ಬೀದರ – ವಕ್ಫ್ ಸಚಿವ ಜಮೀರ ಅಹ್ಮದ, ಉಸ್ತುವಾರಿ ಸಚಿವ ಖಂಡ್ರೆ, ಸಚಿವ ರಹೀಂ ಖಾನ್ ಈ ಮಂತ್ರಿಗಳು ನಿಮ್ಮ ಗ್ರಾಮಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯರಿ ಎಂದು ಬಿಜೆಪಿ ಮುಖಂಡ ಶಶಿ ಹೊಸಳ್ಳಿ ಗುಡುಗಿದ್ದಾರೆ.
ರೈತರ ಜಮೀನು ಕಬಳಿಸುತ್ತಿರುವ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆ ಮಾಡಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ನ ಸಚಿವರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು.
ಸಾವಿರಾರು ಜನ ರೈತರು, ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ ಕಚೇರಿಗೆ ನುಗ್ಗಲು ಯತ್ನಿಸಿದರು. ಅವರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ತಹಶಿಲ್ದಾರರು ಸ್ಥಳಕ್ಕೇ ಬಂದು ಮನವಿ ಸ್ವೀಕಾರ ಮಾಡಿದರು.
ಶಶಿ ಹೊಸಳ್ಳಿ ಮಾತನಾಡುತ್ತ, ಸಚಿವರು ಯಾವುದೇ ಗ್ರಾಮಕ್ಕೆ ಬಂದರೆ ಅವರನ್ನು ಒಳಗೆ ಬಿಡಬೇಡಿ, ಚಪ್ಪಲಿಯಿಂದ ಹೊಡೆಯಿರಿ ಯಾಕೆಂದರೆ ಯಾವ ರೈತರ ಮತ ಪಡೆದು ಇವರು ಆರಿಸಿ ಬಂದಿದ್ದಾರೋ ಆ ರೈತರು ಸಂಕಷ್ಟದಲ್ಲಿ ಇದ್ದಾಗ ಮಾತನಾಡುತ್ತಿಲ್ಲ. ಜಮೀರ ಅವರೇ ರೈತರ ಜಮೀನುಗಳು ನಿಮ್ಮಪ್ಪನಿಗೆ ಸಂಬಂಧಿಸಿಲ್ಲ. ಅದು ರೈತರ ಅಪ್ಪ, ಅಜ್ಜನಿಗೆ ಸಂಬಂಧಿಸಿದ್ದು. ನಿಮ್ಮಪ್ಪನೇ ಬಂದರೂ ರೈತರ ಒಂದಿಂಚೂ ಜಮೀನು ಕಬಳಿಸಲು ಬಿಡುವುದಿಲ್ಲ ಎಂದು ಗುಡುಗಿದರು.
ವರದಿ : ನಂದಕುಮಾರ ಕರಂಜೆ, ಬೀದರ