.೧೨ರಿಂದ ಜ.೨೨ರವರೆಗೆ ಸಂಜೆ ೬.೩೦ ಗಂಟೆಗೆ ಶ್ರೀಮಠದ ಆವರಣದಲ್ಲಿ ಶ್ರೀ ರೇವಣಸಿದ್ದೇಶ್ವರರ ಮಹಾಪುರಾಣ ಪ್ರವಚನ ಕಾರ್ಯಕ್ರಮ ನಡೆಯುವುದು. ೧೯ ರಂದು ಬೆಳಿಗ್ಗೆ ೧೦ ಗಂಟೆಗೆ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಕಣ್ಣಿನ ತಪಾಷಣೆ ಶಿಬಿರ. ಜ.೨೨ರಂದು ರಂದು ಸಂಜೆ ಸದ್ಗುರು ಶಿವಯೋಗಿ ಡಾ.ಚಂದ್ರಶೇಖರ ಮಹಾಸ್ವಾಮಿಗಳು ಜಾಹಗೀರದಾರ ಅವರ ೫೪ನೆಯ ವರ್ಷðದ ಅನುಷ್ಠಾನದ ಸುವರ್ಣ ಮಹೋತ್ಸವ, ಹಾಗೂ ಗುರುವಂದನಾ. ಮತ್ತು ರಾತ್ರಿ ೧೦ ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ. ಜ.೨೩ ರಂದು ಮದ್ಯಾಹ್ನ ೩ ಗಂಟೆಗೆ ಕಲಬುರ್ಗಿಯ ಅದ್ಯುತ,ದ ಬ್ಯಾಂಡ ವತಿಯಿಂದ ಆದಿಶೇಷ ಆರಾಧನೆ, ರಾತ್ರಿ ೧೦ ಗಂಟೆಗೆ ಹುಣಚೇರಾಯ ಮುತ್ಯಾ ಮರತೂರ ಇವರಿಂದ ಭಜನಾ ಮತ್ತು ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ಧ್ವನಿ ಸುರುಳಿ ಮತ್ತು ತ್ರೆöÊಮಾಸಿಕ ಪತ್ರಿಕೆ ಹಾಗೂ ಕ್ಯಾಲೇಂಡರ ಬಿಡುಗಡೆ ಜರುಗುವುದು ಎಂದು ಹೇಳಿದ್ದಾರೆ.

ಜ.೨೩ರ ಬೆಳಗಿನ ಬ್ರಾಹ್ಮೀ ಮುಹೂರ್ತದ ೫ ಗಂಟೆಗೆ ಆಶ್ಲೇಷ ನಾಗಪೂಜೆ ನಡೆಯಲಿದೆ. ಈ ವೇಳೆ ಕಾಳಸರ್ಪದೋಷ, ಕುಜದೋಷ ಸಮಸ್ಯೆಗಳಿಗೆ ಮುಕ್ತಿ ಕೊಡಲಾಗುತ್ತಿದ್ದು, ಆಸಕ್ತರು ಮುಂಚಿತವಾಗಿ ಶ್ರೀಮಠದಲ್ಲಿ ತಮ್ಮ ಹೆಸರನ್ನು ನೊಂದಾಯಿಸಬೇಕು ಹೆಚ್ಚಿನ ಮಾಹಿತಿಗಾಗಿ ೯೮೮೬೫೯೫೬೬೬, ೯೯೧೬೫೫೯೫೬೫ ಸಂಪರ್ಕಿಸುವAತೆ ತಿಳಿಸಿದ್ದಾರೆ.

- Advertisement -

ಶ್ರೀಮಠದ ಜಾತ್ರಾ ಮಹೋತ್ಸವ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಶ್ರೀಮಠದ ಭಕ್ತರು ಪಾಲ್ಗೊಂಡು ಜಗದ್ಗುರುಗಳ ಆಶೀರ್ವಾದ ಪಡೆದು ಪುನೀತರಾಗಬೇಕು ಎಂದು ಹೇಳಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಿರಂತರ ನೃತ್ಯ ಶಾಲೆ ಮಕ್ಕಳಿಂದ ನೃತ್ಯ ಸಂಭ್ರಮ ೨೦೨೫

   ನಿರಂತರ ಸ್ಕೂಲ್ ಆಫ್ ಡ್ಯಾನ್ಸ್ ೨೦೧೨ರಲ್ಲಿ ಪ್ರಾರಂಭವಾಗಿ ಬಹಳಷ್ಟು ಕಲಾವಿದರಿಗೆ ಭರತನಾಟ್ಯ ಹಾಗೂ ಕಥಕ್ ನೃತ್ಯ ಶಿಕ್ಷಣವನ್ನ ನೀಡುತ್ತಾ ಬರುತ್ತಿರುವಂತಹ ಬೆಂಗಳೂರಿನ ನೃತ್ಯ ಸಂಸ್ಥೆಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group