ಸಾಲಬಾಧೆಯಿಂದ ರೈತ ಮಹಿಳೆ ನೇಣಿಗೆ ಶರಣು

Must Read

ಬೀದರ – ಸಾಲದ ಬಾಧೆ ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ತಾಲೂಕಿನ ಖಾಶೆಂಪೂರ್ ಗ್ರಾಮದಲ್ಲಿ ನಡೆದಿದೆ.

ಗಂಗಮ್ಮ(55) ಎಂಬ ರೈತ ಮಹಿಳೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಜಿಬಿ, ಪಿಕೆಪಿಎಸ್ ಬ್ಯಾಂಕ್, ಕೈಸಾಲ, ಸಂಘದ ಸಾಲ ಸೇರಿ ಸುಮಾರು 3 ಲಕ್ಷ ದವರೆಗೂ ಸಾಲ ಮಾಡಿಕೊಂಡಿದ್ದರು. ಅತಿವೃಷ್ಟಿಯಿಂದ 2 ಎಕರೆ ಜಮೀನಿನಲ್ಲಿ ಬೆಳೆಸಿದ್ದ ಬೆಳೆ ಕೂಡ ಹಾನಿಯಾಗಿತ್ತೆನ್ನಲಾಗಿದೆ.

ಮತ್ತೊಂದೆಡೆ ಬ್ಯಾಂಕ್ ಸಿಬ್ಬಂದಿಯಿಂದ ಸಾಲ ಮರುಪಾವತಿಗಾಗಿ ನಿರಂತರ ಕಿರುಕುಳ ಹಿನ್ನೆಲೆಯಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಸ್ಥಳಕ್ಕೆ ಮನ್ನಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group