ರೈತ ಮಹಿಳಾ ಸಮಾವೇಶ

Must Read

ಮುನವಳ್ಳಿ: ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲ್ಲಿ ಜೇಂಟ್ಸ ಗ್ರುಪ್ ಆಫ್ ರಾಣಿ ಚೆನ್ನಮ್ಮ ಸಹೇಲಿ ಹಾಗೂ ಜೇಂಟ್ಸ ಗ್ರುಪ್ ಆಫ್ ಮುನವಳ್ಳಿ ಇªರ ಸಹಯೋಗದಲ್ಲಿ ರವಿವಾರ ಬೆಳಿಗ್ಗೆ ೧೦ ಗಂಟೆಗೆ ರೈತ ದಿನಾಚರಣೆ ಅಂಗವಾಗಿ ರೈತ ಮಹಿಳಾ ಸಮಾವೇಶ ಹಾಗೂ ಪ್ರೌಢಶಾಲಾ ಮಕ್ಕಳಿಂದ ರೈತ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮುನವಳ್ಳಿ-ಭಂಡಾರ ಹಳ್ಳಿ ಸೋಮಶೇಖರಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ಸಹೇಲಿಯ ಅಧ್ಯಕ್ಷರಾದ ಜ್ಯೋತಿ ಚನ್ನಪ್ಪ ಯಲಬುರ್ಗಿ ವಹಿಸಿರುವರು. ಉದ್ಘಾಟನೆಯನ್ನು ಸವದತ್ತಿ ತಾಲೂಕಿನ ಕಾಂಗ್ರೇಸ್ ಪಕ್ಷದ ಮುಖಂಡರಾದ ಪಂಚನಗೌಡ ದ್ಯಾಮನಗೌಡರು ನೆರವೇರಿಸುವರು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಮಹಿಳೆ. ಕವಿತಾ. ಮಿಶ್ರಾ. ಹಾಗೂ ಮುನವಳ್ಳಿಯ ಮಹಾಲಕ್ಷ್ಮೀ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾದ ಶ್ರೀಮತಿ. ಶಾರದಾ.ಪಂ. ದ್ಯಾಮನಗೌಡ್ರ. ನೀಡುವರು. ಅತಿಥಿಗಳಾಗಿ ಮುನವಳ್ಳಿಯ ಜೇಂಟ್ಸ ಗ್ರುಪ್‌ನ ಅಧ್ಯಕ್ಷರಾದ ಬಸವರಾಜ.ಅಂಗಡಿ. ಪುರಸಭೆ ಮುಖ್ಯಾಧಿಕಾರಿಗಳಾದ ಮಹೇಂದ್ರ ತಿಮ್ಮಾಣಿ. ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಎಸ್.ಎ. ಸಿದ್ದಣ್ಣ. ಕೃಷಿ ಅಧಿಕಾರಿಗಳಾದ ಎಸ್. ಎಲ್. ದೇಸಾಯಿ ಆಗಮಿಸುವರು ಎಂದು ಜೇಂಟ್ಸ ಗ್ರುಪ್ ಆಫ್ ರಾಣಿ ಚೆನ್ನಮ್ಮ ಸಹೇಲಿ ಹಾಗೂ ಜೇಂಟ್ಸ ಗ್ರುಪ್ ಆಫ್ ಮುನವಳ್ಳಿ ಪ್ರಕಟಣೆಯಲ್ಲಿ ತಿಳಿಸಿರುವರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group