Homeಸುದ್ದಿಗಳುರೈತರು - ಪೊಲೀಸ್ ಅಧಿಕಾರಿ ಮಾತಿನ ಜಟಾಪಟಿ ; ಯಾರದು ಸರಿ ಯಾರದು ತಪ್ಪು...

ರೈತರು – ಪೊಲೀಸ್ ಅಧಿಕಾರಿ ಮಾತಿನ ಜಟಾಪಟಿ ; ಯಾರದು ಸರಿ ಯಾರದು ತಪ್ಪು…

ಬೀದರ – ಅನುಮತಿ ಇಲ್ಲದೆ ಪ್ರತಿಭಟನೆಗೆ ಮುಂದಾಗಿದ್ದಲ್ಲದೆ ರಸ್ತೆ ಬಂದ್ ಮಾಡಲು ಮುಂದಾದ ರೈತರನ್ನು ತಡೆಯಲು ಹೋದ ಪೊಲೀಸ್ ಅಧಿಕಾರಿಯ ಜೊತೆಗೆ ರೈತರು ಮಾತಿನ ಚಕಮಕಿ ನಡೆಸಿ, ಪೊಲೀಸ್ ಅಧಿಕಾರಿಗೇ ಆವಾಜ್ ಹಾಕಿದ ಘಟನೆ ನಡೆಯಿತು.

ಪ್ರಸಂಗದ ಹಿನ್ನೆಲೆ ರೈತರು ಹೇಳಿದ ಬೇರೆ ಕಥೆ ಇದೆ. ಬೀದರ್ ನಿಂದ ಔರಾದ್ ಬಿ ಹೆದಾರಿ ನಿರ್ಮಾಣ ಮಾಡುವಾಗ ಸ್ವಾಧೀನಪಡಿಸಿಕೊಂಡ ರೈತರ ಜಮೀನಿಗೆ ಪರಿಹಾರ ನೀಡುವಂತೆ ಸುಮಾರು ದಿನಗಳಿಂದ ಹೋರಾಟದ ಮೂಲಕ ಸಚಿವರಿಗೆ ಸಂಸದರಿಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ರೈತರಿಗೆ ಪರಿಹಾರ ನೀಡದೆ ರಸ್ತೆ ಕಾಮಗಾರಿ ಮುಂದುವರಿಸಿದ್ದರಿಂದ ರೈತರು ಇಂದು ಜನವಾಡ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿ ಔರಾದ್ ಬೀದರ್ ರೈತರು ಪ್ರತಿಭಟನೆ ಮಾಡುತ್ತಿರುವಾಗ ಜನವಾಡ ಪೊಲೀಸ್ ಅಧಿಕಾರಿ ಬಂದು ರೈತರನ್ನು ಪ್ರಶ್ನೆ ಮಾಡಿದರು. ರಸ್ತೆ ಬಂದ್ ಮಾಡಲು ಪರವಾನಿಗೆ ಇರದಿದ್ದರಿಂದ ಪೊಲೀಸ್ ಅಧಿಕಾರಿ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು ನಮಗೆ ಪ್ರತಿಭಟನೆ ಮಾಡಬಾರದು ಎಂದು ಪೊಲೀಸರು ಆವಾಜ್ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ರೈತರು ಹೇಳಿಕೆ ಪ್ರಕಾರ ಈ ಸಂದರ್ಭದಲ್ಲಿ ಏಕಾ ಏಕಿ ಬಂದ ಜನವಾಡ ಪಿಎಸ್ಐ ಇವರು ರೈತರ ಸಮಸ್ಯೆ ವಿಚಾರಿಸದೆ ತಾವು ಪಿಎಸ್ಐ ಅನ್ನುವುದನ್ನು ಮರೆತು ಏಕವಚನದಲ್ಲಿ ರೈತರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಅವಹೇಳನಕಾರಿಯಾಗಿ ಮಾತನಾಡಿದಾರೆ ಎಂದರು. ನಾವು ನಮ್ಮ ಸಮಸ್ಯೆ ಜಿಲ್ಲಾಧಿಕಾರಿಗೆ ಹೇಳಿದ್ದೇವೆ ಅವರ ಆದೇಶ ಬರುವರೆಗೂ ರಸ್ತೆ ಕಾಮಗಾರಿ ನಿಲಿಸುವಂತೆ ಹೇಳಿದ್ದೇವೆ ಎಂದರೂ ಕೇಳದೆ, ಪಿಎಸ್ಐ, ನಿನ್ನ ಮೇಲೆ ಜೆಸಿಬಿ ಹಾಕುವುದಾಗಿ ಹೆದರಿಸಿದ್ದಾರೆ ಎಂದು ರೈತರೊಬ್ಬರು ಆರೋಪ ಮಾಡಿದ್ದಾರೆ . ಶ್ರೀಮಂತ್ ಬಿರಾದಾರ್ ರೈತ ತಾಲೂಕಾ ಅಧ್ಯಕ್ಷರು, ರಮೇಶ ಗಾಜಲೇ, ಬಸವರಾಜ್ ಮೈಲಾರೆ, ವಿಶ್ವನಾಥ್ ಧಾರಣೆ ಮಾತನಾಡಿ.

ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಗೂಂಡಾ ವರ್ತನೆ ತೋರಿದ ಪಿಎಸ್ಐ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣ ಕುರಿತು ಹಿರಿಯ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾ ಆಡಳಿತ ಯಾವ ರೀತಿ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

RELATED ARTICLES

Most Popular

error: Content is protected !!
Join WhatsApp Group