- Advertisement -
ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ
ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ. ಗ್ರಾಮದ ಜಮೀನಿನಲ್ಲಿರುವ ಬೇವಿನಗಿಡಕ್ಕೆ ಕೇಬಲ್ ವಯರ್ ನಿಂದ ಜನವರಿ ೧೪ರ ರಾತ್ರಿ ೮ಗಂಟೆಯಿಂದ ಜನವರ ೧೭ರ ಮುಂಜಾನೆ ೧೧ ಗಂಟೆಯ ನಡುವಿನ ಅವಧಿ ನೇಣು ಹಾಕಿಕೊಂಡಿದ್ದಾನೆ ಎಂದು ದೂರಿನಲ್ಲಿ ಮೃತನ ಸಹೋದರ ತಿಳಿಸಿದ್ದಾರೆ.
ಊರಿನಲ್ಲಿ ಮನೆಯ ಸಾಲ ೩ ಲಕ್ಷ ರೂಪಾಯಿ, ಮಾಡಬಾಳದ ಪಿಕೆಪಿಎಸ್ ಬ್ಯಾಂಕ್ ನಲ್ಲಿ ೫೦ ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದನಂತೆ. ಇದನ್ನು ತೀರಿಸಲು ಆಗದೆ ಮಾನಸಿಕವಾಗಿ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಲ್ಲಿ ಯಾವುದೇ ಸಂಶಯ ಇಲ್ಲವೆಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.